ವಿಜ್ಞಾನ ಪ್ರದರ್ಶನ

Home

ವಿಜ್ಞಾನ ಪ್ರದರ್ಶನ


ಜಯನಗರದ ನ್ಯಾಷನಲ್‌ ಕಾಲೇಜಿನ ಬಿ. ವಿ. ಜಗದೀಶ್‌ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ 2023 ರ ಜನವರಿ 6 ರಿಂದ 8 ರವರೆಗೆ “ವಿಜ್ಞಾನ ಪ್ರದರ್ಶನ”ವನ್ನು ಆಯೋಜಿಸಲಾಗುತ್ತಿದೆ. ಎಲ್ಲರಿಗೂ ಸ್ವಾಗತ.

Read More..

ವಿಜ್ಞಾನ ಪ್ರದರ್ಶನ : 18-10-2022 ದಿಂದ 20-10-2022

2022 ರ ನವಂಬರ್‌ 18 ರಿಂದ 20 ರವರೆಗೆ ʼವಿಜ್ಞಾನ ಪ್ರದರ್ಶನʼವನ್ನು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಆಸಕ್ತ ಶಾಲೆಗಳು ಮಾದರಿಗಳನ್ನು ಪ್ರದರ್ಶಿಸಲು ಕಛೇರಿಯನ್ನು ಸಂಪರ್ಕಿಸಿ.

ನೋಂದಣಿ ಅರ್ಜಿ

ಕೊನೆಯ ದಿನಾಂಕ: 10.11.2022


ವಿಜ್ಞಾನ ಪ್ರದರ್ಶನ : 02-09-2022 ದಿಂದ 04-09-2022

೨೦೨೨ ರ ಸೆಪ್ಟೆಂಬರ್‌ ೨ ರಿಂದ ಮೂರು ದಿನಗಳ ʼವಿಜ್ಞಾನ ಪ್ರದರ್ಶನʼವನ್ನು ತಾರಾಲಯದಲ್ಲಿ ಆಯೋಜಿಸಲಾಗಿದೆ. ಪ್ರತಿಫಲನದಿಂದ ಬೆಳಕಿನ ದೃವೀಕರಣ, ಶಬ್ದ ಹೊಮ್ಮಿಸುವ ಚಕ್ರ, ವಿದ್ಯುತ್ಕಾಂತೀಯ ಪ್ರೇರಣೆ, ಮರಳೋ ಇಲ್ಲವೇ ಅಂಟೋ?, ಬ್ರೆಜಿ಼ಲ್‌ ನಟ್‌ ಪರಿಣಾಮ ಮತ್ತು ಅದರ ವಿರುದ್ಧ ಪರಿಣಾಮ ಇನ್ನೂ ಮುಂತಾದ ಮಾದರಿಗಳು ಪ್ರದರ್ಶನದಲ್ಲಿರುತ್ತವೆ. ಪ್ರವೇಶ ಉಚಿತ

Read More..

ವಿಜ್ಞಾನ ಪ್ರದರ್ಶನ 2022

ಈ ಪ್ರದರ್ಶನವನ್ನು 2022 ಸೆಪ್ಟೆಂಬರ್‌ 2 ರಿಂದ 4 ರವರೆಗೆ ನಡೆಸಲು ಮರು ನಿಗದಿ ಪಡಿಸಲಾಗಿದೆ. ಸ್ವಯಂಸೇವಕರ ತರಬೇತಿಯು 23ನೇ ಆಗಸ್ಟ್‌ 2022 ರಂದು ಬೆಳಿಗ್ಗೆ 11 ರಿಂದ 1.30 ರವರೆಗೆ ನಡೆಯಲಿದೆ.


"ವಿಜ್ಞಾನ ಪ್ರದರ್ಶನ"

ಈ ಎರಡು ದಿನಗಳ ವರ್ಚುಯಲ್ ಪ್ರದರ್ಶನವನ್ನು ೦೫/೦೩/೨೦೨೨ರ ಶನಿವಾರ ಮಧ್ಯಾಹ್ನ ೩:೦೦ ರಿಂದ ೫:೦೦ ಗಂಟೆಯವರೆಗೂ ಹಾಗೂ ೦೬/೦೩/೨೦೨೨ರ ಭಾನುವಾರದಂದು  ಬೆಳಗ್ಗೆ ೧೦:೩೦ ರಿಂದ ೧೨:೩೦ರವರೆಗೂ ಆಯೋಜಿಸಲಾಗಿದೆ. ಅರಿಶಿನದೊಂದಿಗೆ  ವಿದ್ಯುತ್ ಬರಹಗ್ರಾನುಲಾರ್ ವಸ್ತುವಿನ ಹರಿವಿನಿಂದ ಶಬ್ದ,ಕೋನೋಸ್ಕೋಪಿಕ್ ಚಿತ್ರಗಳುಲೋಹದ ಕೊಳವೆಗಳಿಂದ ಬೀಟ್ಸ್ ರಂದ್ರವಿರುವ ತಟ್ಟೆಯಲ್ಲಿ ಶಬ್ದಇತ್ಯಾದಿ ಕುತೂಹಲಕಾರಿ ಪ್ರಯೋಗಗಳನ್ನು ಇಲ್ಲಿ ನಿದರ್ಶಿಸಲಾಗುವುದು. ಎರಡೂ ದಿನವೂ ವಿಭಿನ್ನ ಪ್ರದರ್ಶಿಕೆಗಳನ್ನು ಪ್ರಸ್ತುತಪಡಿಸಲಾಗುವುದು. ಆಸಕ್ತರು ಈ ಕೆಳಕಂಡ ಲಿಂಕ್ ಬಳಸಿ ಈ ವಿಜ್ಞಾನ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ. 

