ಖಗೋಳೀಯ ಘಟನೆಗಳು

Home

5ನೇ ಮೇ 2023 ರಂದು ರಾತ್ರಿ 8:44 ರಿಂದ ಮಧ್ಯರಾತ್ರಿ 01:01 ರವರೆಗೆ ಪಾರ್ಶ್ವಛಾಯಾಗ್ರಹಣವು ಬೆಂಗಳೂರಿನಲ್ಲಿ ಸಂಭವಿಸುತ್ತಿದೆ. ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ಅಥವಾ ದೂರದರ್ಶಕದ ಮೂಲಕ ನೋಡಬಹುದು. 2023 ರ ಮೇ 5 ರಂದು ಪಾರ್ಶ್ವಛಾಯಾಗ್ರಹಣದ ನೇರ ಪ್ರಸಾರವನ್ನು ವೀಕ್ಷಿಸಿ - https://youtube.com/live/lcSxnOPx08Y?feature=share

ತಾರಾಲಯದಲ್ಲಿ ಸಾರ್ವಜನಿಕರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಗ್ರಹಣ ದಿನದಂದು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ…..

ಪಾರ್ಶ್ವ ಚಂದ್ರ ಗ್ರಹಣ - ನವೆಂಬರ್ ೨೦೨೨

ನವೆಂಬರ್ ೮, ೨೦೨೨ ರಂದು ಭಾರತದ ಬಹುತೇಕ ಭಾಗಗಳಲ್ಲಿ ಪಾರ್ಶ್ವ ಚಂದ್ರ ಗ್ರಹಣ ಗೋಚರಿಸಲಿದೆ. ಉತ್ತರ ಅಮೆರಿಕಾದ ಪಶ್ಚಿಮ ಭಾಗ, ಪೂರ್ವ ರಷ್ಯಾ, ಜಪಾನ್ ಮತ್ತು ನ್ಯೂಜಿಲ್ಯಾಂಡ್ ನಲ್ಲಿ ಪೂರ್ಣ ಪ್ರಮಾಣದ ಸಂಪೂರ್ಣ ಚಂದ್ರ ಗ್ರಹಣ ಗೋಚರಿಸಲಿದೆ ಹಾಗು ಭಾರತದ ಕೆಲವು ಪೂರ್ವ ಭಾಗಗಳಲ್ಲಿ ಸಂಪೂರ್ಣ ಚಂದ್ರ ಗ್ರಹಣ ಸ್ವಲ್ಪ ಸಮಯ ಕಾಣಲಿದೆ. ಸಂಪೂರ್ಣ ಚಂದ್ರ ಗ್ರಹಣ ಸಂಜೆ ೫:೧೨ ಕ್ಕೆ ಕೊನೆಗೊಳಲಿದೆ. ಬೆಂಗಳೂರಿನಲ್ಲಿ ಗ್ರಹಣಗ್ರಸ್ತ ಚಂದ್ರ ಸಂಜೆ ೫:೪೯ ಕ್ಕೆ ಉದಯಿಸುತ್ತದೆ, ಪಾರ್ಶ್ವ ಚಂದ್ರ ಗ್ರಹಣ ೬:೧೯ ಕ್ಕೆ ಕೊನೆಗೊಳ್ಳುತ್ತದೆ. ನಂತರ ಭೂಮಿಯ ಅರ್ಧ ಛಾಯಾ ಪ್ರದೇಶದಲ್ಲಿ ಚಂದ್ರ ಚಲಿಸಿ , ೭:೩೦ ಕ್ಕೆ ಚಂದ್ರ ಗ್ರಹಣ ಕೊನೆಗೊಳ್ಳುತ್ತದೆ. ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ಅಥವಾ ದೂರದರ್ಶಕದ ಮೂಲಕ ನೋಡಬಹುದು. (ಇಲ್ಲಿ ಸೂಚಿಸಿರುವ ಕಾಲ, ಭಾರತೀಯ ಕಾಲಮಾನಕ್ಕೆ ತಕ್ಕಂತೆ )

Sl.no

Name of the city/
ನಗರದ ಹೆಸರು

Totality of the eclipse/
ಪೂರ್ಣ ಚಂದ್ರ ಗ್ರಹಣ

Umbral  phase/Partial eclipse phase/
ಪಾರ್ಶ್ವ ಚಂದ್ರ ಗ್ರಹಣ

Duration of the eclipse visible/
ಗ್ರಹಣ ಗೋಚರಿಸುವ ಅವಧಿ

1

Agartala/ ಅಗರ್ತಲಾ

Visible/ ಕಾಣಿಸಲಿದೆ

 

1 h :41 min

2

Bhubaneshwar/ ಭುವನೇಶ್ವರ

Visible/ ಕಾಣಿಸಲಿದೆ

 

