ಕಮ್ಮಟಗಳು

Home

ಜವಹಾರ್ಲಾಲ್‌ ನೆಹರು ತಾರಾಲಯವು ದೂರದರ್ಶಕ ಎರವಲು ಸೌಲಭ್ಯವನ್ನು ಶುರು ಮಾಡುತ್ತಿದೆ. ಹೆಚ್ಚಿನ ಮಾಹಿತಿಯನ್ನು ಪೋಸ್ಟರ್‌ ನಲ್ಲಿ ನೀಡಲಾಗಿದೆ. ಆಸಕ್ತರು ಈ ಲಿಂಕ್ ನ ಮೂಲಕ ನೋಂದಾಯಿಸಿಕೊಳ್ಳಬಹುದು. 

https://tinyurl.com/3r24auak

_______________________________________________________________________________________________________________________

ತರಾಲಯದಲ್ಲಿ ದೂರದರ್ಚಕ ಜೋಡಣಾ ಕಮ್ಮಟವು 12 ರಿಂದ 14 ಏಪ್ರಿಲ್‌ ರಂದು ನಡೆಯಲಿದೆ. ಆಸಕ್ತರು ಇ ಮೇಲ್‌ ಮೂಲಕ ನೋಂದಾಯಿಸಿಕೊಳ್ಳಬಹುದು. ಇ ಮೇಲ್‌ ಐಡಿ - info@taralaya̤org

______________________________________________________________________________________________________________________________________

ಮಾರ್ಚ್‌ 21, 2024 ರಂದು ಜವಾಹಾರ್ಲಾಲ್‌ ನೆಹರು ತಾರಾಲಯವು ʼಸೌರ ಖಗೋಳ ಶಾಸ್ತ್ರʼ ದ ಮೇಲೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಕಮ್ಮಟವನ್ನು ಆಯೋಜಿಸಿದೆ. ಆಸಕ್ತ ವಿದ್ಯಾರ್ಥಿಗಳು ನಮಗೆ ಇ ಮೇಲ್‌ ಕಳುಹಿಸಿ ನೋಂದಾಯಿಸಿಕೊಳ್ಳಬಹುದು. ಆಸಕ್ತ ಪದವೀಪೂರ್ವ ವಿದ್ಯಾರ್ಥಿಗಳೂ ಕೂಡ ಭಾಗವಹಿಸಬಹುದು.

________________________________________________________________________________________________________________________________________

 

ಪ್ರೌಢಶಾಲಾ ಶಿಕ್ಷಕರಿಗಾಗಿ 20ನೇ ಜುಲೈ 2023 ರಂದು ಬೆ.10.30 ರಿಂದ ಮ.3.30 ರವರೆಗೆ “ಬಹುಪದೋಕ್ತಿ” ವಿಷಯದ ಕುರಿತು ಒಂದು ದಿನದ ಕಮ್ಮಟವನ್ನು ಆಯೋಜಿಸಲಾಗಿದೆ. ನೋಂದಣಿ ಶುಲ್ಕ ತಲಾ ರೂ.400/-.

ವಿಜ್ಞಾನ ಕೂಟ

ಈ ತಿಂಗಳ ವಿಜ್ಙನ ಕೂಟವು “ಹಿನ್ನೆಲೆ ಗುರುತ್ವ ಅಲೆ” ಎಂದ ವಿಷಯದ ಕುರಿತು 9ನೇ ಜುಲೈ 2023 ರಂದು ಸಂಜೆ 4 ಗಂಟೆಗೆ ತಾರಾಲಯದಲ್ಲಿ ನಡೆಯಲಿದೆ. ಪ್ರವೇಶ ಉಚಿತ.

Read More


ಗುರುತ್ವಾಕರ್ಷಣೆ

ಪ್ರೌಢಶಾಲಾ ಶಿಕ್ಷಕರಿಗಾಗಿ “ಗುರುತ್ವಾಕರ್ಷಣೆ” ವಿಷಯದ ಕುರಿತು 13.07.2023 ರಂದು ಬೆ.10.30 ರಿಂದ ಮ.3.30 ರವರೆಗೆ ಕಮ್ಮಟವನ್ನು ಆಯೋಜಿಸಲಾಗಿದೆ. ಪ್ರವೇಶ ದರ ರೂ.400/-.


ವಿಜ್ಞಾನ ಕೂಟ

ಈ ತಿಂಗಳ ವಿಜ್ಞಾನ ಕೂಟದ ಚರ್ಚೆಯು “ಜೇಮ್ಸ್ ವೆಬ್ ಅಂತರಿಕ್ಷ ದೂರದರ್ಶಕ : ವಿಶ್ವದ ರಹಸ್ಯಗಳ ಅನಾವರಣ” ವಿಷಯದ ಕುರಿತು ೧೧ನೇ ಜೂನ್‌ ೨೦೨೩ ರಂದು ಸಂಜೆ ೪ ರಿಂದ ೫:೩೦ ರವರೆಗೆ ನಡೆಯಲಿದೆ. ಪ್ರವೇಶ ಉಚಿತ.


25.02.2023 ರಂದು ನಡೆಯಬೇಕಿದ್ದ 'ಬುಕ್ ಲಾಂಚ್ ಇವೆಂಟ್ ' ಫಾರ್ ಐಥಿಂಕ್ ಬಯಲಾಜಿ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು.


ಈ ಬಾರಿಯ ವಿಜ್ಞಾನ ಕೂಟವು “ಧೂಮಕೇತುಗಳು: ಇವುಗಳ ಹುಡುಕಾಟ ಮತ್ತು ಹೆಸರಿಡುವ ಬಗೆ” ಕುರಿತು 12.02.2023 ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಪ್ರವೇಶ ಉಚಿತ.


1ನೇ ಫೆಬ್ರವರಿ 2023 ರಂದು ನಡೆಯಲಿರುವ “ರಾತ್ರಿ ಆಕಾಶ ವೀಕ್ಷಣೆ” ಕಾರ್ಯಕ್ರಮದ ನೋಂದಣಿಯು ಮುಕ್ತಾಯವಾಗಿದೆ.̤


ತಾರಾಲಯದಲ್ಲಿ ರಾತ್ರಿ ಆಕಾಶ ವೀಕ್ಷಣೆ

“೧ನೇ ಫೆಬ್ರವರಿ 2023 ರಂದು ರಾತ್ರಿ ೧೦ ಗಂಟೆಯಿಂದ ಮುಂಜಾವು ೪:೩೦ ರವರೆಗೆ ರಾತ್ರಿ ಆಕಾಶ ವೀಕ್ಷಣಾ ಕಾರ್ಯಕ್ರಮವನ್ನು ತಾರಾಲಯವು ಹಮ್ಮಿಕೊಂಡಿದೆ. ಈ ಕಾರ್ಯಕ್ರಮವು ರಾತ್ರಿ ಆಕಾಶ ಪರಿಚಯ, ಬರಿಗಣ್ಣಿನ ವೀಕ್ಷಣೆ, ಜೆಮಿನಿಡ್ಸ್ ಉಲ್ಕಾವೃಷ್ಟಿ ವೀಕ್ಷಣೆಯನ್ನು ಒಳಗೊಂಡಿದೆ. ಶುಲ್ಕ ತಲಾ ರೂ.೫೦೦/-. ೧೩ ವರ್ಷ ಮೇಲ್ಪಟ್ಟ ಆಸಕ್ತರು info@taralaya.org ಕ್ಕೆ ಇಮೇಲ್‌ ಕಳುಹಿಸುವ ಮೂಲಕ ನೋಂದಾಯಿಸಬಹುದು.

Read More

"ಯೂನಿವರ್ಸ್‌ ಇನ್‌ ದಿ ಕ್ಲಾಸ್‌ರೂಮ್"

23ನೇ ಡಿಸೆಂಬರ್‌ 2022 ರಿಂದ ಸಂಜೆ 4 ರಿಂದ 7 ರವರೆಗೆ ಮೂರು ದಿನಗಳ ಕಮ್ಮಟವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ಚರ್ಚೆ, ಮಾದರಿಗಳ ನಿದರ್ಶನ ಮತ್ತು ಆಕಾಶ ಮಂದಿರದ ಒಳಗೆ ಮತ್ತು ಸಾಧ್ಯವಾದಲ್ಲಿ ನೈಜ ಆಕಾಶದಲ್ಲಿಯೂ ನಕ್ಷತ್ರ ಪುಂಜಗಳನ್ನು ಗುರುತಿಸುವುದು ಮೊದಲಾದ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.

Read More


"ರಾಷ್ಟ್ರೀಯ ಗಣಿತ ದಿನ"

ಜವಾಹರ್ ಲಾಲ್ ನೆಹರು ತಾರಾಲಯವು "ರಾಷ್ಟ್ರೀಯ ಗಣಿತ ದಿನದ" ಅಂಗವಾಗಿ ದಿನಾಂಕ 22/12/2022 ರಂದು ಪ್ರೌಢಶಾಲಾ ಶಿಕ್ಷಕರಿಗಾಗಿ "ಗಣಿತ ಕುಣಿತ" ಎನ್ನುವ ಅರ್ಧ ದಿನದ ಕಾರ್ಯಾಗಾರವನ್ನು ಆಯೋಜಿಸಿದೆ. ಶ್ರೀ ಬಿ ಎಸ್ ಕೃಷ್ಣಮೂರ್ತಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಬಂದು ಹಲವಾರು ರಂಜನೀಯ ಚಟುವಟಿಕೆಗಳ ಮೂಲಕ ಗಣಿತ ಕಲಿಯುವ ಕಲೆಯನ್ನು ಇಲ್ಲಿ ಚರ್ಚಿಸಲಿದ್ದಾರೆ.

Read More


ವಿಜ್ಞಾನ ಕೂಟ:

ಈ ಬಾರಿಯ ವಿಜ್ಞಾನ ಕೂಟದಲ್ಲಿ ಮರಳು ಮತ್ತಿತರ ಗ್ರಾನುಲಾರ್ ವಸ್ತುಗಳಲ್ಲಿ ಕಂಡುಬರುವ ಕೆಲವು ವಿಶಿಷ್ಟ ವಿದ್ಯಮಾನಗಳನ್ನು ನಿದರ್ಶನಗಳ ಮೂಲಕ ಚರ್ಚಿಸಲಾಗುವುದು.
11.12.2022 ಸಂಜೆ 4 ಗಂಟೆಗೆ̤
ಪ್ರವೇಶ ಉಚಿತ

Read More


ಒಂದು ದಿನದ ಕಮ್ಮಟವನ್ನು ೭ ಮತ್ತು ೮ನೇ ಡಿಸೆಂಬರ್‌ ೨೦೨೨ ರಂದು ಬೆಳಿಗ್ಗೆ ೧೦:೩೦ ರಿಂದ ಮಧ್ಯಾಹ್ನ ೩:೩೦ ರವರೆಗೆ ಆಯೋಜಿಸುತ್ತಿದೆ.

ಜವಾಹರ್‌ಲಾಲ್‌ ನೆಹರು ತಾರಾಲಯವು ವಿಶೇಷ ಚೇತನರಿಗಾಗಿ ಎರಡು ತಂಡಗಳ ಒಂದು ದಿನದ ಕಮ್ಮಟವನ್ನು ೭ ಮತ್ತು ೮ನೇ ಡಿಸೆಂಬರ್‌ ೨೦೨೨ ರಂದು ಬೆಳಿಗ್ಗೆ ೧೦:೩೦ ರಿಂದ ಮಧ್ಯಾಹ್ನ ೩:೩೦ ರವರೆಗೆ ಆಯೋಜಿಸುತ್ತಿದೆ. ಆಸಕ್ತರು info@taralaya.org ಗೆ ಸಂದೇಶ ಕಳುಹಿಸುವ ಮೂಲಕ ನೋಂದಾಯಿಸಬಹುದು. ಪ್ರವೇಶ ಉಚಿತ ಮತ್ತು ಮೊದಲು ಬಂದವರಿಗೆ ಆದ್ಯತೆ.

Read More


ವಿಜ್ಞಾನ ಕೂಟ
ವಿಷಯ: ಸೃಜನಶೀಲ ವಿಜ್ಞಾನಿ ಜೆ ಸಿ ಬೋಸ್

೨೦೨೨ ರ ನವೆಂಬರ್ ೧೩, ಭಾನುವಾರ ಸಮಯ: ೪ ಘಂಟೆಗೆ ತಾರಾಲಯದಲ್ಲಿ ವಿದ್ಯುತ್ಕಾಂತೀಯ ವಿಕಿರಣಗಳು ಹಾಗು ಸಸ್ಯಗಳ ಕುರಿತಾಗಿ ಜಗದೀಶ್ ಚಂದ್ರ ಬೋಸ್ ರ ಮಹತ್ತರ ಪ್ರಶ್ನೆಗಳು ಹಾಗು ಅವರು ನಡೆಸಿದ ಪ್ರಯೋಗಗಳ ಬಗ್ಗೆ ಒಂದು ಸ್ಥೂಲ ಪರಿಚಯವನ್ನು ನೀಡಲಾಗುವುದು.

