ವಿಜ್ಞಾನ ವನ

Home

 

ತಾರಾಲಯದ ವಿಜ್ಞಾನ ವನವು 50ಕ್ಕೂ ಹೆಚ್ಚು ವಿಜ್ಞಾನ ಮಾದರಿಗಳನ್ನು ಒಳಗೊಂಡಿದೆ. ಆಗ್ಮೆಂಟೆಡ್ ರಿಯಾಲಿಟಿ ಆಪ್ ಮೂಲಕ ಈ ಮಾದರಿಗಳ ಕುರಿತ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಬಹುದಾಗಿದೆ. ಇದಕ್ಕಾಗಿ ಸಾರ್ವಜನಿಕರು ಫ್ಲಿಪ್ ಎ.ಆರ್. ಆಪ್ ಅನ್ನು ಡೌನ್ಲೋಡ್ ಮಾಡಿ, ಫಲಕದಲ್ಲಿರುವ QR ಕೋಡನ ಸಹಾಯದಿಂದ ನೋಡಬಹುದು. ಈ ವ್ಯವಸ್ಥೆಯು ಭೌತಿಕ ಅಂತರವನ್ನು ಕಾಯ್ದುಕೊಂಡು ಸುರಕ್ಷಿತವಾಗಿ ವಿಜ್ಞಾನ ಮಾದರಿಗಳನ್ನು ಅರಿಯಲು ಸಹಾಯಕವಾಗಿದೆ.

ವೀಕ್ಷಕರ ಆಸಕ್ತಿ ಅರಳಿಸಿ, ವಿಜ್ಞಾನವನ್ನು ಆಸಕ್ತಿದಾಯಕ ಮಾಡಲು ತಾರಾಲಯವು ಸುಮಾರು 40 ಪ್ರದರ್ಶಿಕೆಗಳನ್ನು ಆವರಣದಲ್ಲಿನ ವಿಜ್ಞಾನ ವನದಲ್ಲಿ ಪ್ರದರ್ಶಿಸಿದೆ.

ಭೂಗೋಳ ಮಾದರಿ : ಬೆಂಗಳೂರಿನ ಅಕ್ಷಾಂಶಕ್ಕೆ ಅನುಗುಣವಾಗಿರುವ ಈ ದೊಡ್ಡ ಗಾತ್ರದ ಭೂಗೋಳ ಮಾದರಿ ನೋಡುಗರ ಗಮನ ಸೆಳೆಯುತ್ತದೆ. ಅನೇಕ ಬಗೆಯ ಭೌಗೋಳಿಕ ಮತ್ತು ಖಗೋಳ ಪರಿಕಲ್ಪನೆಗಳನ್ನು ಈ ಮಾದರಿಯೊಂದಿಗೆ ವಿವರಿಸಬಹುದು.

ಪ್ರತಿ ಗುರುತ್ವ ಕುಟೀರ: ಗುರುತ್ವಾಕರ್ಷಣೆಯ ವಿರುದ್ಧವಾಗಿ ಸಂಭವಿಸುವಂತೆ ತೋರುವ ವಿಲಕ್ಷಣ ಸಂಗತಿಗಳ ಅನುಭವ ಇಲ್ಲಿ ಆಗುತ್ತದೆ! ಒಮ್ಮೆಗೆ ಆರು ಮಂದಿಗೆ ಸ್ಥಳಾವಕಾಶವಿದ್ದು ಪ್ರತಿ ಗುಂಪು ಸುಮಾರು 5 ನಿಮಿಷ ಕಾಲ ಪ್ರತಿ ಗುರುತ್ವ ಕುಠೀರದ ಅನುಭವ ಪಡೆಯಬಹುದು.

ಏಮ್ಸ್ ಕೊಠಡಿ : ಈ ಕೋಣೆಯ ಹೊರಗಿನಿಂದ ವೀಕ್ಷಿಸುವಾಗ ಅದರಲ್ಲಿರುವ ವ್ಯಕ್ತಿ ಒಂದು ಕಡೆಯಿಂದ ಇನ್ನೊಂದೆಡೆಗೆ ಸಾಗಿದರೆ ಅವರ ಎತ್ತರದಲ್ಲಿ ಗಮನಾರ್ಹ ವ್ಯತ್ಯಾಸ ಕಾಣಬಹುದು. ಇದೊಂದು ಮನರಂಜನೆ ಹಾಗೂ ಗ್ರಹಿಕಾ ಪ್ರಯೋಗ ಕೋಣೆಯಾಗಿದೆ.

ಗಾತ್ರ, ಬಣ್ಣ, ಚಲನೆ ಮತ್ತು ಬಾಹ್ಯರೇಖೆಗಳಿಗೆ ಸಂಬಂಧಿಸಿದ ವಿವಿಧ ದೃಷ್ಟಿ ಭ್ರಮೆಗಳ ಚಿತ್ರಗಳನ್ನು ಏಮ್ಸ್ ಕೊಠಡಿ ಮತ್ತು ಪ್ರತಿ ಗುರುತ್ವ ಕುಟೀರಗಳ ಸುತ್ತ ಪ್ರದರ್ಶಿಸಲಾಗಿದೆ. ಜಂತರ್ ಮಂತರ್ ಮಾದರಿಗಳು ಸೇರಿದಂತೆ ಸುಮಾರು ಐವತ್ತು ಪ್ರದರ್ಶಿಕೆಗಳಿರುವ ವಿಜ್ಞಾನ ವನ ಸಂದರ್ಶಕರಿಗೆ ಆಟದ ಮೂಲಕ ಕಲಿಕೆಯ ಅನುಭವ ನೀಡುತ್ತದೆ. ವಿಜ್ಞಾನ ವನದ ಭೇಟಿ ಸಾರ್ವಜನಿಕರಲ್ಲಿ ಅದರಲ್ಲೂ ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ ತಾರಾಲಯ ಭೇಟಿಯ ಮೌಲ್ಯ ಹೆಚ್ಚಿಸುತ್ತದೆ.

 

×
ABOUT DULT ORGANISATIONAL STRUCTURE PROJECTS