1 h :13 min

3

Darjeeling/ ಡಾರ್ಜೀಲಿಂಗ್

Visible/ ಕಾಣಿಸಲಿದೆ

 

1 h :33 min

4

Guwahati/ ಗುವಾಹಟಿ

Visible/ ಕಾಣಿಸಲಿದೆ

 

1 h :45 min

5

Port Blair/ ಪೋರ್ಟ್ ಬ್ಲೇರ್

Visible/ ಕಾಣಿಸಲಿದೆ

 

1 h :30 min

6

Bengaluru/ ಬೆಂಗಳೂರು

--

Visible/ ಕಾಣಿಸಲಿದೆ

00: 29 min

7

Mysuru/ ಮೈಸೂರು

--

Visible/ ಕಾಣಿಸಲಿದೆ

00: 25 min

8

Ballari/ ಬಳ್ಳಾರಿ

--

Visible/ ಕಾಣಿಸಲಿದೆ

00: 30 min

9

Mangaluru/ ಮಂಗಳೂರು

--

Visible/ ಕಾಣಿಸಲಿದೆ

00: 18 min

10

Dharwad/ ಧಾರವಾಡ

--

Visible/ ಕಾಣಿಸಲಿದೆ

00: 22 min

11

Karwar/ ಕಾರವಾರ

--

Visible/ ಕಾಣಿಸಲಿದೆ

00: 18 min

12

Raichur/ ರಾಯಚೂರು

--

Visible/ ಕಾಣಿಸಲಿದೆ

00: 33 min

13

Bagalkote/ ಬಾಗಲಕೋಟೆ

--

Visible/ ಕಾಣಿಸಲಿದೆ

00: 22 min

14

Chamarajanagara/ ಚಾಮರಾಜನಗರ

--

Visible/ ಕಾಣಿಸಲಿದೆ

00: 25 min

 


 

ಪಾರ್ಶ್ವ ಸೂರ್ಯಗ್ರಹಣ - 2022

 

ಪಾರ್ಶ್ವ ಸೂರ್ಯಗ್ರಹಣ ಅಕ್ಟೋಬರ್ ೨೫ ರಂದು ಬೆಂಗಳೂರಿನಲ್ಲಿ ಸಂಜೆ ೫:೧೨ ರಿಂದ ೫:೫೫ ವರೆಗೆ ಗೋಚರಿಸಲಿದೆ. ಸೂರ್ಯಾಸ್ತ ಸಂಜೆ ೫:೫೫ . ಪಶ್ಚಿಮದ ದಿಕ್ಕಿನಲ್ಲಿ ಗ್ರಹಣವನ್ನು ವೀಕ್ಷಿಸಬಹುದಾಗಿದೆ. ಗ್ರಹಣವನ್ನು ಸುರಕ್ಷಿತವಾಗಿ ವೀಕ್ಷಿಸಲು ಸೌರ ಕನ್ನಡಕದ ಬಳಕೆ ಹೆಚ್ಚು ಸೂಕ್ತ. ದೂರದರ್ಶಕವನ್ನು ಬಳಸುವವರು ಪರದೆ ಮೇಲೆ ಸೂರ್ಯನ ಬಿಂಬ ಮೂಡುವಂತೆ ವ್ಯವಸ್ಥೆಯನ್ನು ಮಾಡಿ ವೀಕ್ಷಿಸುವುದು ಹೆಚ್ಚು ಸುರಕ್ಷಿತ. ಜಮ್ಮು ಮತ್ತು ಕಾಶ್ಮೀರದಲ್ಲಿ ಶೇಕಡ ೫೫. ೭೪ ರಷ್ಟು , ಭಾರತದ ಉತ್ತರ ತುದಿಯಲ್ಲಿರುವ ಲಡಾಕ್ ನ ಲೇಹ್ ಪ್ರದೇಶದಲ್ಲಿ ಸೂರ್ಯಗ್ರಹಣ ೫೪. ೭% ರಷ್ಟು ಗೋಚರಿಸಲಿದೆ. ಅಲ್ಲಿ ಸೂರ್ಯಗ್ರಹಣ ಸಂಜೆ ೪:೧೬ ರಿಂದ ೫:೩೪ ರ ವರೆಗೆ ಗೋಚರಿಸಲಿದೆ. ಬೆಂಗಳೂರಿನಲ್ಲಿ ಇದು ಶೇಕಡ ೧೦. ೦೨%, ಮೈಸೂರಿನಲ್ಲಿ ೯. ೧೬% ರಷ್ಟು , ಬಳ್ಳಾರಿಯಲ್ಲಿ ಶೇಕಡ ೧೪. ೮೨% ರಷ್ಟು , ಆಗುಂಬೆಯಲ್ಲಿ ಶೇಕಡ ೧೨. ೧೧% ರಷ್ಟು ಗೋಚರಿಸಲಿದೆ. ಕಾಜ್ಹಾಕಿಸ್ತಾನ್ ನಲ್ಲಿ ಶೇಕಡ ೭೫% ರಷ್ಯಾದ ಯುಗರ ಪ್ರದೇಶದಲ್ಲಿ ಶೇಕಡ ೮೨% ಗೋಚರಿಸಲಿದೆ.