Read More


ಅನ್ಯಗ್ರಹಗಳ ಅನ್ವೇಷಣೆ : ಕುರಿತಾದ ವಿಶೇಷ ಕಾರ್ಯಕ್ರಮ

ಅನ್ಯಗ್ರಹ ಜೀವಿಗಳ ಕುರಿತಾದ ಮಾನವ ಸಹಜ ಕುತೂಹಲವು ಇದುವರೆಗೂ ಸುಮಾರು ಐದು ಸಾವಿರಕ್ಕೂ ಹೆಚ್ಚು ಅನ್ಯಗ್ರಹಗಳ ಅನ್ವೇಷಣೆಗೆ ನಾಂದಿಯಾಗಿದೆ. ಈ ವಿಶೇಷ ಕಾರ್ಯಾಗಾರದಲ್ಲಿ ಅನ್ಯಗ್ರಹಗಳು ಮತ್ತು ಅವುಗಳ ಪತ್ತೆ ಮಾಡುವ ವಿಧಾನಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಗುವುದು.

ಅನ್ಯಗ್ರಹಗಳ ಕುರಿತಾದ ವಿಷಯಗಳಲ್ಲಿ ಆಸಕ್ತಿ ಇರುವ ಯಾರಾದರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

Zoom Link : https://us06web.zoom.us/j/83562608090?pwd=MEVITTBITzBiOCtaRkZyQktvVVByZz09

Read More


ಕ್ಷೇತ್ರ ಗಣಿತ

“ಪ್ರೌಢಶಾಲಾ ಶಿಕ್ಷಕರಿಗಾಗಿ 22ನೇ ಸೆಪ್ಟೆಂಬರ್‌ 2022 ರಂದು “ಕ್ಷೇತ್ರ ಗಣಿತ” ವಿಷಯದ ಕುರಿತು ಒಂದು ದಿನದ ಕಮ್ಮಟವನ್ನು ತಾರಾಲಯದಲ್ಲಿ ಆಯೋಜಿಸಲಾಗಿದೆ. ಪ್ರವೇಶ ಶುಲ್ಕ ತಲಾ ರೂ.300/-.

Read More


ಬಲ ಮತ್ತು ಒತ್ತಡ

“ಬಲ ಮತ್ತು ಒತ್ತಡ” ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಪ್ರೌಢಶಾಲಾ ಶಿಕ್ಷಕರಿಗಾಗಿ ೧೫ನೇ ಸೆಪ್ಟೆಂಬರ್‌ ೨೦೨೨ ರಂದು ಬೆ.೧೦:೩೦ ರಿಂದ ೩”೩೦ ರವರೆಗೆ ನಡೆಯಲಿದೆ. ಶುಲ್ಕ ತಲಾ ರೂ.೩೦೦/-

Read More


ಗಣಿತ ವಿನೋದ

ತಿಂಗಳ ವಿಜ್ಞಾನ ಕೂಟ ಕಾರ್ಯಕ್ರಮವು ʼಗಣಿತ ವಿನೋದʼ ವಿಷಯದ ಕುರಿತು ೧೧ನೇ ಸೆಪ್ಟೆಂಬರ್‌ ೨೦೨೨ ರಂದು ಸಂಜೆ ೪ ರಿಂದ ೫:೩೦ ರವರೆಗೆ ನಡೆಯಲಿದೆ. ಪ್ರವೇಶ ಉಚಿತ.

Read More


ವಿಜ್ಞಾನ ಕೂಟ

ತಿಂಗಳ ವಿಜ್ಞಾನ ಕೂಟವು “ಬಬಲ್‌ ಗಳ ಅದ್ಭುತ ಲೋಕ” ಎಂಬ ವಿಷಯದ ಕುರಿತು 14ನೇ ಆಗಸ್ಟ್‌ 2022 ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಪ್ರವೇಶ ಉಚಿತ.

Read More


ಜವಾಹರ್‌ಲಾಲ್‌ ನೆಹರು ತಾರಾಲಯವು “ಲೋಹಗಳು ಮತ್ತು ಅಲೋಹಗಳು” ಎಂಬ ವಿಷಯದ ಕುರಿತು ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗಾಗಿ ಒಂದು ದಿನದ ಕಮ್ಮಟವನ್ನು 4ನೇ ಆಗಸ್ಟ್‌ 2022 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3.30 ರವರೆಗೆ ಆಯೋಜಿಸಿದೆ. ಶುಲ್ಕ ತಲಾ ರೂ.300/-.

ನೋಂದಣಿ ಕೊಂಡಿ: https://in.bookmyshow.com/bengaluru/events/chemistry/ET00335637

 

ತ್ರಿಕೋನಮಿತಿ - ಕಮ್ಮಟ

ದಿ.14.07.2022 ರಂದು ಶಿಕ್ಷಕರಿಗಾಗಿ ಒಂದು ದಿನದ ಕಮ್ಮಟ. ತ್ರಿಕೋನಮಿತಿಗೆ ಸಂಬಂಧಿಸಿದ ವಿಚಾರಗಳನ್ನು ಚಟುವಟಿಕೆಗಳ ಮೂಲಕ ಚರ್ಚಿಸಲಾಗುವುದು. ತ್ರಿಕೋನಮಿತಿಯ ಉಪಯುಕ್ತತೆಯನ್ನು ತಿಳಿಸುವ ಉದಾಹರಣೆಗಳನ್ನೂ ಇಲ್ಲಿ ಚರ್ಚಿಸಲಾಗುವುದು.

ನೋಂದಣಿ ಕೊಂಡಿ

Read More


ಬೆಳಕು

ದಿನಾಂಕ ೦೭/೦೭/೨೦೨೨ ರಂದು ಪ್ರೌಢಶಾಲಾ ಶಿಕ್ಷಕರಿಗಾಗಿ "ಬೆಳಕು " ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿದೆ. ಬೆಳಕಿನ ಪ್ರತಿಫಲನ ಮತ್ತು ವಕ್ರೀಭವನಕ್ಕೆ ಸಂಬಂಧಿಸಿದ ವಿಚಾರಗಳನ್ನು ಚಟುವಟಿಕೆ ಮತ್ತು ಪ್ರಯೋಗಗಳ ನಿದರ್ಶನದ ಮೂಲಕ ಚರ್ಚಿಸುವುದು ಈ ಕಾರ್ಯಾಗಾರದ ಧ್ಯೇಯವಾಗಿದೆ.
ಸಮಯ: ಬೆಳಗ್ಗೆ ೧೦:೩೦ ರಿಂದ ಮಧ್ಯಾಹ್ನ ೩:೩೦ ರವರೆಗೆ
ಸ್ಥಳ : ಜವಾಹರ್ ಲಾಲ್ ನೆಹರು ತಾರಾಲಯ
ನೋಂದಣಿ ಶುಲ್ಕ : ರೂ ೩0೦/-

ನೋಂದಣಿ ಕೊಂಡಿ: https://in.bookmyshow.com/bengaluru/events/light/ET00333048


"ಕಾಗದದಲ್ಲಿ ವಿಜ್ಞಾನ" : ತಿಂಗಳ ವಿಜ್ಞಾನ ಕೂಟ ಕಾರ್ಯಕ್ರಮವು 12ನೇ ಜೂನ್ 2022 ರಂದು ಸಂಜೆ 4 ರಿಂದ 5:30 ರವರೆಗೆ ನಡೆಯಲಿದೆ.


ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ ಉಡಾವಣೆಯ ಹಿನ್ನೆಲೆಯಲ್ಲಿ ಬಾಹ್ಯಾಕಾಶ ದೂರದರ್ಶಕಗಳ ಅಗತ್ಯತೆಯ ಮರುಪರಿಶೀಲನೆ

ತಿಂಗಳ ವಿಜ್ಞಾನ ಕೂಟ ಕಾರ್ಯಕ್ರಮವು ವರ್ಚುವಲ್ ಮಾದರಿಯಲ್ಲಿ 16ನೇ ಜನವರಿ 2022 ರಂದು ಸಂಜೆ 4 ರಿಂದ 5:30 ರವರೆಗೆ ನಡೆಯಲಿದೆ.

ಕಾರ್ಯಕ್ರಮದ ಕೊಂಡಿ: https://meet.google.com/eix-tpeb-tkt


ಹಗಲಿನ ಖಗೋಳಶಾಸ್ತ್ರ ಚಟುವಟಿಕೆಗಳು

13 ವರ್ಷ ಮೇಲ್ಪಟ್ಟ ಬಾಲಕಿಯರಿಗಾಗಿ 'ಹಗಲಿನ ಖಗೋಳಶಾಸ್ತ್ರ ಚಟುವಟಿಕೆಗಳು' ಎಂಬ ಒಂದು ದಿನದ ಕಮ್ಮಟವನ್ನು 2022 ರ ಜನವರಿ 13 ರಂದು ಬೆಳಿಗ್ಗೆ 10.30 – ಮಧ್ಯಾಹ್ನ 3:30 ರವರೆಗೆ ಆಯೋಜಿಸಲಾಗಿದೆ. ಪ್ರವೇಶ ಉಚಿತ. ಭಾಗವಹಿಸುವಿಕೆಯನ್ನು ಕಛೇರಿಯಲ್ಲಿ ದೂರವಾಣಿ ಮುಖೇನ ಅಥವಾ ಮಿಂಚಂಚೆ – info@taralaya.org. ಮೂಲಕ ನೋಂದಾಯಿಸಿದವರು ಮಾತ್ರ ಪಾಲ್ಗೊಳ್ಳಬಹುದು. ಮೊದಲು ಬಂದವರಿಗೆ ಆದ್ಯತೆ.


ರಾಷ್ಟ್ರೀಯ ಗಣಿತ ದಿನಾಚರಣೆ

ಶಿಕ್ಷಕರಿಗಾಗಿ ರಂಜನೀಯ ಗಣಿತ’ ಎಂಬ ಅರ್ಧ ದಿನದ ಕಾರ್ಯಕ್ರಮವನ್ನು 2021 ರ ಡಿಸೆಂಬರ್ 22 ರಂದು ಬೆಳಿಗ್ಗೆ 10.30 – ಮಧ್ಯಾಹ್ನ 1:00 ರವರೆಗೆ ಆಯೋಜಿಸಲಾಗಿದೆ. ಪ್ರವೇಶ ಉಚಿತ.

ಕಾರ್ಯಕ್ರಮದ  ಕೊಂಡಿhttps://msteams.link/UME0  


13 ವರ್ಷ ಮೇಲ್ಪಟ್ಟವರಿಗಾಗಿ ಹಗಲಿನ ಖಗೋಳಶಾಸ್ತ್ರ ಚಟುವಟಿಕೆಗಳು’ ಎಂಬ ಒಂದು ದಿನ ಕಮ್ಮಟವನ್ನು 2021 ರ ಡಿಸೆಂಬರ್ 21 ರಂದು ಬೆಳಿಗ್ಗೆ 10.30 – ಮಧ್ಯಾಹ್ನ 3:30 ರವರೆಗೆ ಆಯೋಜಿಸಲಾಗಿದೆ. ಪ್ರವೇಶ ಶುಲ್ಕ ತಲಾ ರೂ.150/-.

ನೋಂದಾವಣಿ ಕೊಂಡಿ Registration Link : https://in.bookmyshow.com/events/daytime-astronomy/ET00319896?webview=true

 

 

ಯೂನಿವರ್ಸ್ ಇನ್ ದಿ ಕ್ಲಾಸ್ ರೂಮ್

13 ಮತ್ತು 14ನೇ ಫೆಬ್ರವರಿ 2021 ರಂದು ಸಂ.4 ರಿಂದ 7 ರವರೆಗೆ "ಯೂನಿವರ್ಸ್ ಇನ್ ದಿ ಕ್ಲಾಸ್ ರೂಮ್" ಎಂಬ ಎರಡು ದಿನದ ಕಮ್ಮಟವನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗಿದೆ. ಪ್ರವೇಶ ದರ ರೂ.350/-.


ದಿ.14.02.2021 ರಂದು ಸಂ.4 – 5:30 ರವರೆಗೆ ವಿಜ್ಞಾನ ಕೂಟ

"ಗೆಲಿಲಿಯೋ ಅವರ ವೈಜ್ಞಾನಿಕ ಜೀವನ ಗಾಥೆ"

ವಿಜ್ಞಾನದ ಸಿದ್ಧಾಂತ ಮತ್ತು ಪ್ರಯೋಗಗಳಿಗೆ ಗೆಲಿಲಿಯೋ ಅವರ ಕೊಡುಗೆಯು ಬಹಳ ಮಹತ್ವವುಳ್ಳದ್ದು. ಇವರ ಕಾರ್ಯಸಾಧನೆಯನ್ನು ವಿಜ್ಞಾನದ ಎಲ್ಲಾ ಭಾಗಗಳಲ್ಲಿ ಮುಖ್ಯವಾಗಿ ಚಲನಶಾಸ್ತ್ರ, ದೃಗ್ವಿಜ್ಞಾನ, ಜೀವವಿಜ್ಞಾನ ಮತ್ತು ಖಗೋಳ ವಿಜ್ಞಾನಗಳಲ್ಲಿ ಕಾಣಬಹುದಾಗಿದೆ. ಈ ಕೂಟದಲ್ಲಿ ಅವರ ಕಾರ್ಯಸಾಧನೆಯನ್ನು ವಿವಿಧ ಪ್ರಯೋಗಗಳು ಮತ್ತು ಚರ್ಚೆಯ ಮೂಲಕ ಪರಿಚಯಿಸಲಾಗುವುದು.

