ಸಂಸ್ಥಾಪಕ ನಿರ್ದೇಶಕರು - ಪ್ರೊ. ಸಿ. ವಿ. ವಿಶ್ವೇಶ್ವರ

Home

ಸಂಸ್ಥಾಪಕ ನಿರ್ದೇಶಕರು - ಪ್ರೊ. ಸಿ. ವಿ. ವಿಶ್ವೇಶ್ವರ

ಪ್ರೊ. ವಿಶ್ವೇಶ್ವರ ಅವರು ತಾರಾಲಯದ ಸ್ಥಾಪಕ ನಿರ್ದೇಶಕರಾಗಿದ್ದರು. ಅವರು ತಾರಾಲಯವನ್ನು ನಿರ್ವಹಿಸುವ ಸ್ವಾಯತ್ತ ಸಂಸ್ಥೆಯ ಉಪಾಧ್ಯಕ್ಷರಾಗಿ ಅದು ಸ್ಥಾಪನೆಯಾದ ವರ್ಷ(1992)ದಿಂದ ತಮ್ಮ ಕೊನೆ ದಿನಗಳವರೆಗೂ ಸೇವೆ ಸಲ್ಲಿಸಿದರು.

ವಿಜ್ಞಾನದ ಜನಪ್ರಿಯತೆ ತಾರಾಲಯದ ಪ್ರದರ್ಶನಗಳು ಈ ಕೆಳಕಂಡ ಪ್ರದರ್ಶನಗಳ ಲೇಖಕ ಮತ್ತು ನಿರ್ದೇಶಕರೂ ಆಗಿದ್ದರು –

1989 - ಸೂರ್ಯ ಮತ್ತು ಕುಟುಂಬ
1992 – ನಮ್ಮ ವಿಶ್ವ
1994 – ಅನ್ಯಜೀವಿಗಳು ಅನ್ಯಲೋಕಗಳು
1995 - ಗ್ರಹಣಗಳು
2000 – ಕಾಲ - ಒಂದು ಅನಂತವಾಹಿನಿ
2004 – ಆಲ್ಬರ್ಟ್ ಐನ್ಸ್ಟೈನ್
2006 - ಬಾನಂಗಳದಲ್ಲಿ ಬಾಣಬಿರುಸು

ವಿಜ್ಞಾನದ ಜನಪ್ರಿಯತೆ ತಾರಾಲಯದ ಪ್ರದರ್ಶನಗಳು ಈ ಕೆಳಕಂಡ ಪ್ರದರ್ಶನಗಳ ಲೇಖಕ ಮತ್ತು ನಿರ್ದೇಶಕರೂ ಆಗಿದ್ದರು –

 

  • 2017ರಲ್ಲಿ ತಮ್ಮ ಕೊನೆಯ ದಿನಗಳವರೆಗೂ ತಾರಾಲಯದ ಎಲ್ಲಾ ಪ್ರದರ್ಶನಗಳ ನಿರ್ಮಾಣದಲ್ಲಿ ಮಾರ್ಗದರ್ಶನ ನೀಡುತ್ತಿದ್ದರು. ವಿಶಿಷ್ಟ ಶೈಲಿಯ ಕಲಾಕೃತಿಗಳು, ವ್ಯಂಗ್ಯ ಚಿತ್ರಗಳು, ಚರಿತ್ರಾಂಶಗಳು ಮತ್ತು ವಿವಿಧ ಸಂಸ್ಕøತಿಗಳಿಂದ ಆಯ್ದ ಪೌರಾಣಿಕ ಕಥೆಗಳನ್ನು ತಾರಾಲಯದ ಪ್ರದರ್ಶನಗಳಲ್ಲಿ ಬಳಸಲು ಪರಿಚಯಿಸಿದವರು ಪ್ರೊ. ಸಿ. ವಿ. ವಿಶ್ವೇಶ್ವರ
  • 1997ರಲ್ಲಿ ತಾರಾಲಯದ ಆವರಣದಲ್ಲಿ “ವಿಜ್ಞಾನ ವನ”ವನ್ನು ಸ್ಥಾಪಿಸಿದರು.
  • ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಸಲುವಾಗಿ “ವಿಜ್ಞಾನ ಸಮೀಕ್ಷೆ” ಎಂಬ ದೃಕ್-ಶ್ರವಣ ಕಾರ್ಯಕ್ರಮವನ್ನು ಪರಿಚಯಿಸಿದರು.