ಸುರಕ್ಷಿತ ಕನ್ನಡಕಗಳು ತಾರಾಲಯದ ಪುಸ್ತಕ ಮಳಿಗೆಯಲ್ಲಿ ರೂ.30/-ಕ್ಕೆ ಲಭ್ಯವಿದೆ.


ಜವಾಹರಲಾಲ್ ನೆಹರು ತಾರಾಲಯವು 2022 ರ ಏಪ್ರಿಲ್  28 ಮತ್ತು 29 ರಂದು ಮುಂಜಾನೆ 4:30 ರಿಂದ ಸೂರ್ಯೋದಯವಾಗುವವರೆಗು ಕಾಣಲಿರುವ ಗುರುಶನಿಶುಕ್ರ ಮತ್ತು ಮಂಗಳ ಗ್ರಹಗಳನ್ನು ವೀಕ್ಷಿಸಲು ಸಿದ್ಧತೆ ನಡೆಸಿದೆ. ಸಾರ್ವಜನಿಕರಿಗಾಗಿ ಹಲವು ದೂರದರ್ಶಕಗಳ ವ್ಯವಸ್ಥೆಯನ್ನು ತಾರಾಲಯದ ಆವರಣದಲ್ಲಿ ಮಾಡಲಾಗಿದೆ.  ಶುಭ್ರ ಆಕಾಶ ದೊರೆತಲ್ಲಿ ಮಾತ್ರ ಈ ವೀಕ್ಷಣೆಯು ಸಾಧ್ಯವಾಗಲಿದೆ. ಪ್ರವೇಶ ಉಚಿತ.

 

ಗುರು ಮತ್ತು ಶನಿ ಗ್ರಹಗಳ ಯುತಿ - ವೆಬ್ಕಾಸ್ಟ್ - 21.12.2020

ಘಟನೆಯನ್ನು ನೇರವಾಗಿ ಯೂಟ್ಯೂಬ್ ನಿಂದ ವೀಕ್ಷಿಸಬಹುದಾಗಿದೆ.

ಕೋವಿಡ್ 19 ರ ಪರಿಣಾಮದಿಂದಾಗಿ ಸಾರ್ವಜನಿಕ ದಟ್ಟಣೆಯನ್ನು ತಡೆಯಲು ಇಂದು ಘಟಿಸಲಿರುವ 'ಗುರು ಮತ್ತು ಶನಿ ಗ್ರಹದ ಯುತಿ'ಯನ್ನು ವೀಕ್ಷಿಸುವ ನೋಂದಣಿ ಪ್ರಕ್ರಿಯೆಯನ್ನು ಸ್ಥಗಿತಗೊಳಸಲಾಗಿದೆ. ದಯವಿಟ್ಟು ಸಹಕರಿಸಿ.