ಈ ವಿಜ್ಞಾನ ಕೂಟಕ್ಕೆ 7ನೇ ತರಗತಿ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ವಿಜ್ಞಾನದ ಕುರಿತು ಆಸಕ್ತಿ ಹೊಂದಿರುವ ಸಾರ್ವಜನಿಕರು ಭಾಗವಹಿಸಬಹುದಾಗಿದೆ.


ಯೂನಿವರ್ಸ್ ಇನ್ ದಿ ಕ್ಲಾಸ್ ರೂಮ್

16 ಮತ್ತು 17ನೇ ಜನವರಿ 2021 ರಂದು ಸಂ.4 ರಿಂದ 7 ರವರೆಗೆ "ಯೂನಿವರ್ಸ್ ಇನ್ ದಿ ಕ್ಲಾಸ್ ರೂಮ್" ಎಂಬ ಎರಡು ದಿನದ ಕಮ್ಮಟವನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗಿದೆ. ಪ್ರವೇಶ ದರ ರೂ.350/-.


ಹಗಲಿನ ಖಗೋಳಶಾಸ್ತ್ರ ಚಟುವಟಿಕೆಗಳು

21ನೇ ಜನವರಿ 2021 ರಂದು ಬೆ.10:30 ರಿಂದ ಮ.3:30 ರವರೆಗೆ "ಹಗಲಿನ ಖಗೋಳಶಾಸ್ತ್ರ ಚಟುವಟಿಕೆಗಳು" ಎಂಬ ಒಂದು ದಿನದ ಕಮ್ಮಟವನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ. ಪ್ರವೇಶ ದರ ರೂ.150/-.


ತಿಂಗಳ ವಿಜ್ಞಾನ ಕೂಟ

ಈ ತಿಂಗಳ ವಿಜ್ಞಾನ ಕೂಟವು "ದೃಶ್ಯೀಕರಣದ ಮೂಲಕ ವಿಜ್ಞಾನ ಸಂವಹನ" ವಿಷಯದ ಕುರಿತು ತರಗತಿಯು ದಿ.10.01.2021 ರಂದು ಸಂ. 4- 5:30 ಗಂಟೆಯವರೆಗೆ ನಡೆಯಲಿದೆ.


ರಾಷ್ಟ್ರೀಯ ಗಣಿತ ದಿನಾಚರಣೆ

ತಾರಾಲಯವು ರಾಷ್ಟ್ರೀಯ ಗಣಿತ ದಿನದ ಅಂಗವಾಗಿ ದಿ.22.12.2020 ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವರ್ಚುವಲ್ ಕಾರ್ಯಾಗಾರವನ್ನು ಆಯೋಜಿಸಿದೆ. ಗಣಿತವನ್ನು ಕಲೆಯ ಮುಖಾಂತರ ತಿಳಿಯುವ ಧ್ಯೇಯದೊಂದಿಗೆ ಆಯೋಜಿಸಲಾಗಿರುವ ಕಾರ್ಯಾಗಾರದಲ್ಲಿ "ಸಮ್ಮಿತಿ" ಎಂಬ ವಿಷಯವನ್ನು ಕಲಾತ್ಮಕ ಚಟುವಟಿಕೆಗಳ ಮೂಲಕ ಚರ್ಚಿಸಲಾಗುವುದು.


ತಿಂಗಳ ವಿಜ್ಞಾನ ಕೂಟ

ಈ ತಿಂಗಳ ವಿಜ್ಞಾನ ಕೂಟವು "ಗುರು ಹಾಗೂ ಶನಿ ಗ್ರಹದ ಯುತಿ" ವಿಷಯದ ಕುರಿತು ವರ್ಚುವಲ್ ತರಗತಿಯು ದಿ.13.12.2020 ರಂದು ಸಂ. 4 - 5 ಗಂಟೆಯವರೆಗೆ ನಡೆಯಲಿದೆ. ಕಾರ್ಯಕ್ರಮದ ಕೊಂಡಿಯನ್ನು ಶೀಘ್ರವೇ ನಮ್ಮ ಜಾಲತಾಣ (https://taralaya.org/kannada/announcements-kannada.php)/ಟ್ವಟರ್/ಫೇಸ್ಬುಕ್/ಯೂಟ್ಯೂಬ್ ನಲ್ಲಿ ಪ್ರಕಟಿಸಲಾಗುವುದು.


16ನೇ ಫೆಬ್ರವರಿ 2020 ರಂದು ಸಂಜೆ 4 ಗಂಟೆಗೆ ತಿಂಗಳ "ವಿಜ್ಞಾನ ಕೂಟ" ಕಾರ್ಯಕ್ರಮವು "ಹರಪ್ಪನ್ ನಾಗರೀಕತೆಯಲ್ಲಿ ಖಗೋಳಶಾಸ್ತ್ರ"ನಡೆಯಲಿದೆ.

16ನೇ ಫೆಬ್ರವರಿ 2020 ರಂದು ಸಂಜೆ 4 ಗಂಟೆಗೆ ತಿಂಗಳ "ವಿಜ್ಞಾನ ಕೂಟ" ಕಾರ್ಯಕ್ರಮವು "ಹರಪ್ಪನ್ ನಾಗರೀಕತೆಯಲ್ಲಿ ಖಗೋಳಶಾಸ್ತ್ರ"ನಡೆಯಲಿದೆ.


'ದೂರದರ್ಶಕ ತಯಾರಿಸುವ ಕಮ್ಮಟ' – 22, 23 ಮತ್ತು 29 ಫೆಬ್ರವರಿ ಹಾಗೂ 1ನೇ ಮಾರ್ಚ್ 2020

ಜವಾಹರ್ ಲಾಲ್ ನೆಹರು ತಾರಾಲಯವು ಶಾಲೆಗಳು, ವಿಜ್ಞಾನ ಕೇಂದ್ರಗಳು ಮತ್ತು ಸಾರ್ವಜನಿಕರಿಗಾಗಿ ನಾಲ್ಕು ದಿನಗಳ ದೂರದರ್ಶಕಗಳನ್ನು ತಯಾರಿಸುವ ಕಾರ್ಯಾಗಾರವನ್ನು ಮೂರು ವಾರಾಂತ್ಯಗಳಲ್ಲಿ ಆಯೋಜಿಸಿದೆ. ಈ ಕಾರ್ಯಾಗಾರದಲ್ಲಿ ಭಾಗವಹಿಸುವವರು 6" ನ್ಯೂಟೋನಿಯನ್ ದೂರದರ್ಶಕವನ್ನು ತಯಾರಿಸಿ ಕೊಂಡೊಯ್ಯಬಹುದಾಗಿದೆ. ಖಗೋಳ ಶಾಸ್ತ್ರ ಮತ್ತು ನ್ಯೂಟೋನಿಯನ್ ದೂರದರ್ಶಕಗಳ ಕುರಿತಾದ ಉಪನ್ಯಾಸಗಳು ಮತ್ತು ಚರ್ಚೆ ಈ ಕಾರ್ಯಾಗಾರದ ಭಾಗವಾಗಿರುತ್ತದೆ.


ಜೀವ ವೈವಿಧ್ಯ

'ಜೀವ ವೈವಿಧ್ಯ' ಎಂಬ ಒಂದು ದಿನದ ಕಮ್ಮಟವನ್ನು ಪ್ರೌಢಶಾಲಾ ಶಿಕ್ಷಕರಿಗಾಗಿ 23ನೇ ಜನವರಿ 2020 ರಂದು ಬೆ.10:30 – ಮ.3:30 ಗಂಟೆಯವರೆಗೆ ಆಯೋಜಿಸಲಾಗಿದೆ. ಪ್ರವೇಶ ಶುಲ್ಕ ತಲಾ ರೂ.300/-. ಆಸಕ್ತರು ಕಛೇರಿಯಲ್ಲಿ ನೋಂದಾಯಿಸಬಹುದು.


'ಹಗಲಿನ ಖಗೋಳಶಾಸ್ತ್ರ ಚಟುವಟಿಕೆಗಳು'

'ಹಗಲಿನ ಖಗೋಳಶಾಸ್ತ್ರ ಚಟುವಟಿಕೆಗಳು' ಎಂಬ ಒಂದು ದಿನದ ಕಮ್ಮಟವನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 22ನೇ ಜನವರಿ 2020 ರಂದು ಬೆ.10:30 – ಮ.3 ಗಂಟೆಯವರೆಗೆ ಆಯೋಜಿಸಲಾಗಿದೆ. ಪ್ರವೇಶ ಶುಲ್ಕ ತಲಾ ರೂ.150/-. ಆಸಕ್ತರು ಕಛೇರಿಯಲ್ಲಿ ನೋಂದಾಯಿಸಬಹುದು.


'ಯೂನಿವರ್ಸ್ ಇನ್ ದಿ ಕ್ಲಾಸ್ ರೂಮ್'

2020ರ ಜನವರಿ 10 ರಿಂದ ಸಂಜೆ 4 ರಿಂದ 7 ಗಂಟೆಯವರೆಗೆ ಮೂರು ದಿನಗಳ ಖಗೋಳ ಕಮ್ಮಟವನ್ನು ಹಮ್ಮಿಕೊಳ್ಳಲಾಗಿದೆ. ಶುಲ್ಕ ತಲಾ ರೂ.500/-


"ವಿಜ್ಞಾನ ಕೂಟ" ಕಾರ್ಯಕ್ರಮವು ನಡೆಯಲಿದೆ.

12ನೇ ಜನವರಿ 2020 ರಂದು ಸಂಜೆ 4 ಗಂಟೆಗೆ ತಿಂಗಳ "ವಿಜ್ಞಾನ ಕೂಟ" ಕಾರ್ಯಕ್ರಮವು ನಡೆಯಲಿದೆ.


'ಯೂನಿವರ್ಸ್ ಇನ್ ದಿ ಕ್ಲಾಸ್ ರೂಮ್'

2020ರ ಜನವರಿ 3 ರಿಂದ ಸಂಜೆ 4 ರಿಂದ 7 ಗಂಟೆಯವರೆಗೆ ಮೂರು ದಿನಗಳ ಖಗೋಳ ಕಮ್ಮಟವನ್ನು ಹಮ್ಮಿಕೊಳ್ಳಲಾಗಿದೆ. ಶುಲ್ಕ ತಲಾ ರೂ.500/-


" ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 18ನೇ ಡಿಸೆಂಬರ್ 2019 ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಮ್ಮಟವನ್ನು ಏರ್ಪಡಿಸಲಾಗಿದೆ."

ಮುಂಬರುವ 'ಕಂಕಣ ಸೂರ್ಯ ಗ್ರಹಣ'ವನ್ನು ವೀಕ್ಷಿಸಲು 26ನೇ ಡಿಸೆಂಬರ್ 2019 ರಂದು ಸಾರ್ವಜನಿಕರಿಗಾಗಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಇದರ ಅಂಗವಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು 18ನೇ ಡಿಸೆಂಬರ್ 2019 ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಮ್ಮಟವನ್ನು ಏರ್ಪಡಿಸಲಾಗಿದೆ. ನೋಂದಾಯಿಸಲು ಆಸಕ್ತರು ಕಛೇರಿಯನ್ನು ಸಂಪರ್ಕಿಸಬಹುದು.


"15ನೇ ಡಿಸೆಂಬರ್ 2019 ರಂದು ಸಂಜೆ 4 ಗಂಟೆಗೆ ತಿಂಗಳ "ವಿಜ್ಞಾನ ಕೂಟ" ಕಾರ್ಯಕ್ರಮವು ನಡೆಯಲಿದೆ."

15ನೇ ಡಿಸೆಂಬರ್ 2019 ರಂದು ಸಂಜೆ 4 ಗಂಟೆಗೆ ತಿಂಗಳ "ವಿಜ್ಞಾನ ಕೂಟ" ಕಾರ್ಯಕ್ರಮವು ನಡೆಯಲಿದೆ.