 

ಅನೌಪಚಾರಿಕ ವಿಜ್ಞಾನ ಶಿಕ್ಷಣ

ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ವಿವಿಧ ಹಂತಗಳಲ್ಲಿ ಅನೌಪಚಾರಿಕ ವಿಧಾನಗಳ ಮೂಲಕ ಶಿಕ್ಷಣ ನೀಡುವ ಉದ್ದೇಶದಿಂದ ತಾರಾಲಯದ ಶೈಕ್ಷಣಿಕ ಕಾರ್ಯಕ್ರಮಗಳನ್ನು 1992ರಲ್ಲಿಯೇ ಪ್ರಾರಂಭಿಸಿದವರು ಪ್ರೊ. ಸಿ. ವಿ. ವಿಶ್ವೇಶ್ವರ. ಈ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರಿದು ವೈಜ್ಞಾನಿಕ ಶಿಕ್ಷಣ ಕ್ಷೇತ್ರದಲ್ಲಿ ಹೆಸರುಗಳಿಸಿವೆ. ಈ ಕಾರ್ಯಕ್ರಮಗಳಿಗೆ ಅವರಿಟ್ಟ ಹೆಸರುಗಳೂ ಬಹಳ ಒಪ್ಪವಾಗಿವೆ. ಹತ್ತು ವರ್ಷಕ್ಕೂ ಕಡಿಮೆ ವಯಸ್ಸಿನ ಸಣ್ಣ ಮಕ್ಕಳಿಗೆ ಸೀಡ್ ಎಂದರೆ ಬೀಜ; ಮುಂದಿನ ಹಂತದ ಮಕ್ಕಳಿಗೆ ಸೋ ಅಂದರೆ ಬಿತ್ತನೆ; ಕಾಲೇಜು ವಿದ್ಯಾರ್ಥಿಗಳಿಗೆ ರೀಪ್ ಎಂದರೆ ಕುಯಿಲು. - ಹೀಗೆ

ವಿಜ್ಞಾನ ಪ್ರದರ್ಶನಗಳು : 1992ರಲ್ಲಿ
ಸೀಡ್ ಅಂದರೆ ಚಿಣ್ಣರ ಕಾರ್ಯಕ್ರಮಗಳು 1992
3-5 ನೇ ತರಗತಿ ವಿದ್ಯಾರ್ಥಿಗಳಿಗೆ ಚಟುವಟಿಕೆ ಆಧಾರಿತ SEED ಆಶೀರ್ಷಿಕೆಯ ಕಾರ್ಯಕ್ರಮ

SOW - ಸೋ (ವಾರಾಂತ್ಯದಲ್ಲಿ ವಿಜ್ಞಾನ) (Science Over Weekends) - ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 1995
ವಿಜ್ಞಾನ ವಿಷಯದಲ್ಲಿ ಬೇಸಿಗೆ ಶಿಬಿರ – 1995.

ರೀಪ್ - ಪದವಿಪೂರ್ವ ವಿದ್ಯಾರ್ಥಿಗಳಿಗೆ ಭೌತವಿಜ್ಞಾನ – ವಾರಾಂತ್ಯದ ತರಗತಿಗಳು – 1996 ರಿಂದ ಆರಂಭ
ಭಾರತೀಯ ವಿಜ್ಞಾನ ಸಂಸ್ಥೆ, ರಾಮನ್ ಸಂಶೋಧನಾ ಸಂಸ್ಥೆ, ನ್ಯಾಷನಲ್ ಸೆಂಟರ್ ಫಾರ್ ಬಯಲಾಜಿಕಲ್ ಸೈನ್ಸಸ್ ಮತ್ತು ಭಾರತೀಯ ಖಭೌತ ಸಂಸ್ಥೆಗಳ
ಸಹಯೋಗದೊಂದಿಗೆ ರೀಪ್ ಕಾರ್ಯಕ್ರಮವನ್ನು ಮೂರು ವರ್ಷಗಳ ಕಾರ್ಯಕ್ರಮವನ್ನಾಗಿ 2000ದ ಇಸವಿಯಿಂದ ಮಾಡಲಾಯಿತು. ಇಂಟರ್‍ನ್ಯಾಷನಲ್ ಸೆಂಟರ್ ಫಾರ್ ಥಿಯರೆಟಿಕಲ್ ಸೈನ್ಸಸ್ ಸಹ 2016ರಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದೆ.
ಬಯೋ ರೀಪ್ (ಜೀವವಿಜ್ಞಾನ ) ಕಾರ್ಯಕ್ರಮ - ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ 2000ದ ಇಸವಿಯಿಂದ ರೂಪಿಸಲಾಗಿದೆ.

×
ABOUT DULT ORGANISATIONAL STRUCTURE PROJECTS