21ನೇ ಜೂನ್ 2020 ರಂದು ಪಾರ್ಶ್ವ ಸೂರ್ಯ ಗ್ರಹಣ

21ನೇ ಜೂನ್ 2020 (ಭಾನುವಾರ)ರಂದು ಬೆಳಿಗ್ಗೆ 10:12 ರಿಂದ ಮಧ್ಯಾಹ್ನ 1:31 ರವರೆಗೆ ನಡೆಯಲಿರುವ ಪಾರ್ಶ್ವ ಸೂರ್ಯ ಗ್ರಹಣವನ್ನು ಬೆಂಗಳೂರಿನಲ್ಲಿ ಕಾಣಬಹುದು; ಬೆಳಿಗ್ಗೆ 11:47ಕ್ಕೆ ಗ್ರಹಣದ ಗರಿಷ್ಠತೆ. ಬರಿಗಣ್ಣಿನಿಂದ ಸೂರ್ಯ ಗ್ರಹಣ ವೀಕ್ಷಣೆಯು ಅಪಾಯಕಾರಿಯಾದ್ದರಿಂದ ಸುರಕ್ಷಿತ ಉಪಕರಣಗಳಿಂದ ಮಾತ್ರ ನೋಡಬಹುದು.
ಕೋವಿಡ್ 19 ವೈರಸ್ ನ ಹರಡುವಿಕೆಯಿಂದಾಗಿ, ಈ ಬಾರಿ ತಾರಾಲಯದಲ್ಲಿ ಗ್ರಹಣ ವೀಕ್ಷಣೆಗೆ ಯಾವುದೇ ವ್ಯವಸ್ಥೆಗಳನ್ನು ಸಾರ್ವಜನಿಕರಿಗಾಗಿ ಮಾಡಲಾಗುತ್ತಿಲ್ಲ. ಆದರೂ, ತಾರಾಲಯದ ಜಾಲತಾಣ, ಯೂಟ್ಯೂಬ್ ಹಾಗೂ ಫೇಸ್ ಬುಕ್ ಗಳಲ್ಲಿ ಗ್ರಹಣದ ವೀಕ್ಷಣೆಯನ್ನು ನೇರವಾಗಿ ಪ್ರಸಾರ ಮಾಡಲಾಗುವುದು; ಆಕಾಶ ಶುಭ್ರವಾಗಿದ್ದಲ್ಲಿ ಮಾತ್ರ.
ಅಲ್ಲದೆ, ಸಾರ್ವಜಿನಕರ ಅನುಕೂಲ ಹಾಗೂ ಸುರಕ್ಷತೆಗಾಗಿ 18ನೇ ಜೂನ್ 2020 ರಿಂದ ತಾರಾಲಯದ ಪುಸ್ತಕ ಮಳಿಗೆಯಲ್ಲಿ ಸೌರಕನ್ನಡಕಗಳು ಖರೀದಿಗೆ ಲಭ್ಯವಿರಲಿವೆ. ಈ ಕನ್ನಡಕಗಳನ್ನು ಲಭ್ಯವಿರುವವರೆಗೆ ಅಥವಾ 20ನೇ ಜೂನ್ 2020ರವರೆಗೆ ಮಾತ್ರ ಖರೀದಿಸಬಹುದಾಗಿದೆ. 21ನೇ ಜೂನ್ 2020 ರಂದು ಯಾವುದೇ ಕನ್ನಡಕಗಳನ್ನು ಮಾರಾಟ ಮಾಡಲಾಗುವುದಿಲ್ಲ.

ಬೆಂಗಳೂರಿನ ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ 26 ಡಿಸೆಂಬರ್ 2019 ರಂದು ಕಂಡ 'ಕಂಕಣ ಸೂರ್ಯ ಗ್ರಹಣ

ಹೆಚ್ಚಿನ ಮಾಹಿತಿ :-

 https://drive.google.com/file/d/1uWAQkedDiALCX7BEKeCaaddJJb2lXs0L/view

"26ನೇ ಡಿಸೆಂಬರ್ 2019 ರಂದು ಸಂಭವಿಸಲಿರುವ ಸೂರ್ಯ ಗ್ರಹಣ ವೀಕ್ಷಣೆಗೆ ಜವಾಹರ್ ಲಾಲ್ ನೆಹರು ತಾರಾಲಯವು ಕೆಳಕಂಡ ಸುರಕ್ಷಿತ ಕ್ರಮಗಳನ್ನು ಕೈಗೊಂಡಿದೆ:"

ಚಂದ್ರ ಕೇವಲ ಸೂರ್ಯನ ಶೇ.90 ಭಾಗ ಆವರಣವನ್ನು ಮಾತ್ರ ಮರೆಮಾಡುವುದರಿಂದ ಡಿಸೆಂಬರ್ 26 ರಂದು ಸಂಭವಿಸಲಿರುವ ಸೂರ್ಯ ಗ್ರಹಣವು ಬೆಂಗಳೂರಿನಲ್ಲಿ ಪಾರ್ಶ್ವ ಗ್ರಹಣವಾಗಿ ಕಾಣಲಿದೆ. ಸೂರ್ಯ ಗ್ರಹಣವು ಸಂಪೂರ್ಣ ಅಥವಾ ಭಾಗಶಃವಾಗಿರಲಿ ಬರಿಗಣ್ಣಿನ ವೀಕ್ಷಣೆಯು ಕಣ್ಣಿಗೆ ಹಾನಿಯುಂಟುಮಾಡುತ್ತದೆ. ತಾರಾಲಯವು ಸುರಕ್ಷಿತ ಸೂರ್ಯ ಗ್ರಹಣ ವೀಕ್ಷಣೆಗೆ ಬೆಳಿಗ್ಗೆ 8 ರಿಂದ 11:15 ರವರೆಗೆ ಹಮ್ಮಿಕೊಂಡಿರುವ ಹಲವು ಸಿದ್ಧತೆಗಳ ಮಾಹಿತಿ ಈ ಕೆಳಕಂಡಂತಿದೆ:-