"ಕಂಕಣ ಸೂರ್ಯ ಗ್ರಹಣ"

"'ಕಂಕಣ ಸೂರ್ಯ ಗ್ರಹಣ" ವಿಷಯದ ಕುರಿತ ಎರಡನೇ ತಂಡದ ಕಮ್ಮಟವು 13ನೇ ಡಿಸೆಂಬರ್ 2019 ರಂದು ಶಿಕ್ಷಕರಿಗಾಗಿ ನಡೆಯಲಿದೆ'"

ಜವಾಹರ್ ಲಾಲ್ ನೆಹರು ತಾರಾಲಯವು ಡಿಸೆಂಬರ್ 13, 2019 ರಂದು ಶಿಕ್ಷಕರಿಗಾಗಿ "ಕಂಕಣ ಸೂರ್ಯ ಗ್ರಹಣ" ಎಂಬ ವಿಷಯದ ಕುರಿತು ಒಂದು ದಿನದ ಕಮ್ಮಟವನ್ನು ಆಯೋಜಿಸಿದೆ.ಸೂರ್ಯ ಮತ್ತು ಚಂದ್ರರ ಕೋನೀಯ ಗಾತ್ರಗಳನ್ನು ಅಂದಾಜಿಸುವುದು, ಆಚ್ಛಾದಿತ ಭಾಗವನ್ನು ಲೆಕ್ಕ ಮಾಡುವುದು, ಗ್ರಹಣದ ಪ್ರಮಾಣವನ್ನು ಅಂದಾಜಿಸುವುದು ಮುಂತಾದವುಗಳನ್ನು ಚಟುವಟಿಕೆಗಳ ಮೂಲಕ ಚರ್ಚಿಸಲಾಗುವುದು. ಸುಮಾರು ರೂ.1500-00ನಷ್ಟು ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಸೂರ್ಯ ಬಿಂಬ ಮೂಡಿಸುವ ಸಾಧನದ ಬಗ್ಗೆಯೂ ಇಲ್ಲಿ ಚರ್ಚಿಸಲಾಗುವುದು. ಗ್ರಹಣವನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಲು ಹಾಗೂ ಚಟುವಟಿಕೆಗಳನ್ನು ನಿರ್ವಹಿಸಲು ಈ ಸಾಧನವು ಉಪಯುಕ್ತವಾಗಿರುತ್ತದೆ.


"ಕಂಕಣ ಸೂರ್ಯ ಗ್ರಹಣ"

ಜವಾಹರ್ ಲಾಲ್ ನೆಹರು ತಾರಾಲಯವು ಡಿಸೆಂಬರ್ 06, 2019 ರಂದು ಶಿಕ್ಷಕರಿಗಾಗಿ "ಕಂಕಣ ಸೂರ್ಯ ಗ್ರಹಣ" ಎಂಬ ವಿಷಯದ ಕುರಿತು ಒಂದು ದಿನದ ಕಮ್ಮಟವನ್ನು ಆಯೋಜಿಸಿದೆ.ಸೂರ್ಯ ಮತ್ತು ಚಂದ್ರರ ಕೋನೀಯ ಗಾತ್ರಗಳನ್ನು ಅಂದಾಜಿಸುವುದು, ಆಚ್ಛಾದಿತ ಭಾಗವನ್ನು ಲೆಕ್ಕ ಮಾಡುವುದು, ಗ್ರಹಣದ ಪ್ರಮಾಣವನ್ನು ಅಂದಾಜಿಸುವುದು ಮುಂತಾದವುಗಳನ್ನು ಚಟುವಟಿಕೆಗಳ ಮೂಲಕ ಚರ್ಚಿಸಲಾಗುವುದು. ಸುಮಾರು ರೂ.1500-00ನಷ್ಟು ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಸೂರ್ಯ ಬಿಂಬ ಮೂಡಿಸುವ ಸಾಧನದ ಬಗ್ಗೆಯೂ ಇಲ್ಲಿ ಚರ್ಚಿಸಲಾಗುವುದು. ಗ್ರಹಣವನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಲು ಹಾಗೂ ಚಟುವಟಿಕೆಗಳನ್ನು ನಿರ್ವಹಿಸಲು ಈ ಸಾಧನವು ಉಪಯುಕ್ತವಾಗಿರುತ್ತದೆ.


17ನೇ ನವಂಬರ್ 2019 ರಂದು ಸಂ.4 ಗಂಟೆಗೆ ವಿಜ್ಞಾನ ಕೂಟ

17ನೇ ನವಂಬರ್ 2019 ರಂದು ಸಂ.4 ಗಂಟೆಗೆ 'ಸೈನ್ಸ್ ಬಿಹೈಂಡ್ ಎಕನಾಮಿಕ್ಸ್'ಕುರಿತು ವಿಜ್ಞಾನ ಕೂಟ


ದಿನಾಂಕ 17, ಭಾನುವಾರದಂದು ಮಕ್ಕಳ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಒಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ದಿನಾಂಕ 17, ಭಾನುವಾರದಂದು ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ ಮಕ್ಕಳ ದಿನಾಚರಣೆಯ ಪ್ರಯುಕ್ತ 3, 4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಒಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರಯೋಗಗಳ ನಿದರ್ಶನ ಹಾಗೂ ಚಟುವಟಿಕೆಗಳ ಮೂಲಕ ವಿಜ್ಞಾನದ ಸಂಗತಿಗಳನ್ನು ಚರ್ಚಿಸುವುದೇ ಈ ಕಮ್ಮಟದ ಮೂಲ ಉದ್ದೇಶ. ಪ್ರವೇಶ ಉಚಿತ.


'ಬಾಹ್ಯಾಕಾಶ ವಿಜ್ಞಾನ' ದ ಕುರಿತು ಅಕ್ಟೋಬರ್ 11, 2019 ರಂದು ಶಿಕ್ಷಕರಿಗಾಗಿ ಕಮ್ಮಟ

'ಬಾಹ್ಯಾಕಾಶ ವಿಜ್ಞಾನ ವಾರ'ದ ಆಚರಣೆಯ ಪ್ರಯುಕ್ತ ಚಟುವಟಿಕೆ ಆಧಾರಿತ ಒಂದು ದಿನದ ಕಾರ್ಯಾಗಾರವನ್ನು 'ಬಾಹ್ಯಾಕಾಶ ವಿಜ್ಞಾನ' ದ ಕುರಿತು ಅಕ್ಟೋಬರ್ 11, 2019 ರಂದು ಪ್ರೌಢಶಾಲಾ ಶಿಕ್ಷಕರಿಗಾಗಿ ಆಯೋಜಿಸಿದೆ. ಶುಲ್ಕ ತಲಾ ರೂ.300/-


13ನೇ ಅಕ್ಟೋಬರ್ 2019 ರಂದು ಮ.3 ಗಂಟೆಗೆ 'ಕಂಪ್ಯೂಟಿಂಗ್'ಕುರಿತು ವಿಜ್ಞಾನ ಕೂಟ

13ನೇ ಅಕ್ಟೋಬರ್ 2019 ರಂದು ಮ.3 ಗಂಟೆಗೆ 'ಕಂಪ್ಯೂಟಿಂಗ್'ಕುರಿತು ವಿಜ್ಞಾನ ಕೂಟ


8ನೇ ಸೆಪ್ಟೆಂಬರ್ 2019 ರಂದು ಮ.3 ಗಂಟೆಗೆ 'ಬೆಳಕು – ಸ್ವಭಾವ ಮತ್ತು ಉಪಯೋಗಗಳು' ಕುರಿತು ವಿಜ್ಞಾನ ಕೂಟ

ಭೂಮಿಯ ಮೇಲೆ ಜೀವ ಅಸ್ತಿತ್ವಕ್ಕೆ ಬರುವಲ್ಲಿ 'ಬೆಳಕು' ಒಂದು ಮುಖ್ಯ ಪಾತ್ರ ವಹಿಸಿದೆ. ಇಂದಿಗೂ ಹಲವಾರು ಸಂಶೋಧಕರು ಬೆಳಕಿನ ಅಧ್ಯಯನ ಮಾಡುತ್ತಿದ್ದರೂ ತಿಳಿಯದ ವಿಚಾರಗಳು ಉಳಿದೇ ಇವೆ. ಬೆಳಕಿನ ದ್ವಂದ್ವ ಸ್ವಭಾವ, ವಿಸರಣೆ, ದ್ಯುತಿ ವಿದ್ಯುತ್ ಪರಿಣಾಮ, ದೃಷ್ಟಿ, ಪ್ರತಿಬಿಂಬದ ಮರು ಉತ್ಪಾದನೆ, ಗ್ರಾಫಿಕ್ಸ್ ಹಾಗೂ ದತ್ತಾಂಶವನ್ನು ಶೇಖರಿಸಿಡುವಲ್ಲಿ ಬೆಳಕಿನ ಪಾತ್ರ ಇತ್ಯಾದಿ ವಿಚಾರಗಳನ್ನು ಚರ್ಚಿಸುವುದು ಈ ಬಾರಿಯ ವಿಜ್ಞಾನ ಕೂಟದ ಧ್ಯೇಯವಾಗಿದೆ. ಪ್ರೌಢಶಾಲಾ ವಿದ್ಯಾರ್ಥಿಗಳು ಮೇಲ್ಪಟ್ಟವರು ಭಾಗವಹಿಸಬಹುದು.


ದಿನಾಂಕ 4ನೇ ಸೆಪ್ಟೆಂಬರ್ 2019, ಬುಧವಾರದಂದು ಶಿಕ್ಷಕರಿಗಾಗಿ “ಚಟುವಟಿಕೆಗಳಲ್ಲಿ ಚಂದ್ರ” ಎಂಬ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ದಿನಾಂಕ 4ನೇ ಸೆಪ್ಟೆಂಬರ್ 2019, ಬುಧವಾರದಂದು ಶಿಕ್ಷಕರಿಗಾಗಿ “ಚಟುವಟಿಕೆಗಳಲ್ಲಿ ಚಂದ್ರ” ಎಂಬ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ನೋಂದಾವನಿ ಶುಲ್ಕ ತಲಾ 450 ರೂಪಾಯಿಗಳು.


ಧಾತುಗಳ ವರ್ಗೀಕರಣ'

ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗಾಗಿ 'ಧಾತುಗಳ ವರ್ಗೀಕರಣ' ವಿಷಯದ ಕುರಿತು ಒಂದು ದಿನದ ಕಮ್ಮಟವನ್ನು 21ನೇ ಆಗಸ್ಟ್ 2019 ರಂದು ಬೆ.10:30 ರಿಂದ ಮ.3:30 ರವರೆಗೆ ಏರ್ಪಡಿಸಲಾಗಿದೆ. ಆಸಕ್ತರು ಕಛೇರಿಯಲ್ಲಿ ನೋಂದಾಯಿಸಬಹುದು.


11ನೇ ಆಗಸ್ಟ್ 2019 ರಂದು ಮ.3 ಗಂಟೆಗೆ ‘ಎಲೆಕ್ಟ್ರಾನಿಕ್ಸ್ ಮತ್ತು ಮೂರ್ಸ್ ನಿಯಮ’ಕುರಿತು ವಿಜ್ಞಾನ ಕೂಟ

ಬಾಹ್ಯಾಕಾಶ ವಿಜ್ಞಾನದಿಂದ ದೂರ ಸಂಪರ್ಕದವರೆಗೂ, ಹವಾಮಾನ ಮುನ್ಸೂಚನೆಯಿಂದ ಶೇರುಪೇಟೆಯ ವ್ಯವಹಾರದವರೆಗೂ, ಬೃಹತ್ ಕೈಗಾರಿಕೆಗಳಿಂದ ಸಂಚಾರ ವ್ಯವಸ್ಥೆಗಳವರೆಗೂ ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಮಹತ್ತರ ಬದಲಾವಣೆಯನ್ನು ಕಂಡಿದ್ದೇವೆ. ಇದಕ್ಕೆಲ್ಲಾ ಅತಿ ಉಪಯುಕ್ತವಾಗಿರುವ ವಿಜ್ಞಾನದ ಅಂಗವೇ “ಎಲೆಕ್ಟ್ರಾನಿಕ್ಸ್”. ಶಕ್ತಿಶಾಲಿ ಪ್ರೊಸೆಸರ್ ಗಳು, ಇಂಟಿಗ್ರೇಟೆಡ್ ಚಿಪ್ ಗಳು, ಅವುಗಳಲ್ಲಾಗಿರುವ ಸುಧಾರಣೆಗಳು, ಚಿಪ್ ಲೆಟ್ ಗಳು, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮುಂತಾದ ವಿಚಾರಗಳನ್ನು ಚರ್ಚಿಸುವುದು ಈ ಬಾರಿಯ ವಿಜ್ಞಾನ ಕೂಟದ ಧ್ಯೇಯವಾಗಿದೆ.


‘ಜೀವಶಾಸ್ತ್ರದ ಕುರಿತ ಕಮ್ಮಟ’

ಆಗಸ್ಟ್ 7 ರಂದು ಶಿಕ್ಷಕರಿಗಾಗಿ ನಡೆಯಬೇಕಿದ್ದ ಜೀವಶಾಸ್ತ್ರದ ಕುರಿತ ಕಮ್ಮಟವನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಪ್ರಕಟಿಸಲಾಗುವುದು.


