ಆಕಾಶ ಮಂದಿರ

Home

ತಾರಾಲಯದ ಬಹುಮುಖ್ಯ ಆಕರ್ಷಣೆ -ಆಕಾಶ ಮಂದಿರ. ಇಲ್ಲಿ 15 ಮೀ. ಅರ್ಧಗೋಳಾಕಾರದ ಪರದೆಯ ಮೇಲೆ ಪ್ರೊಜೆಕ್ಟರ್ಗಳ ಸಹಾಯದಿಂದ ರಾತ್ರಿಯ ಆಕಾಶವನ್ನು ಪ್ರದರ್ಶಿಸಲಾಗುತ್ತದೆ.

ಹವಾನಿಯಂತ್ರಿತ ಆಕಾಶ ಮಂದಿರದಲ್ಲಿ 210 ಆರಾಮ ಆಸಗಳನ್ನು ಏಕಮುಖ ವೀಕ್ಷಣೆಗೆ ಅಳವಡಿಸಲಾಗಿದೆ. ವೈಜ್ಞಾನಿಕ ಇತಿಹಾಸ, ಚರಿತ್ರೆ, ವೈಜ್ಞಾನಿಕ ಮಾಹಿತಿ, ಸಾಂಸ್ಕ್ರತಿಕ ವಿಚಾರಗಳು ಇತ್ಯಾದಿಗಳನ್ನೊಳಗೊಂಡ ಪ್ರದರ್ಶನಗಳು ವೀಕ್ಷಕರನ್ನು ಆಕರ್ಷಿಸುತ್ತದೆ. ಇಲ್ಲಿನ ದೃಶ್ಯಾವಳಿಗಳು, ಸುಂದರ ನಿರೂಪಣೆ ಹಾಗೂ ಸಂಗೀತದ ಜೊತೆಗೆ ಜೋಡಣೆಯಾಗಿದ್ದು ಮನಸೂರೆಗೊಳ್ಳುತ್ತವೆ. ಅತ್ಯುತ್ತಮ ಪ್ರೊಜೆಕ್ಷನ್ ವ್ಯವಸ್ಥೆಯಿಂದಾಗಿ ಈ ಪ್ರದರ್ಶನಗಳು ಆಕರ್ಷಕವಾಗಿದೆ.

ರಾತ್ರಿಯ ಆಕಾಶವನ್ನು ಮೂಡಿಸಲು ಕಡುಗಪ್ಪು ಹಿನ್ನೆಲೆಯನ್ನು ಹೊಂದುವುದು ಪ್ರಪಂಚದಾದ್ಯಂತವಿರುವ ಎಲ್ಲಾ ತಾರಾಲಯಗಳ ಮುಖ್ಯ ಧ್ಯೇಯವಾಗಿದೆ. ಬೆಂಗಳೂರಿನ ಜವಾಹರ್ ಲಾಲ್ ನೆಹರು ತಾರಾಲಯ ಈ ಧ್ಯೇಯವನ್ನು ಸಾಧಿಸಿದೆ.