  1. ಸೂರ್ಯನ ಬಿಂಬವನ್ನು ಪರದೆಯ ಮೇಲೆ ಮೂಡಿಸಲು ಸುಮಾರು 5 ದೂರದರ್ಶಕಗಳಿರುತ್ತವೆ. ಗ್ರಹಣದ ವಿವಿಧ ಹಂತಗಳನ್ನು ವೀಕ್ಷಕರು ಇಲ್ಲಿ ಕಾಣಬಹುದು.
  2. ಸೂರ್ಯನನ್ನು ನೇರವಾಗಿ ವೀಕ್ಷಿಸಲು #14 ವೆಲ್ಡರ್ ಗ್ಲಾಸ್ ಗಳು ಲಭ್ಯವಿರುತ್ತವೆ.
  3. ವಿಶೇಷವಾದ Hα ಫಿಲ್ಟರ್ ಅನ್ನು ಅಳವಡಿಸಿದ ದೂರದರ್ಶಕದ ಮೂಲಕ ಮೂಡಿದ ಚಿತ್ರವನ್ನು ಎಲ್.ಸಿ.ಡಿ. ಮಾನಿಟರ್ ಮೇಲೆ ಪ್ರದರ್ಶಿಸಲಾಗುತ್ತದೆ.
  4. ಸೂರ್ಯ ಗ್ರಹಣದ ಮೂಲಭೂತ ತತ್ವಗಳನ್ನು ಸಾರ್ವಜನಿಕರಿಗೆ ತಿಳಿಸಲು 12' X 6' ಅಳತೆಯ ಭಿತ್ತಿಚಿತ್ರವನ್ನು ಪ್ರದರ್ಶಿಸಲಾಗುತ್ತದೆ.
  5. ಗ್ರಹಣದ ಸಂದರ್ಭವನ್ನು ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಲಾಗುತ್ತದೆ.
  6. ತರಬೇತಿ ಹೊಂದಿದ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಗ್ರಹಣದ ಪ್ರಮಾಣವನ್ನು ಅಂದಾಜಿಸಲಿದ್ದಾರೆ.

ಬಾನಿನಲ್ಲಿ ನಡೆಯುವ ಈ ಆಕರ್ಷಕ ಚಮತ್ಕಾರವನ್ನು ವೀಕ್ಷಿಸಲು ಶುಭ್ರ ಆಕಾಶ ದೊರೆಯಲಿ ಎಂದು ಆಶಿಸೋಣ!

ಸಂಯಮ ಹಾಗೂ ಶಿಸ್ತಿನಿಂದ ವರ್ತಿಸಿ ನಮ್ಮ ಕಾರ್ಯಕ್ರಮವನ್ನು ಸುಗಮವಾಗಿ ನೆರವೇರಿಸಲು ದಯವಿಟ್ಟು ಸಹಕರಿಸಿ ಎಂದು ಕೋರುತ್ತೇವೆ. ನಿಮ್ಮ ಸಹಕಾರಕ್ಕೆ ನಮ್ಮ ಧನ್ಯವಾದಗಳು.

"ಕಂಕಣ ಸೂರ್ಯ ಗ್ರಹಣ"

ಜವಾಹರ್ ಲಾಲ್ ನೆಹರು ತಾರಾಲಯವು ಡಿಸೆಂಬರ್ 20, 2019 ರಂದು ಶಿಕ್ಷಕರಿಗಾಗಿ "ಕಂಕಣ ಸೂರ್ಯ ಗ್ರಹಣ" ಎಂಬ ವಿಷಯದ ಕುರಿತು ಒಂದು ದಿನದ ಕಮ್ಮಟವನ್ನು ಆಯೋಜಿಸಿದೆ.ಸೂರ್ಯ ಮತ್ತು ಚಂದ್ರರ ಕೋನೀಯ ಗಾತ್ರಗಳನ್ನು ಅಂದಾಜಿಸುವುದು, ಆಚ್ಛಾದಿತ ಭಾಗವನ್ನು ಲೆಕ್ಕ ಮಾಡುವುದು, ಗ್ರಹಣದ ಪ್ರಮಾಣವನ್ನು ಅಂದಾಜಿಸುವುದು ಮುಂತಾದವುಗಳನ್ನು ಚಟುವಟಿಕೆಗಳ ಮೂಲಕ ಚರ್ಚಿಸಲಾಗುವುದು. ಸುಮಾರು ರೂ.1500-00ನಷ್ಟು ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಸೂರ್ಯ ಬಿಂಬ ಮೂಡಿಸುವ ಸಾಧನದ ಬಗ್ಗೆಯೂ ಇಲ್ಲಿ ಚರ್ಚಿಸಲಾಗುವುದು. ಗ್ರಹಣವನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಲು ಹಾಗೂ ಚಟುವಟಿಕೆಗಳನ್ನು ನಿರ್ವಹಿಸಲು ಈ ಸಾಧನವು ಉಪಯುಕ್ತವಾಗಿರುತ್ತದೆ.