‘ತ್ರಿಕೋನಗಳು’

ಪ್ರೌಢಶಾಲಾ ಶಿಕ್ಷಕರಿಗಾಗಿ ಒಂದು ದಿನದ ಕಮ್ಮಟವನ್ನು 31ನೇ ಜುಲೈ 2019 ರಂದು ಬೆ.10:30 ರಿಂದ 3:30 ರವರೆಗೆ ಏರ್ಪಡಿಸಲಾಗಿದೆ. ಶುಲ್ಕ ತಲಾ ರೂ.300/-

ತ್ರಿಕೋನಗಳು ಗಣಿತಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಖಗೋಳಶಾಸ್ತ್ರ, ವಾಸ್ತುಶಿಲ್ಪ ಮತ್ತು ಹಲವಾರು ದೈನಂದಿನ ಸನ್ನಿವೇಶಗಳಲ್ಲೂ ಇವುಗಳು ಉಪಯುಕ್ತವಾಗಿವೆ. ಪ್ರಸ್ತುತ ಕಾರ್ಯಾಗಾರವು ಒಂಭತ್ತು ಮತ್ತು ಹತ್ತನೆಯ ತರಗತಿಯ ಪಠ್ಯಪುಸ್ತಕಗಳಲ್ಲಿ ಚರ್ಚಿಸಲಾಗಿರುವ ‘ತ್ರಿಕೋನಗಳು’ ಎಂಬ ವಿಷಯದ ಬೋಧನೆಗೆ ಪೂರಕವಾಗುವಂತಹ ಚರ್ಚೆ ಮತ್ತು ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.


ಚಟುವಟಿಕೆಗಳಲ್ಲಿ ಚಂದ್ರ

18ನೇ ಜುಲೈ 2019 ರಂದು ಆಯೋಜಿಸಿದ್ದ ‘ಚಟುವಟಿಕೆಗಳಲ್ಲಿ ಚಂದ್ರ’ ಎಂಬ ಕಮ್ಮಟವನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಪ್ರಕಟಿಸಲಾಗುವುದು.


ಚಟುವಟಿಕೆಗಳಲ್ಲಿ ಚಂದ್ರ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಚಂದ್ರಯಾನ – 2 ಮಿಷನ್ ಅನ್ನು ಇದೇ ಜುಲೈ 15 ರಂದು ಉಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಜವಾಹರ್ ಲಾಲ್ ನೆಹರು ತಾರಾಲಯವು ವಿಜ್ಞಾನ ಸಂವಹನಕಾರರು ಮತ್ತು ಶಿಕ್ಷಕರಿಗಾಗಿ “ಚಟುವಟಿಕೆಗಳಲ್ಲಿ ಚಂದ್ರ” ಎಂಬ ಒಂದು ದಿನದ ಕಾರ್ಯಾಗರವನ್ನು 18ನೇ ಜುಲೈ 2019 ರಂದು ಆಯೋಜಿಸಿದೆ.


14ನೇ ಜುಲೈ 2019 ರಂದು ಮ.3 ಗಂಟೆಗೆ ‘ಚಂದ್ರಯಾನ - 2’ ಕುರಿತು ವಿಜ್ಞಾನ ಕೂಟ

ಚಂದ್ರಯಾನ – 2 ಯಾವ ದೇಶವೂ ಇದುವರೆಗೂ ತಲುಪಿರದ ಚಂದ್ರನ ದಕ್ಷಿಣ ಧ್ರುವವನ್ನು ತಲುಪುವ ಗುರಿ ಹೊಂದಿದೆ. ಇಸ್ರೋದ ಯೋಜನೆಯ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ತಿಂಗಳ ವಿಜ್ಞಾನ ಕೂಟದಲ್ಲಿ ಇದರ ಕುರಿತು ಚರ್ಚಿಸಲಾಗುವುದು. ಪ್ರೌಢಶಾಲಾ ವಿದ್ಯಾರ್ಥಿಗಳು ಮೇಲ್ಪಟ್ಟವರು ಭಾಗವಹಿಸಬಹುದು.


ಶಿಕ್ಷಕರಿಗಾಗಿ ‘ಗುರುತ್ವ’ದ ಕುರಿತು 03.07.2019 ರಂದು ಒಂದು ದಿನದ ಕಮ್ಮಟ

ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗಾಗಿ ‘ಗುರುತ್ವ’ ಎಂಬ ವಿಷಯದ ಕುರಿತು ಒಂದು ದಿನದ ಕಮ್ಮಟವನ್ನು 3ನೇ ಜುಲೈ 2019 ರಂದು ಬೆ.10:30 – ಮ.3:30 ರವರೆಗೆ ಏರ್ಪಡಿಸಲಾಗಿದೆ. ಶುಲ್ಕ ತಲಾ ರೂ.300/-.


ದೈಹಿಕ ನ್ಯೂನ್ಯತೆಯುಳ್ಳ ಮಕ್ಕಳಿಗಾಗಿ ಒಂದು ದಿನದ ಕ್ರಿಯಾತ್ಮಕ ಕಮ್ಮಟ

ತಾರಾಲಯವು ದೈಹಿಕ ನ್ಯೂನ್ಯತೆಯುಳ್ಳ ಮಕ್ಕಳಿಗಾಗಿ ಒಂದು ದಿನದ ಕ್ರಿಯಾತ್ಮಕ ಕಮ್ಮಟವನ್ನು 27ನೇ ಜೂನ್ 2019 ರಂದು ಬೆ.10:30 ರಿಂದ ಮ.3:30 ರವರೆಗೆ ಉಚಿತವಾಗಿ ಆಯೋಜಿಸಿದೆ. ಮೊದಲು ಬಂದವರಿಗೆ ಆದ್ಯತೆ.


ಕ್ಷುದ್ರಗ್ರಹಗಳ ದಿನಾಚರಣೆಯ ಅಂಗವಾಗಿ ಜವಾಹರ್‍ ಲಾಲ್ ನೆಹರು ತಾರಾಲಯವು ಕೆಳಕಂಡ ಕಾರ್ಯಕ್ರಮಗಳನ್ನು ಆಯೋಜಿಸಿದೆ:

ಭಿತ್ತಿಚಿತ್ರ ಮತ್ತು ಉಲ್ಕಾಶಿಲೆಗಳ ಪ್ರದರ್ಶನ - ಬೆ.10:30 - ಸಂ.4:30

ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕ್ಷುದ್ರಗ್ರಹಗಳ ಕುರಿತು ಕಾರ್ಯಾಗಾರ ಮ.1:00 ರಿಂದ 4:00

ಅಹಮದಾಬಾದಿನ ಫಿಸಿಕಲ್ ರಿಸರ್ಚ್ ಲೆಬೊರೇಟರಿಯ ನಿವೃತ್ತ ನಿರ್ದೇಶಕರಾದ ಡಾ. ಜಿತೇಂದ್ರನಾಥ್ ಗೋಸ್ವಾಮಿ ಅವರಿಂದ ಕ್ಷುದ್ರಗ್ರಹಗಳ ಬಗ್ಗೆ ಉಪನ್ಯಾಸ ಸಂ.4:00


9ನೇ ಜೂನ್ 2019 ರಂದು ಮ.3 ಗಂಟೆಗೆ ‘ಮಾಲಿನ್ಯ – ಕಾರಣಗಳು, ದುಷ್ಪರಿಣಾಮಗಳು ಮತ್ತು ಪರಿಹಾರೋಪಾಯಗಳು’ ಕುರಿತು ವಿಜ್ಞಾನ ಕೂಟ

ಮಾಲಿನ್ಯದ ವಿವಿಧ ಪ್ರಕಾರಗಳು, ಅದರಿಂದಾಗುವ ದುಷ್ಟರಿಣಾಮಗಳು, ಮಾಲಿನ್ಯ ತಡೆಗೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಹಂತಗಳಲ್ಲಿ ಕೈಗೊಂಡಿರುವ ವಿಧಾನಗಳು ಇತ್ಯಾದಿಗಳನ್ನು ಈ ಬಾರಿಯ ಕೂಟದಲ್ಲಿ ಚರ್ಚಿಸಲಾಗುವುದು.


ದೈಹಿಕ ನ್ಯೂನ್ಯತೆಯುಳ್ಳ ಮಕ್ಕಳಿಗಾಗಿ ಒಂದು ದಿನದ ಕ್ರಿಯಾತ್ಮಕ ಕಮ್ಮಟ

ತಾರಾಲಯವು ದೈಹಿಕ ನ್ಯೂನ್ಯತೆಯುಳ್ಳ ಮಕ್ಕಳಿಗಾಗಿ ಒಂದು ದಿನದ ಕ್ರಿಯಾತ್ಮಕ ಕಮ್ಮಟವನ್ನು 20ನೇ ಜೂನ್ 2019 ರಂದು ಬೆ.10:30 ರಿಂದ ಮ.3:30 ರವರೆಗೆ ಉಚಿತವಾಗಿ ಆಯೋಜಿಸಿದೆ. ಮೊದಲು ಬಂದವರಿಗೆ ಆದ್ಯತೆ.


"ಸೂರ್ಯನ ಬಿಂಬ ಮತ್ತು ಹಗಲಿನ ಖಗೋಳ ಚಟುವಟಿಕೆಗಳು"

12ನೇ ಮೇ 2019 ರಂದು ಮ.3 ಗಂಟೆಗೆ ‘ಸ್ಟೆಲ್ಲೇರಿಯಮ್ ತಂತ್ರಾಂಶದಿಂದ ಖಗೋಳಶಾಸ್ತ್ರ’ ಕುರಿತು ವಿಜ್ಞಾನ ಕೂಟ ಈ ತಿಂಗಳ ವಿಜ್ಞಾನ ಕೂಟದಲ್ಲಿ ಖಗೋಳೀಯ ವೀಕ್ಷಣೆಗಳಿಗೆ ಬೇಕಾಗುವ ಮೂಲಭೂತ ಪರಿಕಲ್ಪನೆಗಳನ್ನು ಚರ್ಚಿಸಲಾಗುವುದು. ಸ್ಟೆಲ್ಲೇರಿಯಮ್ ಎಂಬ ಉಚಿತವಾಗಿ ಲಭ್ಯವಿರುವ ತಂತ್ರಾಂಶವನ್ನು ಇಲ್ಲಿ ಬಳಸಿಕೊಳ್ಳಲಾಗುವುದು. ಆಕಾಶಕಾಯಗಳನ್ನು ಗುರುತಿಸುವುದು ಮತ್ತು ನಕ್ಷತ್ರ ವೀಕ್ಷಣೆಗೆ ಈ ತಂತ್ರಾಂಶವನ್ನು ಹೇಗೆ ಬಳಸಬಹುದು ಎಂಬುದನ್ನು ಚರ್ಚಿಸಲಾಗುವುದು.


"ಸೂರ್ಯನ ಬಿಂಬ ಮತ್ತು ಹಗಲಿನ ಖಗೋಳ ಚಟುವಟಿಕೆಗಳು"

ನೆಹರು ತಾರಾಲಯ, ನೆಹರು ಸ್ಮಾರಕ ಸಂಗ್ರಹಾಲಯ ಮತ್ತು ಗ್ರಂಥಾಲಯ, ನವ ದೆಹಲಿ ಅವರ ಸಹಯೋಗದೊಂದಿಗೆ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಾಗಿ ಅರ್ಧ ದಿನದ ಕಾರ್ಯಾಗಾರವನ್ನು 19ನೇ ಫೆಬ್ರವರಿ 2019 ರಂದು ಬೆ.10:30 ರಿಂದ ಮ.1:30 ರವರೆಗೆ ಆಯೋಜಿಸಿದೆ. ಪ್ರವೇಶ ಉಚಿತ. ಆಸಕ್ತ ಶಾಲೆಗಳು ಕಛೇರಿಯಲ್ಲಿ ನೋಂದಾಯಿಸಬಹುದಾಗಿದೆ.


'ಖಗೋಳ ಶಾಸ್ತ್ರದ ಮೂಲಗಳು'

ಪ್ರತಿ ತಿಂಗಳ ಎರಡನೇ ಭಾನುವಾರದಂದು ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ನಡೆಯುವ ವಿಜ್ಞಾನ ಕೂಟದಲ್ಲಿ ವಿಷಯದ ಕುರಿತು ಚರ್ಚೆ ನಡೆಸಲಾಗುತ್ತಿದೆ. 13ನೇ ಜನವರಿ 2019 ರಂದು ಮಧ್ಯಾಹ್ನ 3 ರಿಂದ 4:30 ರವರೆಗೆ ನಡೆಯುತ್ತದೆ. ಪ್ರವೇಶ ಉಚಿತ.


"ಅಸ್ಟ್ರಾನಮಿ ಒಲಿಂಪಿಯಾಡ್ ಎಕ್ಸ್ ಪೋಷರ್"

ಜವಾಹರ್ ಲಾಲ್ ನೆಹರು ತಾರಾಲಯವು ಮುಂಬೈನ ಹೋಮಿ ಬಾಬಾ ಸೆಂಟರ್ ಫಾರ್ ಸೈನ್ಸ್ ಎಜುಕೇಷನ್ ಸಂಸ್ಥೆಯ ಸಹಯೋಗದೊಂದಿಗೆ “ಅಸ್ಟ್ರಾನಮಿ ಒಲಿಂಪಿಯಾಡ್ ಎಕ್ಸ್ ಪೋಷರ್” ಎಂಬ ಶಿಬಿರವನ್ನು ವಿಜ್ಞಾನ ಸಂವಹನಕಾರರು, ಕಾಲೇಜು ಮತ್ತು ಪ್ರೌಢಶಾಲಾ ಶಿಕ್ಷಕರಿಗೆ 13-16 ಫೆಬ್ರವರಿ 2019 ರವರೆಗೆ ಆಯೋಜಿಸಿದೆ. ಪ್ರವೇಶ ಉಚಿತ.

