ಇತಿಹಾಸ

Home

ಜವಾಹರಲಾಲ್ ನೆಹರು ತಾರಾಲಯ (ಜನೆತಾ)

ಜವಾಹರಲಾಲ್ ನೆಹರು ತಾರಾಲಯವು 1989ರಲ್ಲಿ ಬೆಂಗಳೂರು ನಗರ ಪಾಲಿಕೆ ಅಂದರೆ ಈಗಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಸ್ಥಾಪಿಸಲಾದ ಸಂಸ್ಥೆ. ನಂತರ ಈ ತಾರಾಲಯದ ಆಡಳಿತವನ್ನು 1992ರಲ್ಲಿ ಸ್ಥಾಪಿತವಾದ ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಷನ್ (ಬೇಸ್) ಎಂಬ ಸ್ವಾಯತ್ತ ಸಂಸ್ಥೆಗೆ ವಹಿಸಿಕೊಡಲಾಯಿತು. . ಬೇಸ್ ಸಂಸ್ಥೆಯು ಕರ್ನಾಟಕ ಸೊಸೈಟೀಸ್ ರಿಜಿಸ್ಟ್ರೇಷನ್ ಆಕ್ಟ್ ಅಡಿಯಲ್ಲಿ ನೋಂದಣಿಯಾದ ಸಂಸ್ಥೆಯಾಗಿದ್ದು, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ವಾರ್ಷಿಕ ಅನುದಾನ ಪಡೆಯುತ್ತಿದೆ.

ಬೇಸ್ ನ ಆಡಳಿತ ಮಂಡಳಿಯು ಪ್ರಖ್ಯಾತ ಶಿಕ್ಷಣ ತಜ್ಞರು, ವಿಜ್ಞಾನಿಗಳು ಮತ್ತು ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಒಳಗೊಂಡಿದೆ. ವಿಜ್ಞಾನವನ್ನು ಜನಪ್ರಿಯಗೊಳಿಸುವುದು ಮತ್ತು ಅನೌಪಚಾರಿಕ ವಿಜ್ಞಾನ ಶಿಕ್ಷಣ ಇವೆರಡೂ ಬೇಸ್ ಸಂಸ್ಥೆಯ ಧ್ಯೇಯೋದ್ದೇಶಗಳಾಗಿದ್ದು, ಇದರ ಮೂಲಕ ತಾರಾಲಯವು ರಾಷ್ಟ್ರೀಯ ಮಟ್ಟದ ಅತ್ಯುನ್ನತ ತಾರಾಲಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಾಜಿ ನಿರ್ದೇಶಕರುಗಳು

ಪ್ರೊ. ಸಿ. ವಿ. ವಿಶ್ವೇಶ್ವರ - ಸಂಸ್ಥಾಪಕ ನಿರ್ದೇಶಕರು (1989 -1992) (1993-2006)

ಡಾ. ಜಿ. ಎಸ್. ಡಿ. ಬಾಬು – ಭಾರತೀಯ ಖಭೌತ ಸಂಸ್ಥೆಯ ನಿವೃತ್ತ ವಿಜ್ಞಾನಿ ಮತ್ತು ಎಮ್. ಪಿ. ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ನ ಹಾಲಿ ನಿರ್ದೇಶಕರು (1992-1993).

ಪ್ರೊ. ಸಿ. ಎಸ್. ಶುಕ್ರೆ – ರಾಮನ್ ಸಂಶೋಧನಾ ಸಂಸ್ಥೆ (2006-2011).

ಡಾ.ಬಿ.ಎಸ್.ಶೈಲಜಾ – ಪ್ರಸ್ತುತ ಹಿರಿಯ ವೈಜ್ಞಾನಿಕ ಸಲಹೆಗಾರರು (2012-2017)

×
ABOUT DULT ORGANISATIONAL STRUCTURE PROJECTS