"ಗ್ರಹಣದ ಗಣಿತ"

ಜವಾಹರ್ ಲಾಲ್ ನೆಹರು ತಾರಾಲಯವು ರಾಷ್ಟ್ರೀಯ ಗಣಿತ ದಿನದ ಅಂಗವಾಗಿ ಡಿಸೆಂಬರ್ 22, 2019 ರಂದು ವಿದ್ಯಾರ್ಥಿಗಳಿಗಾಗಿ "ಕಂಕಣ ಸೂರ್ಯ ಗ್ರಹಣ" ಎಂಬ ವಿಷಯದ ಕುರಿತು ಒಂದು ದಿನದ ಕಮ್ಮಟವನ್ನು ಆಯೋಜಿಸಿದೆ. ಸೂರ್ಯ ಮತ್ತು ಚಂದ್ರರ ಕೋನೀಯ ಗಾತ್ರಗಳನ್ನು ಅಂದಾಜಿಸುವುದು, ಆಚ್ಛಾದಿತ ಭಾಗವನ್ನು ಲೆಕ್ಕ ಮಾಡುವುದು, ಗ್ರಹಣದ ಪ್ರಮಾಣವನ್ನು ಅಂದಾಜಿಸುವುದು ಮುಂತಾದವುಗಳನ್ನು ಚಟುವಟಿಕೆಗಳ ಮೂಲಕ ಚರ್ಚಿಸಲಾಗುವುದು. ಭಾಗವಹಿಸುವ ವಿದ್ಯಾರ್ಥಿಗಳು ಡಿಸೆಂಬರ್ 26 ರಂದು ತಾರಾಲಯದ ಆವರಣದಲ್ಲಿ ಗ್ರಹಣದ ದತ್ತಾಂಶಗಳನ್ನು ಸಂಗ್ರಹಿಸುವ ಅವಕಾಶವಿರುತ್ತದೆ.

ಗ್ರಹಣವನ್ನು ವೀಕ್ಷಿಸುವ ಸೂಕ್ತ ಕನ್ನಡಗಳು ತಾರಾಲಯದ ಆವರಣದಲ್ಲಿನ ಪುಸ್ತಕ ಮಳಿಗೆಯಲ್ಲಿ ರಿಯಾಯಿತಿ ದರ ರೂ.35/- ಕ್ಕೆ ದೊರೆಯಲಿವೆ.

ಗ್ರಹಣವನ್ನು ವೀಕ್ಷಿಸುವ ಸೂಕ್ತ ಕನ್ನಡಗಳು ತಾರಾಲಯದ ಆವರಣದಲ್ಲಿನ ಪುಸ್ತಕ ಮಳಿಗೆಯಲ್ಲಿ ರಿಯಾಯಿತಿ ದರ ರೂ.35/- ಕ್ಕೆ ದೊರೆಯಲಿವೆ. ಆಸಕ್ತರು ಕಛೇರಿಯನ್ನು ಸಂಪರ್ಕಿಸಿ.

ಪಾರ್ಶ್ವ ಚಂದ್ರ ಗ್ರಹಣ

17ನೇ ಜುಲೈ 2019 ರಂದು ಪಾರ್ಶ್ವ ಚಂದ್ರಗ್ರಹಣವಾಗಲಿದೆ. 17ರ ಮುಂಜಾನೆ 01:31 ಕ್ಕೆ ಚಂದ್ರ ಭೂಮಿಯ ದಟ್ಟವಾದ ನೆರಳನ್ನು ಪ್ರವೇಶಿಸುತ್ತದೆ. ಮುಂಜಾನೆ 03:01 ಕ್ಕೆ ಗರಿಷ್ಠ ಮಟ್ಟ ಮತ್ತು 04:29 ಕ್ಕೆ ಮುಕ್ತಾಯವಾಗುತ್ತದೆ. ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡಬಹುದು. ಸಾರ್ವಜನಿಕರು ತಮ್ಮ ಮನೆಯ ಮಾಳಿಗೆಯಿಂದಲೂ ಈ ಘನೆಯನ್ನು ವೀಕ್ಷಿಸಬಹುದಾಗಿದೆ. ಜವಾಹರ್ ಲಾಲ್ ನೆಹರು ತಾರಾಲಯವು ಜುಲೈ 17ರಂದು ಮುಂಜಾನೆ 01:30 ರಿಂದ 04:30 ರವರೆಗೆ ಈ ಖಗೋಳ ವಿದ್ಯಮಾನವನ್ನು ದೂರದರ್ಶಕಗಳ ಮೂಲಕ ವೀಕ್ಷಿಸಲು ಸಿದ್ಧತೆಗಳನ್ನು ಮಾಡಿದೆ. ಮೋಡಗಳ ಅಡಚಣೆ ಇಲ್ಲದಿದ್ದಲ್ಲಿ ವೀಕ್ಷಿಸಬಹುದಾದ್ದರಿಂದ ಆಸಕ್ತರು ಶುಭ್ರ ಆಕಾಶವಿದ್ದಲ್ಲಿ ಮಾತ್ರ ತಾರಾಲಯಕ್ಕೆ ಭೇಟಿ ನೀಡುವುದು ಸೂಕ್ತ.