 

ಅರ್ಜಿ ಸಲ್ಲಿಸಲು :Click here...

 

ಭರ್ತಿ ಮಾಡಿದ ಅರ್ಜಿಯನ್ನು 26ನೇ ಜನವರಿ 2019ರೊಳಗೆ ಈ ಮಿಂಚಂಚೆಗೆ astronomy@hbcse.tifr.res.in ತಲುಪಿಸಬೇಕು.


"ಅಸ್ಟ್ರಾನಮಿ ಕಮ್ಯುನಿಕೇಟರ್ಸ್ ಮೀಟ್"

ಜವಾಹರ್ ಲಾಲ್ ನೆಹರು ತಾರಾಲಯವು ಪಬ್ಲಿಕ್ ಔಟ್ ರೀಚ್ ಅಂಡ್ ಎಜುಕೇಷನ್ ಕಮಿಟಿ ಆಫ್ ಅಸ್ಟ್ರಾನಾಮಿಕಲ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ “ಅಸ್ಟ್ರಾನಮಿ ಕಮ್ಯುನಿಕೇಟರ್ಸ್ ಮೀಟ್” ಎಂಬ ಕಮ್ಮಟವನ್ನು ಸಾರ್ವಜಿನಿಕರಿಗಾಗಿ 17ನೇ ಫೆಬ್ರವರಿ 2019 ರಂದು ಆಯೋಜಿಸಿದೆ.

 

ನೋಂದಾಯಿಸಲು ಸಂಪರ್ಕಿಸಿ : Click here...
ಪ್ರವೇಶ ಶುಲ್ಕ ತಲಾ ರೂ.200/-


ಜವಾಹರ್ ಲಾಲ್ ನೆಹರು ತಾರಾಲಯವು "ಖಗೋಳ ಉತ್ಸವ – IAU ಗೆ 100 ವರ್ಷಗಳು" ಎಂಬ ಶೀರ್ಷಿಕೆಯಡಿಯಲ್ಲಿ ಉತ್ಸವವನ್ನು 2019ರ ಜನವರಿ 10 ರಿಂದ 13 ರವರೆಗೆ ಆಯೋಜಿಸಿದೆ.


'ವೃತ್ತಗಳು' - ಕುರಿತು ಕಮ್ಮಟ

'ವೃತ್ತಗಳು' ವಿಷಯದ ಕುರಿತು ಪ್ರೌಢಶಾಲಾ ಗಣಿತ ಶಿಕ್ಷಕರಿಗಾಗಿ ಒಂದು ದಿನದ ಕಮ್ಮಟವನ್ನು 22ನೇ ಡಿಸೆಂಬರ್ 2018 ರಂದು ತಾರಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಶುಲ್ಕ ತಲಾ ರೂ.250/-.


ಸಾರ್ವಜನಿಕರಿಗಾಗಿ ಮೂರು ದಿನಗಳ ಖಗೋಳ ಶಾಸ್ತ್ರ ಕಮ್ಮಟವನ್ನು 14ನೇ ಡಿಸೆಂಬರ್ 2018 ರಿಂದ ಸಂಜೆ 4 ರಿಂದ 7 ಗಂಟೆಯವರೆಗೆ ನಡೆಯಲಿದೆ. ಶುಲ್ಕ ತಲಾ ರೂ.500/-


'ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನದ ಬದಲಾವಣೆ'

ಪ್ರತಿ ತಿಂಗಳ ಎರಡನೇ ಭಾನುವಾರದಂದು ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ನಡೆಯುವ ವಿಜ್ಞಾನ ಕೂಟದಲ್ಲಿ ‘ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನದ ಬದಲಾವಣೆ’ ವಿಷಯದ ಕುರಿತು ಚರ್ಚೆ ನಡೆಸಲಾಗುತ್ತಿದೆ. 9ನೇ ಡಿಸೆಂಬರ್ 2018 ರಂದು ಮಧ್ಯಾಹ್ನ 3 ರಿಂದ 4:30 ರವರೆಗೆ ನಡೆಯುತ್ತದೆ.


'ಮುಂಗಾರು'

ಪ್ರತಿ ತಿಂಗಳ ಎರಡನೇ ಭಾನುವಾರದಂದು ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ನಡೆಯುವ ವಿಜ್ಞಾನ ಕೂಟದಲ್ಲಿ 'ಮುಂಗಾರು' ವಿಷಯದ ಕುರಿತು ಚರ್ಚೆ ನಡೆಸಲಾಗುತ್ತಿದೆ. 11ನೇ ನವಂಬರ್ 2018 ರಂದು ಮಧ್ಯಾಹ್ನ 3 ರಿಂದ 4:30 ರವರೆಗೆ ನಡೆಯುತ್ತದೆ.


'ಖಗೋಳ ಶಾಸ್ತ್ರ' - ಕಾರ್ಯಗಾರ

ಅನಿವಾರ್ಯ ಕಾರಣಗಳಿಂದಾಗಿ 16ನೇ ನವಂಬರ್ 2018 ರಂದು ನಡೆಯಬೇಕಿದ್ದ 'ಖಗೋಳ ಶಾಸ್ತ್ರ' – ಕಾರ್ಯಗಾರವನ್ನು ಡಿಸೆಂಬರ್ 2018 ಕ್ಕೆ ಮುಂದೂಡಲಾಗಿದೆ. ದಯವಿಟ್ಟು ಸಹಕರಿಸಿ. ಮುಂದಿನ ದಿನಾಂಕವನ್ನು ಪ್ರಕಟಿಸಲಾಗುವುದು.


ಪುಟಾಣಿಗಳಿಗಾಗಿ ಕಮ್ಮಟ

ಮಕ್ಕಳ ದಿನಾಚರಣೆಯ ಅಂಗವಾಗಿ ಶಾಲಾ ಪುಟಾಣಿಗಳಿಗಾಗಿ ಒಂದು ವಿಶೇಷ ಕಮ್ಮಟವನ್ನು 18ನೇ ನವಂಬರ್ 2018 ರಂದು ಬೆಳಿಗ್ಗೆ 10:30 ರಿಂದ 12:30 ರವರೆಗೆ ಏರ್ಪಡಿಸಲಾಗಿದೆ. ಚಟುವಟಿಕೆಗಳ ಮೂಲಕ ವಿಜ್ಞಾನದ ಸಂಗತಿಗಳನ್ನು ಚರ್ಚಿಸುವುದೇ ಈ ಕಮ್ಮಟದ ಮೂಲ ಉದ್ದೇಶ.


i) 'ದೂರದರ್ಶಕ ತಯಾರಿಸುವ ಕಮ್ಮಟ'

ಜವಾಹರ್ ಲಾಲ್ ನೆಹರು ತಾರಾಲಯವು ಶಾಲೆಗಳು, ವಿಜ್ಞಾನ ಕೇಂದ್ರಗಳು ಮತ್ತು ಸಾರ್ವಜನಿಕರಿಗಾಗಿ ಮೂರೂವರೆ ದಿನಗಳ ದೂರದರ್ಶಕಗಳನ್ನು ತಯಾರಿಸುವ ಕಾರ್ಯಾಗಾರವನ್ನು 2018ರ ನವಂಬರ್ 14ರಿಂದ 17ರವರೆಗೆ ಆಯೋಜಿಸಿದೆ. ಈ ಕಾರ್ಯಾಗಾರದಲ್ಲಿ ಭಾಗವಹಿಸುವವರು 150 ಮಿ.ಮಿ., f8 ನ್ಯೂಟೋನಿಯನ್ ದೂರದರ್ಶಕವನ್ನು ತಯಾರಿಸಿ ಕೊಂಡೊಯ್ಯಬಹುದಾಗಿದೆ. ಖಗೋಳ ಶಾಸ್ತ್ರ ಮತ್ತು ನ್ಯೂಟೋನಿಯನ್ ದೂರದರ್ಶಕಗಳ ಕುರಿತಾದ ಉಪನ್ಯಾಸಗಳು ಮತ್ತು ಚರ್ಚೆ ಈ ಕಾರ್ಯಾಗಾರದ ಭಾಗವಾಗಿರುತ್ತದೆ. ಶುಲ್ಕ ರೂ.20000/- ಹಾಗೂ ನೋಂದಣಿ ಶುಲ್ಕ ತಲಾ ರೂ.1500/-.


ii) ತಿಂಗಳ ಸಂಭ್ರಮ – 30.10.2018

ಜವಾಹರ್‍ಲಾಲ್ ನೆಹರು ತಾರಾಲಯವು ಶಾಲಾ ಶಿಕ್ಷಕರಿಗಾಗಿ “ತಿಂಗಳ ಸಂಭ್ರಮ” ಎಂಬ ಹೊಸ ಕಾರ್ಯಕ್ರಮದಡಿಯಲ್ಲಿ ಈ ತಿಂಗಳ ಅಕ್ಟೋಬರ್ 30ರಂದು ವಿಜ್ಞಾನಿ ಹೋಮಿ ಜಹಂಗೀರ್ ಬಾಬಾ ರವರ ಜನ್ಮದಿನವನ್ನು ಆಚರಿಸುತ್ತಿದ್ದೇವೆ. ಶಿಕ್ಷಕರಿಗಾಗಿ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಭಾರತದ ಹೆಸರಾಂತ ವಿಜ್ಞಾನಿಯಾದ ಹೋಮಿ ಜಹಂಗೀರ್ ಬಾಬಾ ಅವರ ಬದುಕು ಮತ್ತು ಸಾಧನೆಗಳ ಬಗ್ಗೆ ಚರ್ಚಿಸುವುದು ಇದರ ಮೂಲ ಉದ್ದೇಶವಾಗಿದೆ.


'ವಿದ್ಯುಚ್ಛಕ್ತಿ'

ಪ್ರತಿ ತಿಂಗಳ ಎರಡನೇ ಭಾನುವಾರದಂದು ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ನಡೆಯುವ ವಿಜ್ಞಾನ ಕೂಟದಲ್ಲಿ 'ವಿದ್ಯುಚ್ಛಕ್ತಿ' ವಿಷಯದ ಕುರಿತು ಚರ್ಚೆ ನಡೆಸಲಾಗುತ್ತಿದೆ. 14ನೇ ಅಕ್ಟೋಬರ್ 2018 ರಂದು ಮಧ್ಯಾಹ್ನ 2 ರಿಂದ 3:30 ರವರೆಗೆ ನಡೆಯುತ್ತದೆ. ಪ್ರವೇಶ ಉಚಿತ.


ವಿಜ್ಞಾನ ಕಾರ್ಯಾಗಾರ

6 ಮತ್ತು 7ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗಾಗಿ ಮೂರು ದಿನಗಳ ವಿಶೇಷ ಕಾರ್ಯಾಗಾರವನ್ನು 10 ರಿಂದ 12 ನೇ ಅಕ್ಟೋಬರ್ 2018 ರವರೆಗೆ ಆಯೋಜಿಸಲಾಗಿದೆ.


ಖಗೋಳ ಶಾಸ್ತ್ರ ಕಾರ್ಯಾಗಾರ

ಅನಿವಾರ್ಯ ಕಾರಣಗಳಿಂದಾಗಿ 'ಖಗೋಳ ಶಾಸ್ತ್ರ ಕಾರ್ಯಾಗಾರ'ವು ಅಕ್ಟೋಬರ್ 6, 2018 ರ ಬದಲಾಗಿ ಅಕ್ಟೋಬರ್ 13, 2018 ರಂದು ಆರಂಭಗೊಂಡು ನವಂಬರ್ 11, 2018 ಕ್ಕೆ ಮುಕ್ತಾಯವಾಗಲಿದೆ.


'ಬಾಹ್ಯಾಕಾಶ ವಿಜ್ಞಾನ'

ಜವಾಹರ್ ಲಾಲ್ ನೆಹರು ತಾರಾಲಯವು ಅಕ್ಟೋಬರ್ 4, 2018 ರಂದು ಪ್ರೌಢಶಾಲಾ ಶಿಕ್ಷಕರಿಗಾಗಿ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿದೆ. ಇಸ್ರೋದ ಪ್ರೊ. ಪಿ. ಜೆ. ಭಟ್ ಹಾಗೂ ನಿಯಾಸ್ ನ ಪ್ರೊ. ಎಮ್. ಬಿ. ರಜನಿ ಹಾಗೂ ಪ್ರೊ. ಅಸ್ಮಿತ ಮೊಹಾಂತಿ ರವರಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ. ಶುಲ್ಕ ತಲಾ ರೂ.250/-.

