ಸಂಸ್ಥಾಪಕ ಅಧ್ಯಕ್ಷರು ಪ್ರೊ. ಯು. ಆರ್. ರಾವ್

Home

ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಪ್ರೊ. ಯು. ಆರ್. ರಾವ್ (1932 – 2017).

ಬಾಹ್ಯಾಕಾಶ ವಿಜ್ಞಾನ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದವರು ಪ್ರಖ್ಯಾತ ವಿಜ್ಞಾನಿ ಪ್ರೊ. ಯು. ಆರ್. ರಾವ್. ಸಂವಹನ ಮಾಧ್ಯಮ, ಹವಾಮಾನ ಮುನ್ಸೂಚನೆ, ನೈಸರ್ಗಿಕ ಸಂಪನ್ಮೂಲ ಶೋಧನೆಗಾಗಿ ದೂರಸಂವೇದಿಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಮಹತ್ವವನ್ನು ಇಡೀ ವಿಶ್ವಕ್ಕೆ ಪ್ರಚುರ ಪಡಿಸಿದವರು.

ತಾರಾಲಯದ ಮಾತೃ ಸಂಸ್ಥೆಯಾದ ಬೇಸ್ ನ ಅಧ್ಯಕ್ಷರಾಗಿ ಪ್ರೊ. ರಾವ್ ರವರು ವಿಜ್ಞಾನ ಶಿಕ್ಷಣ ಮತ್ತದನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಮತ್ತು ಜನಪ್ರಿಯಗೊಳಿಸುವಲ್ಲಿ ನೀಡಿದ ಉನ್ನತ ಕೊಡುಗೆಯನ್ನು ಸ್ಮರಿಸಿಕೊಳ್ಳೋಣ.

ತಾರಾಲಯದ ಜೊತೆ –

ಪ್ರೊ. ರಾವ್ ರವರು ಒಡನಾಟ ತಾರಾಲಯದ ಸ್ಥಾಪನಾ ದಿನದಿಂದಲೇ ಆರಂಭವಾದದ್ದು. ಈಗಿರುವ ಸ್ಥಳವೇ ತಾರಾಲಯದ ಸ್ಥಾಪನೆಗೆ ಸೂಕ್ತವಾದದ್ದು ಎಂದು ಪ್ರೊ. ರಾವ್ ರವರ ಆಗಿನ ಬೆಂಗಳೂರು ಮಹಾನಗರ ಪಾಲಿಕೆಗೆ ಬಲವಾಗಿ ಶಿಫಾರಸ್ಸು ಮಾಡಿದರು ಪ್ರೊ. ಸಿ. ವಿ. ವಿಶ್ವೇಶ್ವರ ಅವರು ಈ ಸಂಸ್ಥೆಯ ನಿರ್ದೇಶಕ ಸ್ಥಾನ ಅಲಂಕರಿಸಲು ಅರ್ಹರೆಂದು ಪ್ರೊ. ರಾವ್ ಅವರು 1987ರಲ್ಲಿ ಅಭಿಪ್ರಾಯ ಪಟ್ಟರು. ಪ್ರೊ. ರಾವ್ ಅವರ ಈ ಆಯ್ಕೆಯೂ ವಿಜ್ಞಾನವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ತಾರಾಲಯಕ್ಕೆ ನೀಡಿದ ಮಹತ್ತರ ಕೊಡುಗೆಯೇ ಆಗಿದೆ. 1992ರಲ್ಲಿ ನಗರ ಪಾಲಿಕೆ ಹೊಸದಾಗಿ ಸ್ಥಾಪಿಸಲಾದ ಸ್ವಾಯತ್ತ ಸಂಸ್ಥೆ ಬೇಸ್‍ಗೆ ತಾರಾಲಯದ ಆಡಳಿತವನ್ನು ಹಸ್ತಾಂತರಿಸಿತು. ಆಡಳಿತ ಮಂಡಳಿ ಅಧ್ಯಕ್ಷರಾಗಿ ಪ್ರೊ. ರಾವ್ ಅವರು ಜುಲೈ 24, 2017ರವರೆಗೆ (ತಮ್ಮ ಕಡೆಯ ದಿನಗಳವರೆಗೆ) ತಾರಾಲಯದ ಆಗುಹೋಗುಗಳಲ್ಲಿ ಮಾರ್ಗದರ್ಶಿಗಳಾಗಿದ್ದರು.

