ಅವಲೋಕನ

Home

ಸಂಶೋಧನೆ ಮತ್ತು ಬೋಧನೆಯಲ್ಲಿ ವೃತ್ತಿಯನ್ನು ಮುಂದುವರೆಸಲು ವಿಜ್ಞಾನ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಪ್ರತಿಭೆಗಳನ್ನು ಗುರುತಿಸಿ ಪೋಷಿಸುವ ಮತ್ತು ಎಲ್ಲಾ ಹಂತಗಳಲ್ಲಿ ಗುಣಮಟ್ಟದ ವಿಜ್ಞಾನ ಶಿಕ್ಷಣವನ್ನು ನೀಡುವುದು ಬೇಸ್ ನ ಪ್ರಾಥಮಿಕ ಉದ್ದೇಶಗಳಲ್ಲಿ ಒಂದು. ಮೂರನೇ ತರಗತಿಯಿಂದ ಪದವಿವರೆಗಿನ ವಯೋಮಾನದ ವಿದ್ಯಾರ್ಥಿಗಳಿಗಾಗಿ ಹಲವಾರು ಅನೌಪಚಾರಿಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಶೈಕ್ಷಣಿಕ ಕಾರ್ಯಕ್ರಮಗಳು ವಯೋಮಾನಕ್ಕೆ ಅನುಗುಣವಾಗಿ ಕ್ರಮೇಣ ಹೆಚ್ಚು ಹೆಚ್ಚು ವ್ಯವಸ್ಥಿತವಾಗಿ, ಕ್ಲಿಷ್ಟವಾಗಿ ವಸ್ತು ನಿಷ್ಠವಾಗುತ್ತಾ ಮುಂದುವರೆಯುತ್ತವೆ. ಪ್ರಸ್ತುತ ಶೈಕ್ಷಣಿಕ ಚಟುವಟಿಕೆಗಳ ಏರು ವ್ಯವಸ್ಥೆಯಲ್ಲಿ ಆರ್.ಇ.ಎ.ಪಿ. (ರೀಪ್) ಕಾರ್ಯಕ್ರಮವು ಉತ್ತುಂಗದಲ್ಲಿದೆ. ಎಸ್.ಇ.ಇ.ಡಿ. (ಸೀಡ್), ಎಸ್.ಒ.ಡಬ್ಲ್ಯೂ. (ಸೋ) ಮತ್ತು ಆರ್.ಇ.ಎ.ಪಿ.(ರೀಪ್) ಕಾರ್ಯಕ್ರಮಗಳು ನಮ್ಮ ಶೈಕ್ಷಣಿಕ ಕಾರ್ಯಕ್ರಮಗಳ ಹಂತಗಳನ್ನು ನಿರೂಪಿಸುತ್ತವೆ .

ಸೀಡ್(Science in Early Education) :

ಮೂರರಿಂದ ಐದನೇ ತರಗತಿಯ ಪುಟಾಣಿಗಳಿಗಾಗಿ ವಿಜ್ಞಾನ ಕಮ್ಮಟ.ವರ್ಷವಿಡೀ ನಡೆಯುವ ಕಾರ್ಯಕ್ರಮಗಳು

 

ಸೋ (ವಾರಾಂತ್ಯದಲ್ಲಿ ವಿಜ್ಞಾನ) (Science Over Weekends) :

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾರಾಂತ್ಯದ ತರಗತಿಗಳನ್ನು ನಡೆಸಲಾಗುವುದು. ಇದು ಪರೀಕ್ಷೆಗಾಗಿ ನಡೆಸುವ ತರಬೇತಿಯಲ್ಲ. ಬದಲಿಗೆ ಪ್ರಯೋಗಗಳ ಮೂಲಕ ಚರ್ಚಿಸಿ, ಸಮಸ್ಯೆ ಬಗೆಹರಿಸುವುದು ಹಾಗೂ ವೈಜ್ಞಾನಿಕ ಪರಿಕಲ್ಪನೆಗಳ ಬಗ್ಗೆ ಸಂಪೂರ್ಣ ತಿಳುವಳಿಕೆಯನ್ನು ನೀಡಿ ವಿಜ್ಞಾನ ಸಂಶೋಧನಾ ಮನೋಧರ್ಮ ಬೆಳೆಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ.

 

ರೀಪ್ (Research Education Advancement Programme) :

Reap-ಇದು ಭೌತವಿಜ್ಞಾನದ ಮೂರು ವರ್ಷಗಳ ಕಾರ್ಯಕ್ರಮ. ಕಾಲೇಜು ಪದವಿ ಪಠ್ಯಕ್ರಮದ ಜೊತೆಗೆ ಪೂರಕ ವಾಗುವ ಕಾರ್ಯಕ್ರಮ. ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿ, ಇದೇ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳುವಂತೆ ಮಾಡುವುದು ರೀಪ್ ನ ಪ್ರಾಥಮಿಕ ಉದ್ದೇಶ. ಭೌತಶಾಸ್ತ್ರ ಮತ್ತು ಖಾಗೋಳ ಶಾಸ್ತ್ರದ ಬಗ್ಗೆ ಪ್ರತಿಷ್ಠಿತ ಸಂಸ್ಥೆಗಳ ವಿಷಯ ತಜ್ಞರು ಮತ್ತು ಪ್ರಾಧ್ಯಾಪಕರು ಬಿ.ಎಸ್‌ ಸಿ. ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವರು.ಈ ಉಪನ್ಯಾಸಗಳ ಮೂಲಕ ವಿಜ್ಞಾನದಲ್ಲಿನ ಕೆಲವು ಮೂಲ ಪರಿಕಲ್ಪನೆಗಳ ಸಮಸ್ಯೆಗಳನ್ನು ಬಗೆಹರಿಸುವುದು, ಪ್ರಯೋಗಗಳು ಮತ್ತು ಕಂಪ್ಯೂಟರ್ ಗಳ ಬಳಕೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸುವುದು ನಮ್ಮ ಉದ್ದೇಶವಾಗಿದೆ.

×
ABOUT DULT ORGANISATIONAL STRUCTURE PROJECTS