ಈ ಉಪನ್ಯಾಸಗಳ ನಂತರ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಚಾರ್ಯರಾದ ಡಾ|| ರವಿಕುಮಾರ್ ಹೊಸಮನಿ ರವರಿಂದ “ಬಾಹ್ಯಾಕಾಶ ಡ್ರೊಸೋಫಿಲಾ : ಗಗನಯಾನಿಗಳ ಆರೋಗ್ಯದ ಕನ್ನಡಿ” ವಿಷಯದ ಕುರಿತು ಸಾರ್ವಜನಿಕರಿಗಾಗಿ ವಿಶೇಷ ಉಪನ್ಯಾಸವನ್ನು ಸಂಜೆ 4 ಘಂಟೆಗೆ ಆಯೋಜಿಸಲಾಗಿದೆ. ಪ್ರವೇಶ ಉಚಿತ.


ಜವಾಹರ್‍ಲಾಲ್ ನೆಹರು ತಾರಾಲಯವು ಶಾಲಾ ಶಿಕ್ಷಕರಿಗಾಗಿ “ತಿಂಗಳ ಸಂಭ್ರಮ” ಎಂಬ ಹೊಸ ಕಾರ್ಯಕ್ರಮದಡಿಯಲ್ಲಿ ಈ ತಿಂಗಳ (ಸೆಪ್ಟೆಂಬರ್) 29ರಂದು ವಿಜ್ಞಾನಿ ಎನ್ರಿಕೊ ¥sóÀರ್ಮಿರವರ ಜನ್ಮದಿನವನ್ನು ಆಚರಿಸುತ್ತಿದ್ದೇವೆ. ಬೈಜಿಕ ಭೌತವಿಜ್ಞಾನದÀಲ್ಲಿ ಖ್ಯಾತ ವಿಜÐನಿಯಾದ ಎನ್ರಿಕೊ ಫರ್ಮಿರವರ ಬದುಕು ಮತ್ತು ಕೊಡುಗೆಗಳ ಬಗ್ಗೆ ಚರ್ಚಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.


ಜವಾಹರ್ ಲಾಲ್ ನೆಹರು ತಾರಾಲಯವು ಸೆಪ್ಟೆಂಬರ್ 19, 2018 ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 3:30 ರವರೆಗೆ ಪ್ರೌಢಶಾಲಾ ಶಿಕ್ಷಕರಿಗಾಗಿ '‘ವಿಕಸನ ಮತ್ತು ತಳಿಶಾಸ್ತ್ರ’' ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ವಿಷಯದ ಬೋಧನೆಗೆ ಪೂರಕವಾಗುವಂತಹ ಚಟುವಟಿಕೆಗಳನ್ನು ಚರ್ಚಿಸುವುದು ಈ ಕಾರ್ಯಾಗಾರದ ಧ್ಯೇಯವಾಗಿದೆ. ಶುಲ್ಕ ತಲಾ ರೂ.250/-.


ಶಾಲಾ ಶಿಕ್ಷಕರು, ವಿಜ್ಞಾನ ಸಂವಹಕರು ಮತ್ತು ಖಗೋಳಾಸಕ್ತರಿಗಾಗಿ ಜವಾಹರ್ ಲಾಲ್ ನೆಹರು ತಾರಾಲಯವು ಒಂದು ಕಮ್ಮಟವನ್ನು ಏರ್ಪಡಿಸಿದೆ. ಭಾಷಾ ಮಾಧ್ಯಮ ಕನ್ನಡ. ಕಮ್ಮಟದ ಮೊದಲ ಭಾಗ 26 ರಿಂದ 28 ರವರೆಗೆ ನಡೆಯಲಿದೆ. ಎರಡನೆಯ ಭಾಗ ನವೆಂಬರ್ ನಲ್ಲಿ ನಡೆಯಲಿದೆ. ಆಸಕ್ತರು ಎರಡೂ ಭಾಗಗಳಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಬೆಳಿಗ್ಗೆ 10:30 ರಿಂದ ಸಂಜೆ 7:30 ರವರೆಗೆ. ಪ್ರವೇಶ ಶುಲ್ಕ ತಲಾ 1500/- (ಕಮ್ಮಟದ ಎರಡೂ ಭಾಗಗಳಿಗೆ).


'ವಿದ್ಯುತ್ಕಾಂತೀಯ ತರಂಗಗಳು' ವಿಷಯದ ಕುರಿತು ವಿಜ್ಞಾನ ಕೂಟ

ಪ್ರತಿ ತಿಂಗಳ ಎರಡನೇ ಭಾನುವಾರದಂದು ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಕೂಟವನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶವಿರುವ ಈ ಕಾರ್ಯಕ್ರಮದಲ್ಲಿ ಹಲವಾರು ವೈಜ್ಞಾನಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗುವುದು. ಆಸಕ್ತಿಯಿರುವ ಸಾರ್ವಜನಿಕರೂ ಭಾಗವಹಿಸಬಹುದಾಗಿದೆ. ವಿದ್ಯುತ್ಕಾಂತೀಯ ರೋಹಿತದ ಅನ್ವೇಷಣೆ, ಉತ್ಪಾದಿಸುವ ವಿಧಾನ, ವರ್ಗೀಕರಣ ಮತ್ತು ಉಪಯೋಗಗಳ ಬಗ್ಗೆ ಚರ್ಚಿಸುವುದು ಈ ಬಾರಿಯ ವಿಜ್ಞಾನ ಕೂಟದ ಧ್ಯೇಯವಾಗಿದೆ.


ಜವಾಹರ್ ಲಾಲ್ ನೆಹರು ತಾರಾಲಯವು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಿರೂಪಣೆಗಳಿಂದ ಕೂಡಿದ ಉಪನ್ಯಾಸವನ್ನು 8ನೇ ಸೆಪ್ಟೆಂಬರ್ 2018 ರಂದು ಬೆಳಿಗ್ಗೆ 10:30 ರಿಂದ 1 ಗಂಟೆಯ ವರೆಗೆ ಏರ್ಪಡಿಸಲಾಗಿದೆ. ಪ್ರವೇಶ ಉಚಿತ.


'ಅಂತರ್ಜಾಲ' ವಿಷಯದ ಕುರಿತು ವಿಜ್ಞಾನ ಕೂಟ

ಪ್ರತಿ ತಿಂಗಳ ಎರಡನೇ ಭಾನುವಾರದಂದು ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಕೂಟವನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶವಿರುವ ಈ ಕಾರ್ಯಕ್ರಮದಲ್ಲಿ ಹಲವಾರು ವೈಜ್ಞಾನಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗುವುದು. ಆಸಕ್ತಿಯಿರುವ ಸಾರ್ವಜನಿಕರೂ ಭಾಗವಹಿಸಬಹುದಾಗಿದೆ. ಅಂತರ್ಜಾಲದ ವಿಕಸನ, ಜಾಲಗಳ ಪಾತ್ರ, ನಿಸ್ತಂತು ಜಾಲಗಳು, ಭದ್ರತಾ ವಿಚಾರಗಳು ಇತ್ಯಾದಿಗಳ ಬಗ್ಗೆ ಚರ್ಚಿಸುವುದು ಈ ಬಾರಿಯ ವಿಜ್ಞಾನ ಕೂಟದ ಧ್ಯೇಯವಾಗಿದೆ.


'ವಿದ್ಯುತ್ಕಾಂತೀಯತೆ'

ಜವಾಹರ್ ಲಾಲ್ ನೆಹರು ತಾರಾಲಯವು ಆಗಸ್ಟ್ 9, 2018 ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 3:30 ರವರೆಗೆ ಪ್ರೌಢಶಾಲಾ ಶಿಕ್ಷಕರಿಗಾಗಿ 'ವಿದ್ಯುತ್ಕಾಂತೀಯತೆ' ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ವಿಷಯದ ಬೋಧನೆಗೆ ಪೂರಕವಾಗುವಂತಹ ಚಟುವಟಿಕೆಗಳನ್ನು ಚರ್ಚಿಸುವುದು ಈ ಕಾರ್ಯಾಗಾರದ ಧ್ಯೇಯವಾಗಿದೆ. ಶುಲ್ಕ ತಲಾ ರೂ.250/-.


'ತಿಂಗಳ ಸಂಭ್ರಮ'

ಈ ಕಾರ್ಯಕ್ರಮದ ಅಡಿಯಲ್ಲಿ 11ನೇ ಆಗಸ್ಟ್ 2018ರಂದು ವಿಜ್ಞಾನಿ ವೇಣು ಬಾಪು ರವರ ಜನ್ಮದಿನವನ್ನು ಆಚರಿಸುತ್ತಿದೆ. ವೇಣು ಬಾಪು ರವರ ಬದುಕು ಮತ್ತು ಖಗೋಳ ಶಾಸ್ತ್ರಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಚರ್ಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರವೇಶ ಉಚಿತ.


'ಸಂಖ್ಯಾಶಾಸ್ತ್ರ'ದ ಕುರಿತು ಕಮ್ಮಟ

ಜವಾಹರ್ ಲಾಲ್ ನೆಹರು ತಾರಾಲಯವು ಆಗಸ್ಟ್ 2, 2018 ರಂದು ಪ್ರೌಢಶಾಲಾ ಗಣಿತ ಶಿಕ್ಷಕರಿಗಾಗಿ ‘ಸಂಖ್ಯಾಶಾಸ್ತ್ರ’ ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ವಿಷಯದ ಬೋಧನೆಗೆ ಪೂರಕವಾಗುವಂತಹ ಚಟುವಟಿಕೆಗಳನ್ನು ಚರ್ಚಿಸುವುದು ಈ ಕಾರ್ಯಾಗಾರದ ಧ್ಯೇಯವಾಗಿದೆ.


ಜವಾಹರ್‍ಲಾಲ್ ನೆಹರು ತಾರಾಲಯವು ದಿನಾಂಕ ಜುಲೈ 19, 2018ರಂದು ಪ್ರೌಢಶಾಲಾ ಶಿಕ್ಷಕರಿಗಾಗಿ “ಲೋಹ ಮತ್ತು ಅಲೋಹಗಳು” ಎಂಬ ವಿಷಯದ ಕುರಿತು ಒಂದು ದಿನದ ಕಮ್ಮಟವನ್ನು ಆಯೋಜಿಸಿದೆ. ಹತ್ತನೆಯ ತರಗತಿಯ ಪಠ್ಯದಲ್ಲಿರುವ ಈ ವಿಷಯದ ಬೋಧನೆಗೆ ಪೂರಕವಾಗುವಂತಹ ಚರ್ಚೆ, ಚಟುವಟಿಕೆಗಳು ಮತ್ತು ಪ್ರಯೋಗಗಳ ನಿದರ್ಶನಗಳನ್ನು ಈ ಕಾರ್ಯಾಗಾರವು ಒಳಗೊಂಡಿರುತ್ತದೆ.


ವಿಜ್ಞಾನ ಕೂಟ – ಶಾಖ ಮತ್ತು ಪರಿಸರ

8ನೇ ಜುಲೈ 2018 ರಂದು ಮಧ್ಯಾಹ್ನ 3 ಗಂಟೆಗೆ ಈ ತಿಂಗಳ ವಿಜ್ಞಾನ ಕೂಟವನ್ನು ಪ್ರೌಢಶಾಲೆ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶವಿರುವ ಈ ಕಾರ್ಯಕ್ರಮದಲ್ಲಿ ಹಲವಾರು ವೈಜ್ಞಾನಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗುವುದು. ಆಸಕ್ತಿಯಿರುವ ಸಾರ್ವಜನಿಕರೂ ಭಾಗವಹಿಸಬಹುದಾಗಿದೆ. ನಮ್ಮ ಸುತ್ತಲಿನ ಪರಿಸರದಲ್ಲಿ ಕಂಡುಬರುವ ವಿದ್ಯಮಾನಗಳಾದ ಶಾಖದ ಹರಿವು, ಮಳೆ ಮಾರುತಗಳು, ಕಡಲಿನ ಒಳ ಹರಿವು, ಹಸಿರು ಮನೆಯ ಪರಿಣಾಮ ಇತ್ಯಾದಿಗಳನ್ನು ಭೌತಶಾಸ್ತ್ರದ ಹಿನ್ನೆಲೆಯಲ್ಲಿ ಚರ್ಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.


'ತಿಂಗಳ ಸಂಭ್ರಮ'

ಜವಾಹರ್‍ಲಾಲ್ ನೆಹರು ತಾರಾಲಯವು ಶಾಲಾ ಶಿಕ್ಷಕರಿಗಾಗಿ “ತಿಂಗಳ ಸಂಭ್ರಮ” ಎಂಬ ಕಾರ್ಯಕ್ರಮದಡಿಯಲ್ಲಿ, ಆಯ ತಿಂಗಳಿನಲ್ಲಿ ಹುಟ್ಟಿದ ವಿಜ್ಞಾನಿಗಳ ಜನ್ಮದಿನಾಚರಣೆ ಇಲ್ಲವೇ ಜರುಗಿದ ವೈಜ್ಞಾನಿಕ ವಿಶೇಷತೆಯುಳ್ಳ ಘಟನೆಗಳನ್ನು ಆಚರಿಸುತ್ತಿದೆ. ಈ ಕಾರ್ಯಕ್ರಮದ ಅಡಿಯಲ್ಲಿ 4ನೇ ಜುಲೈ 2018ರಂದು ವಿಜ್ಞಾನಿ ಹಾನ್ಸ್ ಬೆಥಾ ರವರ ಜನ್ಮದಿನವನ್ನು ಆಚರಿಸುತ್ತಿದೆ. ಹಾನ್ಸ್ ಬೆಥಾ ರವರ ಬದುಕು ಮತ್ತು ವಿಜ್ಞಾನಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಚರ್ಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರವೇಶ ಉಚಿತ.