ಪ್ರತಿ ಕಾರ್ಯಕ್ರಮದಲ್ಲೂ ತಾರಾಲಯದ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಿ, ಎಲ್ಲ ಚಟುವಟಿಕೆಗಳೂ ಯಶಸ್ವಿಯಾಗುವಂತೆ ಕೈ ಹಿಡಿದು ನಡೆಸಿದರು. ಯಾವುದೇ ಚಟುವಟಿಕೆಗಳಲ್ಲಿ ಅವರು ನೀಡುತ್ತಿದ್ದ ಸ್ವಾತಂತ್ರ್ಯತೆ ಮತ್ತು ಉತ್ತೇಜನ – ತಾರಾಲಯದ ಸಿಬ್ಬಂದಿ ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿತ್ತು.

ನಿಗದಿತ ಕಕ್ಷೆಯಿಂದ ಉಪಗ್ರಹ ಪಲ್ಲಟವಾದರೆ ತಕ್ಷಣವೇ ಸರಿಪಡಿಸುವ ಕಾರ್ಯಕ್ಷಮತೆಯನ್ನು ತಾರಾಲಯದ ಕಾರ್ಯ ನಿರ್ವಹಣೆಯಲ್ಲೂಪ್ರಯೋಗಿಸಿ ಸರಿಯಾದ ರೀತಿಯಲ್ಲಿ ತಿದ್ದುತ್ತಿದ್ದ - ದಿಕ್ಸೂಚಿಯಂತಿದ್ದರು. ತಾರಾಲಯದ ಪ್ರದರ್ಶನಗಳ ಬಗ್ಗೆ ರಚನಾತ್ಮಕವಾಗಿ ಟೀಕಿಸುತ್ತಿದ್ದ, ವಿಭಿನ್ನತೆಯಿಂದ ಕೂಡಿದೆ ಎಂಬ ಮೆಚ್ಚುಗೆಯನ್ನೂ ವಿಶ್ವಾಸಪೂರ್ವಕವಾಗಿ ವ್ಯಕ್ತಪಡಿಸುತ್ತಿದ್ದರು.

ಪ್ರೊ. ರಾವ್ ಅವರದು ತರ್ಕಬದ್ಧ ಮನಸ್ಥಿತಿ. ತಾರಾಲಯದಲ್ಲಿ ಅವರು ನೀಡಿದ ಸುಮಾರು ಎಲ್ಲ ಭಾಷಣಗಳಲ್ಲೂ ಜೋತಿಷ್ಯಾಸ್ತ್ರ ಹಾಗೂ ಜ್ಯೋತಿಷಿಗಳ ಅಭಿಪ್ರಾಯ ಮೂಢನಂಬಿಕೆಗೆ ದಾರಿಯಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಸಾರ್ವಜನಿಕರಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆದರೆ ಮಾತ್ರ ಮೂಢನಂಬಿಕೆಗಳನ್ನು ಅಳಿಸಲು ಸಾಧ್ಯ ಹಾಗೂ ತಾರಾಲಯದ ಕಾರ್ಯಕ್ರಮಗಳ ಪಾತ್ರ ಇದರಲ್ಲಿ ತುಂಬಾ ಮಹತ್ತರವಾದದ್ದು ಎಂದಿದ್ದಾರೆ. ವಿಜ್ಞಾನವಿರಲಿ, ತಂತ್ರಜ್ಞಾನವಿರಲಿ - ಭವಿಷ್ಯದ ಕನಸಿನ ಬಗ್ಗೆ ಹೇಳುವುದು ಅವರಿಗೆ ಹೆಚ್ಚು ಇಷ್ಟವಾಗಿತ್ತು.

