ಬಿ. ಎಸ್.‌ ಶೈಲಜಾ

Home

ಶೈಲಜಾ ಅವರು ಭೌತವಿಜ್ಞಾನದಲ್ಲಿ ಎಮ್.ಎಸ್ಸಿ.ಯನ್ನು ಬೆಂಗಳೂರುವಿಶ್ವವಿದ್ಯಾಲಯ ಹಾಗೂ ವೋಲ್ಫ್-ರೇಯೆ ಬೈನರಿ ಸ್ಟಾರ್ಸ್ ವಿಷಯದ ಮೇಲೆ ಪಿ.ಎಚ್.ಡಿ ಯನ್ನು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯಲ್ಲಿ ಪಡೆದಿದ್ದಾರೆ.ಇವರ ಆಸಕ್ತಿಯುತ ವಿಷಯಗಳೆಂದರೆ ನೋವೆ, ವಿಶಿಷ್ಟನಕ್ಷತ್ರಗಳು ಹಾಗೂ ಧೂಮಕೇತುಗಳು. ಇವರು ನಿಯತಕಾಲಿಕೆಗಳಲ್ಲಿ 130 ಸಂಶೋಧನಾಪ್ರಬಂಧಗಳನ್ನು ಹಾಗೂ 17 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಖಗೋಳಶಾಸ್ತ್ರದ ಇತಿಹಾಸದ ಕುರಿತು ಅತ್ಯಂತ ಆಸಕ್ತಿ ಹೊಂದಿದ್ದು, ಸದ್ಯದಲ್ಲಿ ಶಿಲಾಶಾಸನಗಳು, 17ನೇ ಶತಮಾನದ ಹಸ್ತಪ್ರತಿಗಳ ಅನುವಾದ ಮತ್ತು ವಿಶ್ಲೇಷಣೆ, ಸ್ಮಾರಕಗಳು,ಕಲಾಕೃತಿಗಳು ಮತ್ತು ದೇವಾಲಯಗಳ ಖಗೋಳೀಯ ಅಂಶಗಳು– ಈ ವಿಷಯಗಳ ಕುರಿತು ಅಧ್ಯಯನ ಮುಂದುವರೆಸಿದ್ದಾರೆ.

ಕ್ಲೆಮೆಂಟೈನ್ ಎಂಬ ಗಗನನೌಕೆ ತೆಗೆದ ಚಂದ್ರನ ಮೇಲ್ಮೈ ಚಿತ್ರಗಳ ಸಹಾಯದಿಂದ ಚಂದ್ರನ ಕುಳಿಗಳನ್ನು ಅಭ್ಯಸಿಸಿ ಅವುಗಳ ರಚನೆಯ ಅವಧಿಯನ್ನು ತಿಳಿಯಬಹುದಾಗಿದೆ. ರೀಪ್ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಅಂಗವಾಗಿ ವೇಣುಬಾಪು ವೀಕ್ಷಣಾಲಯದಲ್ಲಿ ರೋಹಿತ ದರ್ಶಕದ ಮೂಲಕ ವಿಶ್ಲೇಷಿಸಿದ ಹಲವು ನಕ್ಷತ್ರಗಳ ರೋಹಿತಗಳ ಒಂದು ಭಂಡಾರವೇ ಸೃಷ್ಟಿಯಾಗಿದೆ. ಇವುಗಳಲ್ಲದೆ ಅನೇಕ ಕ್ಷುದ್ರಗ್ರಹ ಮತ್ತು ಧೂಮಕೇತುಗಳನ್ನು ಸಹ ಅಭ್ಯಸಿಸಲಾಗಿದೆ. ಇವುಗಳಲ್ಲಿ ವಿಶೇಷ ಎನ್ನಬಹುದಾದದ್ದು ಚಂದ್ರಗ್ರಹಣ ಸಮಯದಲ್ಲಿ ಪಡೆದ ರೋಹಿತ. ಅವರು ಅನೇಕ ಶೈಕ್ಷಣಿಕ ಸಮಿತಿ, ಪಠ್ಯಪುಸ್ತಕ ಸಮಿತಿ, ಅಧ್ಯಯನ ಸಮಿತಿ ಮತ್ತು ಅನೇಕ ವಿಜ್ಞಾನ ಕೇಂದ್ರ ಮತ್ತು ವಸ್ತು ಸಂಗ್ರಹಾಲಯದ ಮಾರ್ಗದರ್ಶನ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಮುನ್ನೂರಕ್ಕೂ ಹೆಚ್ಚು ಜನಪ್ರಿಯ ಲೇಖನಗಳನ್ನು ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಅನೇಕ ಸಾಪ್ತಾಹಿಕ ಅಂಕಣಗಳನ್ನು ಬರೆದಿದ್ದಾರೆ. ಇವರ ‘ನಭಾವಲೋಕನ’ ಎಂಬ ಮಾಸಿಕ ಅಂಕಣ, 1999 ಆಗಸ್ಟ್ನಿಂದ ಇಂದಿನವರೆಗೆ ಪ್ರಕಟವಾಗುತ್ತಿರುವುದು ಅತ್ಯಂತ ಗಮನಾರ್ಹವಾದುದು. ಇವರು ಹಿರಿಯ ವೈಜ್ಞಾನಿಕಾಧಿಕಾರಿಯಾಗಿ, ಉಪನಿರ್ದೇಶಕರಾಗಿ ನಂತರ 2012 ರಲ್ಲಿ ನಿರ್ದೇಶಕರಾಗಿ ನೇತೃತ್ವ ವಹಿಸಿದರು. ಕಾರ್ಲ್ ಝೈಸ್ ಕಂಪನಿಯ ಹೈಬ್ರಿಡ್ ಪ್ರೊಜೆಕ್ಷನ್ ಸಿಸ್ಟಮ್ ಅನ್ನು‌ ಆಕಾಶಮಂದಿರಕ್ಕೆ ಅಳವಡಿಸಿದ್ದುಮಾತ್ರವಲ್ಲದೇ, ಸಹೋದ್ಯೋಗಿಗಳು ಹಾಗೂ ಸ್ಥಳೀಯ ಪ್ರತಿಭಾನ್ವಿತರ ಸಹಾಯದಿಂದ ಭಾರತದಲ್ಲಿಯೇ ಮೊದಲನೇಯದಾದ ಹೈಬ್ರಿಡ್ ಪ್ರದರ್ಶನವನ್ನುಯಶಸ್ವಿಯಾಗಿ ತಯಾರಿಸಲಾಯಿತು.ಇವರ ಆಡಳಿತದ ಸಮಯದಲ್ಲಿ ಸಮಾಂತರ ಭೂಗೋಳ, ಜಂತರ-ಮಂತರ್, ಪ್ರತಿಗುರುತ್ವ ಕುಟೀರಏಮ್ಸ್‌ ಕೊಠಡಿ - ಹೀಗೆ ಹಲವು ವಿನೂತನ ಮಾದರಿಗಳು ವಿಜ್ಞಾನ ವನಕ್ಕೆ ಸೇರ್ಪಡೆಯಾದವು.

ಇವರ ಪ್ರಕಟಣೆಗಳಿಗೆ ಲಿಂಕ್:

×
ABOUT DULT ORGANISATIONAL STRUCTURE PROJECTS