ಸಾಮಾನ್ಯವಾಗಿ ಕೇಳಲ್ಪಡುವ ಪ್ರಶ್ನೆಗಳು

Home

ಸಾಮಾನ್ಯವಾಗಿ ಕೇಳಲ್ಪಡುವ ಪ್ರಶ್ನೆಗಳು

**ತಾರಾಲಯದ ವಿವಿಧ ಕಾರ್ಯಕ್ರಮಗಳ ಬಗ್ಗೆ ತಿಳಿಯುವುದು ಹೇಗೆ ?
ತಾರಾಲಯದ ಜಾಲತಾಣ, ಫೇಸ್ಬುಕ್, ಟ್ವಿಟರ್ ಅಥವಾ ಪತ್ರಿಕಾ ಪ್ರಕಟಣೆಗಳನ್ನು ನೋಡಬಹುದು. 'ತಾರಾಲಯದ ಸದಸ್ಯತ್ವ ಕೂಟ' ಸೇರಿದರೆ ಇನ್ನು ಹೆಚ್ಚಿನ ಉಪಯೋಗವಾಗಲಿದೆ.
 
**ನನ್ನ ಆರು ವರ್ಷದ ಮಗ ಖಗೋಳಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದಾನೆ. ಅವನು ತಾರಾಲಯದ ಸೌಲಭ್ಯಗಳನ್ನು ಹೇಗೆ ಅತ್ಯುತ್ತಮವಾಗಿ ಬಳಸಿಕೊಳ್ಳಬಹುದು?

ತಾರಾಲಯದಲ್ಲಿ ಪ್ರತಿ ತಿಂಗಳು ಮೊದಲ ಭಾನುವಾರ "ನಕ್ಷತ್ರ ವೀಕ್ಷಣೆ" ಎಂಬ ಕಾರ್ಯಕ್ರಮವನ್ನು ನಡೆಸುತ್ತೇವೆ. ಮೂರನೇ ಭಾನುವಾರದಂದು ನಾವು ವಿಜ್ಞಾನ ಚಿತ್ರ ಪ್ರದರ್ಶನ ಏರ್ಪಡಿಸುತ್ತೇವೆ. ಇವೆರಡೂ ತುಂಬಾ ಸಹಾಯಕ.

 

**ನಾವು ಹತ್ತನೇ ತರಗತಿಯಲ್ಲಿನ ೩೦ ಮಕ್ಕಳನ್ನು ಪ್ರದರ್ಶನ ವೀಕ್ಷಣೆಗಾಗಿ ಕರೆತರಲು ಇಚ್ಛಿಸುತ್ತೇವೆ. ಕೇವಲ ೩೦ ಮಕ್ಕಳಿಗೆ ಬುಕಿಂಗ್ ಮಾಡಲು ಸಾಧ್ಯವೇ, ನಿಮ್ಮ ಸಲಹೆಯೇನು.?

ನಿಮ್ಮ ವಿದ್ಯಾರ್ಥಿಗಳನ್ನು ಸಾರ್ವಜನಿಕ ಪ್ರದರ್ಶನಗಳಿಗೆ ಮಧ್ಯಾಹ್ನದ ವೇಳೆ, ವಾರದ ದಿನಗಳಲ್ಲಿ ಕರೆತನ್ನಿ. ಅಥವಾ ಬುಕ್ ಮೈ ಶೋ ಜಾಲತಾಣದಿಂದ ಮುಂಗಡ ಟಿಕೆಟ್ ಗಳನ್ನು ಕಾಯ್ದಿರಿಸಬಹುದು.

 

**ಬೇಸಿಗೆ ಶಿಬಿರಗಳ ಬಗ್ಗೆ ತಿಳಿಸಿ. ಒಂಭತ್ತು ವರ್ಷದ ನನ್ನ ಮಗನನ್ನು ತಾರಾಲಯದ ಕಾರ್ಯಕ್ರಮಗಳಿಗೆ ನೋಂದಾಯಿಸಬಹುದೇ ?

ಬೇಸಿಗೆಕಾರ್ಯಕ್ರಮಗಳು ಏಪ್ರಿಲ್ ತಿಂಗಳಿನಲ್ಲಿ ಪ್ರಾರಂಭವಾಗುತ್ತದೆ. ನಿಮ್ಮ ಮಗು ಮೂರನೇ ತರಗತಿ ಮುಗಿಸಿದ್ದರೆ, ಚಿಣ್ಣರ ಕಾರ್ಯಕ್ರಮಕ್ಕೆ ನೋಂದಾಯಿಸಬಹುದು.

 

**ಸಾರ್ವಜನಿಕರಿಗೆ ನಿಮ್ಮ ಗ್ರಂಥಾಲಯ ಬಳಸಲು ಅನುಮತಿಯಿದೆಯೇ ?

ಇಲ್ಲ. ತಾರಾಲಯದಲ್ಲಿ ವರ್ಷ ಪೂರ್ತಿ ನಡೆಯುವ ಕಾರ್ಯಕ್ರಮಗಳಿಗೆ ನೋಂದಾಯಿತರಾದ ವಿದ್ಯಾರ್ಥಿಗಳಿಗೆ ಮಾತ್ರ ಗ್ರಂಥಾಲಯ ಬಳಸಲು ಅನುಮತಿಯಿದೆ.

 

**ವಿದೇಶದಿಂದ ಬಂದಿರುವ ೧೦ ಮಂದಿಗೆ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯವಿದೆಯೇ. ? ಆನ್ಲೈನ್ ಬುಕಿಂಗ್ ಸೌಲಭ್ಯವಿದೆಯೇ. ಹತ್ತು ಆಸನಗಳನ್ನು ಕಾಯ್ದಿರಿಸುವಿರಾ?

'ಬುಕ್ ಮೈ ಶೋ' ಅಂತರ್ಜಾಲದ ಮುಖಾಂತರ ನೇರವಾಗಿ ಕಾಯ್ದಿರಿಸುವ ಸೌಲಭ್ಯವಿದೆ.

 

** ನಾವು ತಾರಾಲಯದ ಆವರಣದಲ್ಲಿ ಎಷ್ಟು ಸಮಯವನ್ನು ಕಳೆಯಬಹುದು?

ಆಕಾಶ ಮಂದಿರದ ಪ್ರದರ್ಶನ: 40 ನಿಮಿಷಗಳು; ನಿರ್ದಿಷ್ಟ ಕಾರ್ಯಕ್ರಮದ ವರ್ಣಮಯ ಭಿತ್ತಿಚಿತ್ರಗಳ ವೀಕ್ಷಣೆ :15 ನಿಮಿಷಗಳು; ವಿಜ್ಞಾನ ವನಕ್ಕೆ ಭೇಟಿ : 60 ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಲಾಗಿದೆ : ಸುಮಾರು 60 ನಿಮಿಷಗಳು; ಅಗತ್ಯವಿರುವ ಒಟ್ಟು ಸಮಯ ಸುಮಾರು ಎರಡರಿಂದ ಮೂರು ಗಂಟೆಗಳು.

×
ABOUT DULT ORGANISATIONAL STRUCTURE PROJECTS