“ಗ್ರಹಣ

ಜವಾಹರ್ ಲಾಲ್ ನೆಹರು ತಾರಾಲಯವು ಜನಸಾಮಾನ್ಯರಿಗಾಗಿ ದಿನಾಂಕ 25, 26 ಹಾಗೂ 27 ಜುಲೈ 2018 ರಂದು “ಗ್ರಹಣ” ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಮಾದರಿಗಳು ಮತ್ತು ಪ್ರಯೋಗಗಳ ಮೂಲಕ ಗ್ರಹಣದ ಕುರಿತು ಚರ್ಚಿಸಲಾಗುತ್ತದೆ.

ಸ್ಥಳಾವಕಾಶ : 40
ಶುಲ್ಕ: ತಲಾ ರೂ.20/-
ಮೊದಲನೇ ತಂಡ ಮಧ್ಯಾಹ್ನ 1:15 -1:30
ಎರಡನೇ ತಂಡ ಮಧ್ಯಾಹ್ನ 3:15 – 3:30
ಸ್ಥಳ: ನೆಲಮಾಳಿಗೆ

ಪೂರ್ಣ ಚಂದ್ರ ಗ್ರಹಣ

27 ಮತ್ತು 28ನೇ ಜುಲೈ 2018 ರಂದು ಪೂರ್ಣ ಚಂದ್ರಗ್ರಹಣವಾಗಲಿದೆ. 27ರ ರಾತ್ರಿ 11:54ಕ್ಕೆ ಚಂದ್ರ ಭೂಮಿಯ ದಟ್ಟವಾದ ನೆರಳನ್ನು ಪ್ರವೇಶಿಸುತ್ತದೆ. ಮಧ್ಯರಾತ್ರಿ 1:00 ಕ್ಕೆ ಗ್ರಹಣದ ಪೂರ್ಣಾವಸ್ಥೆ ಆರಂಭವಾಗುತ್ತದೆ ಮತ್ತು ಮಧ್ಯರಾತ್ರಿ 02:43ಕ್ಕೆ ಮುಕ್ತಾಯವಾಗುತ್ತದೆ. ಮುಂಜಾವು 03:49ಕ್ಕೆ ಚಂದ್ರ ಭೂಮಿಯ ದಟ್ಟವಾದ ನೆರಳಿನಿಂದ ಸಂಪೂರ್ಣವಾಗಿ ಹೊರಬರುತ್ತದೆ.

ಖಗೋಳೀಯ ಘಟನೆಗಳು

ಖಗ್ರಾಸ ಚಂದ್ರಗ್ರಹಣ – ಆಗಸ್ಟ್ 2017ರ ರಾತ್ರಿ ಸಂಭವಿಸಿತ್ತು. ರಾತ್ರಿ 22:52ಕ್ಕೆ ಆರಂಭಗೊಂಡು 23:50ಕ್ಕೆ ಗರಿಷ್ಠ ಹಂತ ತಲುಪಿ 00:48ಕ್ಕೆ ಮುಕ್ತಾಯವಾಗುವುದು. ಈ ಗ್ರಹಣವನ್ನು ಬರಿಗಣ್ಣಿನಿಂದ ನೋಡಬಹುದಾಗಿದೆ. ತಾರಾಲಯದ ವತಿಯಿಂದ ದೂರದರ್ಶಕಗಳನ್ನು ವ್ಯವಸ್ಥೆ ಮಾಡಲಾಗುವುದು.

ಶುಭ್ರ ಆಕಾಶವಿದ್ದಲ್ಲಿ ಗ್ರಹಣ ವೀಕ್ಷಣೆ ಸಾಧ್ಯವಾಗುತ್ತದೆ. ಸಾರ್ವಜನಿಕರು ಗ್ರಹಣ ಸಂದರ್ಭದಲ್ಲಿ ಶುಭ್ರಾಕಾಶವಿದೆ ಎಂದು ಖಚಿತ ಪಡಿಸಿಕೊಂಡು ದೂರದರ್ಶಕಗಳ ಮೂಲಕ ಗ್ರಹಣ ವೀಕ್ಷಣೆಗೆ ತಾರಾಲಯಕ್ಕೆ ಬರಬಹುದು.