ತಾರಾಲಯಕ್ಕೆ ಭೇಟಿ ನೀಡುವ ಬಹುಪಾಲು ಜನರಲ್ಲಿ ಮಕ್ಕಳೇ ಹೆಚ್ಚಾಗಿದ್ದರಿಂದ ತಾರಾಲಯದ ಪ್ರದರ್ಶನಗಳು ಅವರಲ್ಲಿ ಉತ್ಸಾಹ ತುಂಬಬೇಕು.ಅವರನ್ನು ವಿಜ್ಞಾನದ ಬಗ್ಗೆ ಉತ್ಸಾಹಿಗಳಾಗಿ ಮಾಡಬೇಕೆಂಬ ಆಸೆಪ್ರೊ ರಾವ್ ಅವರಲ್ಲಿತ್ತು.“ನಾವು ಭವಿಷ್ಯದ ಮಕ್ಕಳಿಗೆ ಸಾಧನೆಯ ಹಾದಿ ತೋರಬೇಕೇಹೊರತು, ಕಳೆದುಹೋದವರಿಗಲ್ಲ (ಸತ್ತು ಹೋದವರಿಗಲ್ಲ) ಎಂದುಆಗಾಗಹೇಳುತ್ತಿದ್ದರು.ವಿಜ್ಞಾನ ಕುರಿತಾಗಿ ಪ್ರೊ.ರಾವ್ ಅವರಿಗೆ ಒಂದು ಮಗುವಿನಲ್ಲಿರುವಷ್ಟೇ ಕುತೂಹಲ ಇತ್ತು. ಸೇರ್ಪಡೆಯಾದ ಪ್ರತಿಗುರುತ್ವ ಕುಟೀರದಲ್ಲಿ ನೀರು ಮೇಲ್ಮುಖವಾಗಿ ಹರಿಯುವುದು ಮತ್ತು ಚೆಂಡು ಮೇಲಕ್ಕೆ ಉರುಳುವುದನ್ನು ವೀಕ್ಷಿಸಿದಪ್ರೊ. ರಾವ್ ಅವರು ಎಂದಿನಂತೆ ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಲಿಲ್ಲ. ಸ್ವಲ್ಪ ಹೊತ್ತಿನಮೇಲೆ, ಆಡಳಿತ ಮಂಡಳಿಯ ಸದಸ್ಯರರೊಬ್ಬರ ಬಳಿ - “ಇವರುಗಳು ಗುರುತ್ವಾಕರ್ಷಣೆಯನ್ನೇ ತಲೆಕೆಳಗಾಗಿಸಿದ್ದಾರೆ!” ಎಂದರಂತೆ.

ಪ್ರೊ. ರಾವ್ ತಾರಾಲಯದ ಹಿತಾಸಕ್ತಿಗಳನ್ನು ಪೋಷಕರು ತಮ್ಮ ಮಕ್ಕಳ ಆಸಕ್ತಿಗೆ ನೀರೆರೆವಂತೆ ಪೋಷಿಸುತ್ತಿದ್ದರಲ್ಲದೆ – ಇದರ ರಕ್ಷಣೆ ಮತ್ತು ಉನ್ನತೀಕರಣಕ್ಕೆ ಸಾಧ್ಯವಿದ್ದಷ್ಟು ಪ್ರಯತ್ನಿಸುತ್ತಿದ್ದರು. ವಿಜ್ಞಾನ ಚಟುವಟಿಕೆಗಳೊಂದಿಗೆ ಮತ್ತು ಲವಲವಿಕೆಯಿಂದ ಕೂಡಿದ ಯುವ ಮನಸ್ಸುಗಳೊಂದಿಗೆ ತಾರಾಲಯದ ಆವರಣ ತುಂಬಿರಬೇಕು ಎಂಬುದು ಅವರ ಮಹತ್ತರ ಆಶಯವಾಗಿತ್ತು. ಆ ಮೂಲಕ ಬಲವಾದ ಮತ್ತು ಸ್ಥಿರತೆಯಿಂದ ಕೂಡಿದ ಭವಿಷ್ಯ ರೂಪಿಸಬಹುದು. ಈ ದಿಸೆಯಲ್ಲಿ ತಾರಾಲಯ ಎಷ್ಟೋ ಸಾಧನೆ ಮಾಡಿದೆ. ಇನ್ನೂ ಹೆಚ್ಚಿನದನ್ನು ಮಾಡಬೇಕಿದೆ – ಎಂದು ಅಭಿಪ್ರಾಯಪಟ್ಟವರು. ಪ್ರೊ. ರಾವ್ ಅವರು ನಮ್ಮ ನಡುವೆ ಇಲ್ಲದಿದ್ದರೂ, ಅವರ ವಿವೇಕ, ಚಿಂತನ ಶೀಲತೆ ನಮಗೆಲ್ಲಾ ದಾರಿದೀಪವಾಗಿ ನಡೆಸುತ್ತದೆ.

 

×
ABOUT DULT ORGANISATIONAL STRUCTURE PROJECTS