ಫುಲ್ ಡೋಂ ಪ್ರೊಜೆಕ್ಟರ್ಗಾಗಿ ತಾರಾಲಯವು ಹೈಬ್ರಿಡ್ ತಾಂತ್ರಿಕತೆಯ ಪ್ರೊಜೆಕ್ಟರ್ಗಳನ್ನು ಅಳವಡಿಸಿದೆ. ಜರ್ಮನಿಯ ಕಾರ್ಲ್ ಝೈಸ್ ಕಂಪನಿ ವಿನ್ಯಾಸಗೊಳಿಸಿ ತಯಾರಿಸಿದ ZKP4 ಎಂಬ ಅತ್ಯುತ್ತಮವಾದ ಸ್ಟಾರ್ ಪ್ರೊಜೆಕ್ಟರ್ ಆಕಾಶಮಂದಿರದ ಮಧ್ಯಭಾಗದಲ್ಲಿದೆ. ZKP4 ಒಂದು ಆಪ್ಟೋ ಮೆಕಾನಿಕಲ್ ಪ್ರೊಜೆಕ್ಟರ್ ಆಗಿದ್ದು ಯಾವುದೇ ಪ್ರದೇಶ, ಯಾವುದೇ ದಿನಾಂಕ ಮತ್ತು ಸಮಯದಲ್ಲಿ ಆಕಾಶದಲ್ಲಿರುವ ನಕ್ಷತ್ರಗಳನ್ನು ನಿಖರವಾಗಿ ಪ್ರದರ್ಶಿಸುವ ಸಾಮರ್ಥ್ಯವಿದೆ. ZKP4 ದೈನಿಕ ಹಾಗೂ ವಾರ್ಷಿಕ ಚಲನಗಳು, ಸಾವಿರಾರು ವರ್ಷಗಳ ಪೂರ್ವ ಹಾಗೂ ಭವಿಷ್ಯತ್ತಿನ ಆಕಾಶದ ಚಿತ್ರಣವನ್ನು ನಿಖರವಾಗಿ ನಿರೂಪಿಸುವುದರಿಂದ ಉತ್ತಮ ಕಲಿಕಾ ಉಪಕರಣವಾಗಿದೆ. ZKP4 ಹೆಚ್ಚಿನ ಸಾಮಥ್ರ್ಯದ ಎಲ್.ಇ.ಡಿ. ದೀಪಗಳನ್ನು ಬಳಸುತ್ತವೆ.



ZKP4 ಜೊತೆಗೆ ಕಾರ್ಲ್ ಝೈಸ್ ಸಂಸ್ಥೆಯು ತಯಾರಿಸಿರುವ ಆರು“Velvet” ಹೆಸರಿನ ಡಿಜಿಟಲ್ ಪ್ರೊಜೆಕ್ಟರ್ಗಳನ್ನು ಸಮ್ಮಿಳಿತಗೊಳಿಸಲಾಗಿದೆ. ಇವುಗಳ ಸೂಕ್ತ ಜೋಡಣೆಯಿಂದಾಗಿ ಗುಮ್ಮಟದ ಮೇಲೆ ನೈಜವಾದ ರಾತ್ರಿಯ ಆಕಾಶದ ಹಾಗೂ 4K ರೆಸೊಲ್ಯೂಶನ್ಗಳ ಚಿತ್ರಣ ಮೂಡಿ ವೀಕ್ಷಕರಿಗೆ ಆಕಾಶದಲ್ಲಿ ಲೀನವಾಗುವ ಅನುಭವ ನೀಡುತ್ತವೆ. ಡಿಜಿಟಲ್ ಪ್ರೊಜೆಕ್ಟರ್ಗಳು ನಿಗದಿತ ಸ್ಥಾನದ ಹೊರತು ಇತರೆ ಭಾಗದಲ್ಲಿ ಬೆಳಕು ಸೂಸುವುದಿಲ್ಲವಾದ ಕಾರಣ ನೈಜ ಆಕಾಶದ ಅನುಭವವನ್ನು ನೋಡುಗರಿಗೆ ಕೊಡುತ್ತದೆ.

5.1 ಸರೌಂಡ್ ವ್ಯವಸ್ಥೆಯನ್ನು ಅಳವಡಿಸಿರುವದರಿಂದ ಆಕಾಶಮಂದಿರದಲ್ಲಿ ಅತ್ಯುನ್ನತ ಮಟ್ಟದ ಧ್ವನಿ ಸಂವೇದನೆಯ ಅನುಭವ ದೊರಕುತ್ತದೆ.

ಮಿನಿ ಡೋಂ

ಮಿರರ್ ಡೋಂ ಪ್ರಕ್ಷೇಪಕ ವ್ಯವಸ್ಥೆಯ ಮರುಬಳಕೆಯ ಉದ್ದೇಶದಿಂದ - ಲಭ್ಯವಿದ್ದ ಬೋಧನಾ ಕೊಠಡಿಯನ್ನು 40 ಆಸನಗಳ ಹವಾನಿಯಂತ್ರಿತ ಡಿಜಿಟಲ್ ಆಕಾಶ ಮಂದಿರವನ್ನಾಗಿ ಪರಿವರ್ತಿಸಲಾಗಿದೆ.

×
ABOUT DULT ORGANISATIONAL STRUCTURE PROJECTS