ಹಿಂದಿನ ಘಟನೆಗಳು :

9ನೇ ಜನವರಿ 2017ರಂದು ಪ್ರಕಾಶಮಾನವಾದ ರೋಹಿಣಿ ನಕ್ಷತ್ರವನ್ನು ಚಂದ್ರ ಮರೆಮಾಚುವ ಸನ್ನಿವೇಶ ದೃಶ್ಯ ಘಟಿಸಲಿದೆ. ಅರ್ಧ ಗಂಟೆ (ಸಂಜೆ 6:30 – 7ರವರೆಗೆ) ಸಂಭವಿಸುವ ಈ ಘಟನೆಯನ್ನು ಬರಿಗಣ್ಣಿನಿಂದ ನೋಡಬಹುದು. ಸಾರ್ವಜನಿಕರು ದೂರದರ್ಶಕಗಳ ಮೂಲಕ ಈ ವಿದ್ಯಮಾನವನ್ನು ವೀಕ್ಷಿಸಲು ತಾರಾಲಯವು ವ್ಯವಸ್ಥೆ ಮಾಡಿದೆ. ಇದಕ್ಕಾಗಿ ಯಾವುದೇ ಶುಲ್ಕವಿರುವುದಿಲ್ಲ.

14ನೇ ನವಂಬರ್ 2016ರಂದು 'ದೊಡ್ಡ ಚಂದ್ರ' ವೀಕ್ಷಣೆಗಾಗಿ ತಾರಾಲಯವು ಸೂಕ್ತ ವ್ಯವಸ್ಥೆ ಮಾಡಿದೆ.

9ನೇ ಮೇ 2016ರಂದು ಘಟಿಸುವ "ಬುಧ ಸಂಕ್ರಮಣ" - ಡೌನ್‍ಲೋಡ್ ಮಾಡಬಹುದಾದ ಭಿತ್ತಿ ಚಿತ್ರಗಳು ಸಾರ್ವಜನಿಕರಿಗಾಗಿ, ಬುಧ ಸಂಕ್ರಮಣ'ದ ಘಟನಾವಳಿಯ ವೀಕ್ಷಣೆಗಾಗಿ 9ನೇ ಮೇ 2016ರಂದು ಸಂಜೆ 4:30ರಿಂದ ಸೂರ್ಯಾಸ್ತದವರೆಗೆ ವೀಕ್ಷಿಸಲು ತಾರಾಲಯವು ವ್ಯವಸ್ಥೆ ಮಾಡಿದೆ. ಪ್ರವೇಶ ಉಚಿತ.

ಸಾರ್ವಜನಿಕರಿಗಾಗಿ 6ನೇ ಫೆಬ್ರವರಿ ಯಂದು ಮುಂಜಾನೆ 4:30ರಿಂದ ಸೂರ್ಯೋದಯದವರೆಗೂ ವೀಕ್ಷಿಸಲು ತಾರಾಲಯದಲ್ಲಿ ಉಚಿತ ಆಕಾಶ ವೀಕ್ಷಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


Lunar Eclipse on 31st January 2018 from 16:20 hrs to 21:40 hrs.
Lunar Eclipse kannada

ಹೆಚ್ಚಿನ ಮಾಹಿತಿ: -

 https://www.iiap.res.in//people/personnel/pshastri/grahana/grahana.html

 https://coppermoon18.wordpress.com



ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ.

ದಿನಾಂಕ 7ನೇ ಜನವರಿ 2016ರ ಮುಂಜಾನೆ 4:30ರಿಂದ ಸೂರ್ಯೋದಯದವರೆಗೂ ಆಕಾಶ ವೀಕ್ಷಣಾ ಕಾರ್ಯಕ್ರಮವನ್ನು ಸಾರ್ವಜನಿಕರಿಗಾಗಿ ಏರ್ಪಡಿಸಲಾಗಿದೆ.

ಗ್ರಹಗಳ ಸಂಕ್ರಮಣ, ಸೂರ್ಯಗ್ರಹಣಗಳು, ಧೂಮಕೇತುಗಳ ವೀಕ್ಷಣೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ವ್ಯವಸ್ಥೆ ಕಲ್ಪಿಸಲಾಗುವುದು. ಪೋರ್ಟಬಲ್ ದೂರದರ್ಶಕಗಳನ್ನು ತೆರೆದ ಸ್ಥಳದಲ್ಲಿ ಇರಿಸಿ ವೀಕ್ಷಣೆಗೆ ಅನುಕೂಲ ಮಾಡಿಕೊಲಾಗುವುದು. ಇತರೆ ಪ್ರದೇಶಗಳಲ್ಲಿ ಘಟಿಸುವ ಇಂತಹ ಯಾವುದೇ ಘಟನಾವಳಿಗಳ ನೇರ ವೀಕ್ಷಣೆಗಾಗಿ ಪ್ರಕ್ಷೇಪಕಗಳ ಮೂಲಕ ಬೃಹತ್ ಪರದೆಯ ಮೇಲೆ ಬಿಂಬಿಸಲಾಗುವುದು.

 
×
ABOUT DULT ORGANISATIONAL STRUCTURE PROJECTS