ಪ್ರದರ್ಶನ ಆವರಣ

Home

ಹೆಚ್ಚು ಅರಿಯಬೇಕೆ?

ಆಕಾಶ ಮಂದಿರದ ಪ್ರದರ್ಶನಗಳಿಗೆ ಪೂರಕವಾದಂತಹ ವಿಷಯಾಧಾರಿತ ಪ್ರದರ್ಶನಗಳಲ್ಲಿ ದೃಶ್ಯಾವಳಿಗಳು, ಭಿತ್ತಿ ಚಿತ್ರಗಳು ಹಾಗೂ ಖಗೋಳ ವಾಸ್ತವಾಂಶಗಳ ಬಗ್ಗೆ ವಿವರಗಳನ್ನು ಕಾಣಬಹುದು.


ಶ್ರೀ ರಾಮಮೂರ್ತಿ ಅವರ ಕಲಾಕೃತಿಗಳಾದ ಸೂರ್ಯ ಮತ್ತು ಇತರೆ ಗ್ರಹಗಳ ಪ್ರತಿರೂಪವನ್ನು ಕಾಣಬಹುದು. ಪ್ರತಿ ಗ್ರಹದ ತಯಾರಿಕೆಯಲ್ಲಿ ವಿವಿಧ ಲೋಹಗಳ ಬಳಕೆಯಾಗಿದ್ದು ನೈಜತೆಗೆ ಪ್ರಾಶಸ್ತ್ಯ ನೀಡಲಾಗಿದೆ.

 

  • ಗ್ರಹಗಳು, ಉಲ್ಕಾವೃಷ್ಟಿ, ಯುತಿ, ವಿಯುತಿ ಇತ್ಯಾದಿ ಖಗೋಳ ಘಟನೆಗಳ ಬಗ್ಗೆ ಒಂದು ನಿಮಿಷದ ದೃಶ್ಯಾವಳಿಗಳನ್ನು ಪ್ರದರ್ಶಿಸಲಾಗುತ್ತದೆ.
  • ಉಲ್ಕಾಶಿಲೆಗಳ ಪ್ರದರ್ಶನ
  • ವಿಜ್ಞಾನ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈದ ಭಾರತೀಯ ವಿಜ್ಞಾನಿಗಳ ಕುರಿತು ದೃಶ್ಯಾವಳಿಯನ್ನು ತಯಾರಿಸಿ ಪ್ರದರ್ಶಿಸಲಾಗುತ್ತಿದೆ.
  • FlippAR ಆಪ್ ಮೂಲಕ ಇಲ್ಲಿನ ಭಿತ್ತಿಚಿತ್ರ/ಪ್ರದರ್ಶಿಕೆಗಳ ಕುರಿತ ಸವಿಸ್ತಾರ ಮಾಹಿತಿಯನ್ನು ಪಡೆಯುವ ಸೌಲಭ್ಯವನ್ನು ಒದಗಿಸಲಾಗಿದೆ.

ಇದೇ ಆವರಣದಲ್ಲಿರುವ ತೂಕದ ಯಂತ್ರವು ಚಂದ್ರ ಮತ್ತು ಗ್ರಹಗಳಲ್ಲಿ ಯಾವುದೇ ವ್ಯಕ್ತಿಯ ತೂಕ “ಎಷ್ಟಿದೆ?” ಎಂಬುದನ್ನು ತೋರಿಸುತ್ತದೆ. ಸೌರವ್ಯೂಹದ ಆಕರ್ಷಕವಾದ ಭಿತ್ತಿ ಚಿತ್ರದ ಮೇಲೆ ತೂಕದ ಸಂಖ್ಯೆಗಳು ಮೂಡುತ್ತವೆ. ಇದೇ ಮಾಹಿತಿಯನ್ನು ವರ್ಣರಂಜಿತ ಮುದ್ರಿತ ಹಾಳೆಯಲ್ಲಿ ಪಡೆಯಬಹುದು. ಈ ಹಾಳೆಯಲ್ಲಿ ತೂಕದ ಜೊತೆಗೆ ಖಗೋಳ ಅಂಶಗಳ ಬಗ್ಗೆ ವಿಶೇಷ ಮಾಹಿತಿ ದೊರೆಯುತ್ತದೆ.

  

×
ABOUT DULT ORGANISATIONAL STRUCTURE PROJECTS