ಕೊಂಡಿ: https://msteams.link/G3ZV

 


 

ಕೇವಲ ಕೇಳಿದರೆ-ಮರೆಯುವೆ, ನೋಡಿದರೆ-ನೆನಪಿಡುವೆ, ಮಾಡಿದರೆ-ಕಲಿಯುವೆ

“ವಿಜ್ಞಾನ ಪ್ರದರ್ಶನ” – ಇವು ಮೂರು ದಿನಗಳ ಕಾಲ ನಡೆಯುವ ವಿಜ್ಞಾನ ಪ್ರದರ್ಶನಗಳು. ಇವುಗಳಲ್ಲಿ ವೈಜ್ಞಾನಿಕ ನಿಯಮಗಳನ್ನು ನಿರೂಪಿಸುವ ಕ್ರಿಯಾತ್ಮಕ ಮಾದರಿಗಳನ್ನು ಪ್ರದರ್ಶಿಸಲಾಗುವುದು.ಕ್ರಿಯಾತ್ಮಕ ಪ್ರದರ್ಶಿಕೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುವುದು.

ಈ ಪ್ರದರ್ಶನಗಳನ್ನು ವರ್ಷದಲ್ಲಿ ಎರಡು ಬಾರಿ ಏರ್ಪಡಿಸಲಾಗುವುದು. ಮೊದಲ ಪ್ರದರ್ಶನ ಆಗಸ್ಟ್ ತಿಂಗಳಿನಲ್ಲಿ ನಡೆಸಲಾಗುತ್ತದೆ. ವಿವಿಧ ಸಂಶೋಧನಾ ಸಂಸ್ಥೆಗಳಾದ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್, ರಾಮನ್ ಸಂಶೋಧನಾ ಸಂಸ್ಥೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಸೆಂಟರ್ ಫಾರ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ರಿಸರ್ಚ್ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ – ಇವುಗಳ ಸಹಯೋಗದಲ್ಲಿ - ಬೇಸ್ ಸುಮಾರು 20-25 ವಿಜ್ಞಾನ ಮಾದರಿಗಳನ್ನು ಪ್ರತ್ಯಕ್ಷಿಕೆಗಳನ್ನು ಪ್ರದರ್ಶಿಸುತ್ತದೆ. ವಿಜ್ಞಾನ ಕಲಿಕೆಯ ಭಾಗವಾಗಿ ವಿದ್ಯಾರ್ಥಿ ಸ್ವಯಂ ಸೇವಕರಿಗೆ ತರಬೇತಿ ನೀಡಿ, ಪ್ರಾತ್ಯಕ್ಷಿಕೆ ನೀರೂಪಿಸಲು ನಿಯೋಜಿಸಲಾಗುವುದು.


ಎರಡನೇ ಪ್ರದರ್ಶನ ಅಕ್ಟೋಬರ್/ನವಂಬರ್ ನಡುವೆ ಆಯೋಜಿಸಲಾಗುವುದು. ಇದರಲ್ಲಿ ಬೆಂಗಳೂರು ಹಾಗು ಸುತ್ತಮುತ್ತ ಇರುವ ಶಾಲೆಗಳು ಭಾಗವಹಿಸುತ್ತವೆ. ಸುಮಾರು 30 ಪ್ರಯೋಗಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗುವುದು. ಈ ಬಾರಿಯೂ ವಿದ್ಯಾರ್ಥಿಗಳೇ ಪ್ರಯೋಗಗಳ ಕುರಿತು ಸಾರ್ವಜನಿಕರಿಗೆ ವಿವರಣೆ ನೀಡುವರು. ಈ ಪ್ರದರ್ಶನ 7ನೇ ತರಗತಿ ಹಾಗೂ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಹೆಚ್ಚು ಸೂಕ್ತವಾದದ್ದು.
ವಿಜ್ಞಾನ ಪ್ರದರ್ಶನ : ಆಗಸ್ಟ್ 30 ರಿಂದ ಸೆಪ್ಟೆಂಬರ್ 1, 2019
ವಿಜ್ಞಾನ ಪ್ರದರ್ಶನ : 23 ರಿಂದ 25 ನವಂಬರ್ 2018
ವಿಜ್ಞಾನ ಪ್ರದರ್ಶನ : 31ನೇ ಆಗಸ್ಟ್ ನಿಂದ 2ನೇ ಸೆಪ್ಟೆಂಬರ್ 2018

 

 
×
ABOUT DULT ORGANISATIONAL STRUCTURE PROJECTS