ನಕ್ಷತ್ರ ವೀಕ್ಷಣೆ ಕಾರ್ಯಕ್ರಮ

Home

ನಕ್ಷತ್ರ ವೀಕ್ಷಣೆ ಕಾರ್ಯಕ್ರಮ: ಈ ಕಾರ್ಯಕ್ರಮದಲ್ಲಿ ತಾರಾಲಯದ ಖಗೋಳ ವಿಜ್ಞಾನಿಗಳಿಂದ ರಾತ್ರಿ ಆಕಾಶದಲ್ಲಿ ಆಕಾಶ ಕಾಯಗಳನ್ನು ಹೇಗೆ ಗುರುತಿಸುವುದು ಎಂಬುದನ್ನು ತಿಳಿದುಕೊಳ್ಳಬಹುದು. ನಮ್ಮ ಆಕಾಶ ಮಂದಿರದ ಕೃತಕ ಆಕಾಶದಲ್ಲಿ ಬೆಂಗಳೂರಿನ ನೈಜ ಸಮಯದ ಆಕಾಶವನ್ನು ನೋಡಬಹುದು. ಇದರ ಮೂಲಕ ನಕ್ಷತ್ರಪುಂಜಗಳನ್ನು, ಆಕಾಶ ಕಾಯಗಳನ್ನು ಗುರುತಿಸುವುದನ್ನು ಕಲಿಯಬಹುದು. ಈ ಕಾರ್ಯಕ್ರಮವು ಪ್ರತೀ ತಿಂಗಳ ಮೊದಲನೆಯ ಭಾನುವಾರದಂದು ಸಂಜೆ 6.30 ಗೆ ನಡೆಯಲಿದ್ದು, ಟಿಕೆಟ್ಗಳನ್ನು (ತಲಾ ರೂ. 50) ಇಲ್ಲೇ ಬಂದು ಖರೀದಿಸಬಹುದು.

ಪ್ರತೀ ತಿಂಗಳ ಮೊದಲ ಭಾನುವಾರ ಸಂಜೆ 5.15 ರಂದು 'ಖಗೋಳ ವಿಜ್ಞಾನ ಕೇಳಿ-ತಿಳಿ' ಎಂಬ ಕಾರ್ಯಕ್ರಮವು ನಡೆಯುತ್ತದೆ. ಇಲ್ಲಿ ಎಲ್ಲಾ ವಯೋಮಾನದ ವಿಜ್ಞಾನಾಸಕ್ತರು ನಮ್ಮ ಖಗೋಳ ವಿಜ್ಞಾನಿಯ ಬಳಿ ಖಗೋಳ ವಿಜ್ಞಾನದ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಡೆಯಬಹುದು. ಪ್ರವೇಶ ಉಚಿತ.

ಹಳೆಯ ಕಾರ್ಯಕ್ರಮಗಳ ಮಾಹಿತಿಗಾಗಿ ಇಲ್ಲಿ ಒತ್ತಿ

×
ABOUT DULT ORGANISATIONAL STRUCTURE PROJECTS