'ತಿಂಗಳ ಸಂಭ್ರಮ'

ಜವಾಹರ್‍ಲಾಲ್ ನೆಹರು ತಾರಾಲಯವು ಶಾಲಾ ಶಿಕ್ಷಕರಿಗಾಗಿ “ತಿಂಗಳ ಸಂಭ್ರಮ” ಎಂಬ ಕಾರ್ಯಕ್ರಮದಡಿಯಲ್ಲಿ, ಆಯ ತಿಂಗಳಿನಲ್ಲಿ ಹುಟ್ಟಿದ ವಿಜ್ಞಾನಿಗಳ ಜನ್ಮದಿನಾಚರಣೆ ಇಲ್ಲವೇ ಜರುಗಿದ ವೈಜ್ಞಾನಿಕ ವಿಶೇಷತೆಯುಳ್ಳ ಘಟನೆಗಳನ್ನು ಆಚರಿಸುತ್ತಿದೆ. ಈ ಕಾರ್ಯಕ್ರಮದ ಅಡಿಯಲ್ಲಿ 26ನೇ ಜೂನ್ 2018ರಂದು ವಿಜ್ಞಾನಿ ಚಾರ್ಲ್ಸ್ ಮೆಸ್ಸಿಯರ್ ರವರ ಜನ್ಮದಿನವನ್ನು ಆಚರಿಸುತ್ತಿದೆ. ಚಾರ್ಲ್ಸ್ ಮೆಸ್ಸಿಯರ್ ರವರು ಬದುಕು ಮತ್ತು ಖಗೋಳ ವಿಜ್ಞಾನಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಚರ್ಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರವೇಶ ಉಚಿತ.


'ಶಿಕ್ಷಕರ ಸಭೆ'

ವರ್ಷವಿಡೀ ನಡೆಯುವ ಕಮ್ಮಟಗಳ ಕುರಿತು ಚರ್ಚಿಸಲು 'ಶಿಕ್ಷಕರ ಸಭೆ'ಯನ್ನು 23ನೇ ಜೂನ್ 2018 ರಂದು ಬೆ. 11 ರಿಂದ 12 ರವರೆಗೆ ನಡೆಸಲಾಗುವುದು. ಪ್ರವೇಶ ಉಚಿತ.


'ವಿಜ್ಞಾನ ಪ್ರಯೋಗಗಳು' – 13ನೇ ಮೇ 2018

10ನೇ ಜೂನ್ 2018 ರಂದು ಮಧ್ಯಾಹ್ನ 3 ಗಂಟೆಗೆ ಈ ತಿಂಗಳ ವಿಜ್ಞಾನ ಕೂಟವನ್ನು ಪ್ರೌಢಶಾಲೆ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶವಿರುವ ಈ ಕಾರ್ಯಕ್ರಮದಲ್ಲಿ ಹಲವಾರು ವೈಜ್ಞಾನಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗುವುದು. ಆಸಕ್ತಿಯಿರುವ ಸಾರ್ವಜನಿಕರೂ ಭಾಗವಹಿಸಬಹುದಾಗಿದೆ. ನೈಸರ್ಗಿಕ/ಕೃತಕ ಉಪಗ್ರಹಗಳು ಮತ್ತು ಮಾನವಕುಲದ ಮೇಲೆ ಅವುಗಳ ಪಾತ್ರ ಮತ್ತು ಪ್ರಭಾವದ ಕುರಿತು ಚರ್ಚೆಯನ್ನು ನಡೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರವೇಶ ಉಚಿತ.


ಪ್ರತಿ ತಿಂಗಳ ಎರಡನೇ ಭಾನುವಾರದಂದು ಮಧ್ಯಾಹ್ನ 3 ಗಂಟೆಗೆ ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಕೂಟವನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶವಿರುವ ಈ ಕಾರ್ಯಕ್ರಮದಲ್ಲಿ ಹಲವಾರು ವೈಜ್ಞಾನಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗುವುದು.


ಜವಾಹರ್ ಲಾಲ್ ನೆಹರು ತಾರಾಲಯವು ವಿದ್ಯಾರ್ಥಿಗಳಿಗಾಗಿ ‘ಶೂನ್ಯ ನೆರಳಿನ ದಿನ’ ವಿಷಯದ ಬಗ್ಗೆ ಅರ್ಧ ದಿನದ ಕಮ್ಮಟವನ್ನು ಏರ್ಪಡಿಸುತ್ತಿದೆ. ‘ಶೂನ್ಯ ನೆರಳಿನ ದಿನ’ಕ್ಕೆ ಸಂಬಂಧಪಟ್ಟ ಭೂಮಿಯ ಆವರ್ತನೆ ಮತ್ತು ಪರಿಭ್ರಮಣೆ, ಅಕ್ಷಾಂಶಗಳಾದ ಸಮಭಾಜಕ ವೃತ್ತ, ಕರ್ಕಾಟಕ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತ ಇವುಗಳ ಪ್ರಾಮುಖ್ಯತೆ, ಸ್ಥಳೀಯ ಸಮಯದ ಅಳತೆ ಮುಂತಾದವುಗಳ ವಿವರಣೆಯನ್ನು ಈ ಕಮ್ಮಟವು ಒಳಗೊಂಡಿರುತ್ತದೆ. ಶೂನ್ಯ ನೆರಳಿನ ದಿನವನ್ನು ವಿವಿಧ ಪ್ರದರ್ಶಿಕೆಗಳ ಮೂಲಕ ಗಮನಿಸುವುದು ಮತ್ತು ನೆರಳುಗಳ ಮೂಲಕ ಭೂಮಿಯ ಸುತ್ತಳತೆಯನ್ನು ಲೆಕ್ಕಾಚಾರ ಮಾಡುವುದೂ ಸಹ ಸೇರಿರುತ್ತದೆ.


ಏಪ್ರಿಲ್ ತಿಂಗಳ 24ನೇ ತಾರೀಖಿನಂದು ಘಟಿಸುವ ‘ಶೂನ್ಯ ನೆರಳಿನ ದಿನ’ದ ಪ್ರಯುಕ್ತ ಜವಾಹರ್ ಲಾಲ್ ನೆಹರು ತಾರಾಲಯವು ಶಿಕ್ಷಕರು ಮತ್ತು ಬೇಸಿಗೆ ಶಿಬಿರಗಳನ್ನು ಆಯೋಜಿಸುವವರಿಗಾಗಿ ‘ಶೂನ್ಯ ನೆರಳಿನ ದಿನ’ ವಿಷಯದ ಬಗ್ಗೆ ಅರ್ಧ ದಿನದ ಕಮ್ಮಟವನ್ನು 17ನೇ ಏಪ್ರಿಲ್ 2018ರಂದು ಏರ್ಪಡಿಸುತ್ತಿದೆ.

 

'ಖಗೋಳೀಯ ಛಾಯಾಚಿತ್ರಗಳ ಸಂಸ್ಕರಣೆ'

ಜವಾಹರ್ ಲಾಲ್ ನೆಹರು ತಾರಾಲಯವು ಸಾರ್ವಜನಿಕರಿಗಾಗಿ ಖಗೋಳೀಯ ಛಾಯಾಚಿತ್ರಗಳ ಸಂಸ್ಕರಣೆಯ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು 20ನೇ ಮೇ 2018ರಂದು ಆಯೋಜಿಸಿದೆ. ಖ್ಯಾತ ಖಗೋಳ ಛಾಯಾಚಿತ್ರಕಾರರಾದ ಶ್ರೀ ಅಜಯ್ ತಲ್ವಾರ್ ರವರ ಖಗೋಳೀಯ ಛಾಯಾಚಿತ್ರಗಳ ಸಂಗ್ರಹದಿಂದ ಆಯ್ದ ಕೆಲವು ಛಾಯಾಚಿತ್ರಗಳನ್ನು ಈ ಕಾರ್ಯಾಗಾರದಲ್ಲಿ ಬಳಸಿಕೊಳ್ಳಲಾಗುತ್ತದೆ. ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವವರು ಇದಾಗಲೇ ಇಂತಹ ಪ್ರಯತ್ನದಲ್ಲಿ ಕಂಡಿರುವ ಯಶಸ್ಸು ಅಥವಾ ವೈಫಲ್ಯದ ಬಗೆಗೂ ಇಲ್ಲಿ ಚರ್ಚಿಸಬಹುದು. ಶ್ರೀ ಅಜಯ್ ತಲ್ವಾರ್ ರವರು ನಡೆಸಿಕೊಡುವ ಈ ಕಾರ್ಯಾಗಾರವು ನೈಜ ಛಾಯಾಚಿತ್ರಗಳು ಮತ್ತು ದತ್ತಾಂಶಗಳ ಸಂಸ್ಕರಣೆಯನ್ನು ಒಳಗೊಂಡಿರುತ್ತದೆ.

 

‘ನಿಸ್ತಂತು ಸಂವಹನ’ - ಕುರಿತು ವಿಜ್ಞಾನ ಕೂಟ

ಪ್ರತಿ ತಿಂಗಳ ಎರಡನೇ ಭಾನುವಾರದಂದು ಮಧ್ಯಾಹ್ನ 3 ಗಂಟೆಗೆ ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಕೂಟವನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶವಿರುವ ಈ ಕಾರ್ಯಕ್ರಮದಲ್ಲಿ ಹಲವಾರು ವೈಜ್ಞಾನಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗುವುದು. ನಿಸ್ತಂತು ಸಂವಹನ ಕ್ಷೇತ್ರದಲ್ಲಿನ ಆರಂಭದ ದಿನಗಳಿಂದ ಇಂದಿನವರೆಗಿನ ಅಭಿವೃದ್ಧಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ.

 

‘ದೂರದರ್ಶಕ ತಯಾರಿಸುವ ಕಮ್ಮಟ’

ಜವಾಹರ್ ಲಾಲ್ ನೆಹರು ತಾರಾಲಯವು ಸಾರ್ವಜನಿಕರಿಗಾಗಿ ದೂರದರ್ಶಕಗಳನ್ನು ತಯಾರಿಸುವ ಐದು ದಿನಗಳ ಕಾರ್ಯಾಗಾರವನ್ನು 2018ರ ಮೇ 15ರಿಂದ 19ರವರೆಗೆ ಆಯೋಜಿಸಿದೆ. ಈ ಕಾರ್ಯಾಗಾರದಲ್ಲಿ ಭಾಗವಹಿಸುವವರು 150 ಮಿ.ಮಿ. ನ್ಯೂಟೋನಿಯನ್ ದೂರದರ್ಶಕವನ್ನು ಮಾಡಬಹುದಾಗಿದೆ. ಖಗೋಳ ಶಾಸ್ತ್ರ ಮತ್ತು ನ್ಯೂಟೋನಿಯನ್ ದೂರದರ್ಶಕಗಳ ಕುರಿತಾದ ಉಪನ್ಯಾಸಗಳು ಮತ್ತು ಚರ್ಚೆ ಈ ಕಾರ್ಯಾಗಾರದ ಭಾಗವಾಗಿರುತ್ತದೆ.

 

ವಿಜ್ಞಾನ ಕೂಟ – 11.03.2018ರಂದು

ಪ್ರತಿ ತಿಂಗಳ ಎರಡನೇ ಭಾನುವಾರದಂದು ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಮಧ್ಯಾಹ್ನ 3:00 ಗಂಟೆಗೆ ವಿಜ್ಞಾನ ಕೂಟವನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಉದ್ದೇಶವಿರುವ ಈ ಕಾರ್ಯಕ್ರಮದಲ್ಲಿ ಹಲವಾರು ವೈಜ್ಞಾನಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗುವುದು. ವಿಜ್ಞಾನದ ಕೆಲವು ಪ್ರಯೋಗಗಳ ಪ್ರದರ್ಶನ ಮತ್ತು ಅವುಗಳ ಹಿಂದಿನ ವೈಜ್ಞಾನಿಕ ವಿಷಯವನ್ನು ತಿಳಿಯಪಡಿಸುವುದು ಇದರ ಉದ್ದೇಶವಾಗಿದೆ. ಇ.ಎಮ್. ಡಿಡಕ್ಷನ್, ಲೈಟ್ ಪ್ರಪೋಗೇಷನ್ ಮುಂತಾದವುಗಳನ್ನು ಪ್ರಯೋಗಗಳ ಮೂಲಕ ಚರ್ಚಿಸಲಾಗುವುದು.

×
ABOUT DULT ORGANISATIONAL STRUCTURE PROJECTS